Just In
Don't Miss!
- News
ಎಫ್ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ: ಭಾನುವಾರದ ಪರೀಕ್ಷೆ ಮುಂದೂಡಿಕೆ
- Automobiles
ಮಾನ್ಸ್ಟರ್ ಬೈಕ್ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಡುಕಾಟಿ
- Sports
ಐಎಸ್ಎಲ್: ಕೇರಳ ಬ್ಲಾಸ್ಟರ್ಸ್ vs ಎಫ್ಸಿ ಗೋವಾ, Live ಸ್ಕೋರ್
- Lifestyle
ಮಕರ ರಾಶಿಗೆ ಶುಕ್ರನ ಸಂಚಾರ: ಯಾವೆಲ್ಲಾ ರಾಶಿಗೆ ಶುಕ್ರದೆಸೆ
- Finance
ಮೂರನೇ ತ್ರೈಮಾಸಿಕದಲ್ಲಿ ಭಾರೀ ಲಾಭಗಳಿಸಿದ ರಿಲಯನ್ಸ್ ಇಂಡಸ್ಟ್ರೀಸ್
- Education
NIT Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ ಜೆಆರ್ಎಫ್ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನಾಲ್ಕನೇ ಮಗುವಿಗೆ ತಂದೆಯಾದ ನಟ: ಸಿಕ್ಕಾಪಟ್ಟೆ ಟ್ರೋಲ್ ಆದ ದಂಪತಿ
ತೆಲುಗಿನ ಖ್ಯಾತ ನಟ ಮೋಹನ್ ಬಾಬು ಅವರ ಮಗ ಮಂಚು ವಿಷ್ಣು ದಂಪತಿ ಮತ್ತೊಂದು ಮಗುವಿಗೆ ಜನ್ಮ ನೀಡುತ್ತಿದ್ದಾರೆ. ತಂದೆ-ತಾಯಿಯಾಗುತ್ತಿದ್ದಾರೆ ಎಂಬ ವಿಷಯವನ್ನ ಹಂಚಿಕೊಂಡಾಗ ಅವರ ಅಭಿಮಾನಿಗಳು ಅದನ್ನ ಸಂಭ್ರಮಿಸುತ್ತಾರೆ.
ಆದ್ರೆ, ಮಂಚು ವಿಷ್ಣು ಅವರ ವಿಚಾರದಲ್ಲಿ ಇದು ಟೀಕೆಗೆ ಗುರಿಯಾಗಿದೆ. ಹೌದು, ಸಮಾಜಕ್ಕೆ ಮಾದರಿಯಾಗಬೇಕಿದ್ದ ಈ ರೀತಿ ಮಾಡೋದು ಎಷ್ಟು ಸರಿ ಎಂದು ನೆಟ್ಟಿಗರು ಟ್ರೋಲ್ ಮಾಡ್ತಿದ್ದಾರೆ. ಸದ್ಯ ಮಂಚು ವಿಷ್ಣು ಮತ್ತು ಪತ್ನಿ ವಿರಾನಿಕಗೆ ಮೂರು ಮಕ್ಕಳಿದ್ದಾರೆ.
2009ರಲ್ಲಿ ವಿವಾಹವಾಗಿದ್ದ ವಿರಾನಿಕ ಮತ್ತು ವಿಷ್ಣು ದಂಪತಿಗೆ ಅರಿಯಾನ, ವಿವಿಯಾನ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದು, ಅವಿರಾಮ್ ಎಂಬ ಒಬ್ಬ ಗಂಡು ಮಗ ಕೂಡ ಇದೆ. ಹೀಗಿರುವಾಗ, ಇವರ ಜೊತೆ ಮತ್ತೊಬ್ಬ ಮಗು ಬರಲಿದೆ ಎಂದು ಸಂತಸದ ಸುದ್ದಿ ಹಂಚಿಕೊಂಡಿದ್ದಾರೆ. ಈ ಬೆಳವಣಿಗೆ ಈಗ ಬಗೆಬಗೆಯ ಟ್ರೋಲ್ ಗೆ ಗುರಿಯಾಗಿದೆ. ಮುಂದೆ ಓದಿ.....

ಇದೊಂದು ಸ್ಪೆಷಲ್ ಸಮಯ
''ಒಂದು ವಿಶೇಷವಾದ ಸ್ಥಳದಲ್ಲಿ ಒಂದು ವಿಶೇಷವಾದ ಪ್ರಕಟಣೆ ಇದಾಗಿದೆ. ವಿರಾನಿಕ ಅವರ ಹುಟ್ಟೂರಿನಲ್ಲಿ ನಾವು ಇದ್ದು ಹೇಳುವುದೇನಂದರೆ, ಅರಿ, ವಿವಿ ಮತ್ತು ಅವಿರಾಮ್ ಜೊತೆಗೆ ನಾಲ್ಕನೇ ಏಂಜಲ್ ಬರಲಿದೆ'' ಎಂದು ಟ್ವೀಟ್ ಮೂಲಕ ಅಧಿಕೃತವಾಗಿ ತಿಳಿಸಿದ್ದಾರೆ.

ನಿಮ್ಮಂಥ ಉದ್ಯಮಿ ಬೇಕು
ಮಂಚು ವಿಷ್ಣು ಅವರ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ವ್ಯಕ್ತಿಯೊಬ್ಬ 'ಇದು ಸಂತೋಷದ ಸಮಯ. ಭಾರತಕ್ಕೆ ನಿಮ್ಮಂಥ ಉದ್ಯಮಿಗಳ ಅವಶ್ಯಕತೆ ಇದೆ. ಆದ್ರೆ, ಮತ್ತೊಮ್ಮೆ ಮಗುವಿಗೆ ಜನ್ಮ ನೀಡುವ ಬದಲು ಯಾರನ್ನಾದರೂ ದತ್ತು ಪಡೆಯಬಹುದಿತ್ತು ಅಲ್ವಾ ಬ್ರದರ್.? ನಿಮ್ಮ ಸಹೋದರಿ ಲಕ್ಷ್ಮಿ ರೀತಿ'' ಎಂದು ಹೇಳಿದ್ದಾರೆ.

ಫ್ಯಾಮಿಲಿ ಪ್ಲಾನಿಂಗ್ ಬಗ್ಗೆ ನಿಮಗೆ ತಿಳಿದಿಲ್ವಾ?
''ಸರ್ ಫ್ಯಾಮಿಲಿ ಪ್ಲಾನಿಂಗ್, ಜನಸಂಖ್ಯೆ ನಿಯಂತ್ರಣ ಎಂಬುದೊಂದು ಇದೆ ನಿಮಗೆ ತಿಳಿದಿಲ್ವಾ? ನಿಮ್ಮ ಬಳಿ ಹಣವಿದೆ ಎಂಬ ಕಾರಣಕ್ಕೆ ಇದೆಲ್ಲ ನಡೆಯುತ್ತೆ'' ಎಂದು ಕೆಲವರು ಟೀಕೆ ಮಾಡುತ್ತಿದ್ದಾರೆ.

ಹಾಸ್ಯ ಚಟಾಕಿ
ಕಾಮೆಂಟ್ ಮೂಲಕ ಮಾತ್ರವಲ್ಲದೇ ಕೆಲವೊಂದು ಮೇಮ್ಸ್ ಹಾಕುವ ಮೂಲಕ ಮಂಚು ವಿಷ್ಣು ಅವರ ಕಾಲೆಳೆಯುತ್ತಿದ್ದಾರೆ. ಅದರಲ್ಲಿ ಪ್ರಮುಖವಾಗಿ ಗಮನ ಸೆಳೆಯುತ್ತಿರುವುದು ಬೈಕ್ ಒಂದರಲ್ಲಿ ಗಂಡ-ಹೆಂಡತಿ, ನಾಲ್ಕು ಮಕ್ಕಳು, ಒಂದು ನಾಯಿ ಮತ್ತು ಲೆಗ್ಗಜ್ ಹೊತ್ತುಕೊಂಡು ಹೋಗುತ್ತಿರುವ ಫೋಟೋ.