For Quick Alerts
ALLOW NOTIFICATIONS  
For Daily Alerts

ಮಂಡ್ಯ ಮಹಾ ಸಮರ: ಆರಂಭಿಕ ಮುನ್ನಡೆ ಕಾಯ್ದುಕೊಂಡ ನಿಖಿಲ್ ಕುಮಾರ್

|

ಭಾರಿ ಕುತೂಹಲ ಮೂಡಿಸಿದ್ದ ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ನಿಖಿಲ್ ಕುಮಾರ್ ಆರಂಭಿಕ ಮುನ್ನಡೆ ಕಾಯ್ದುಕೊಂಡಿದ್ದಾರೆ. ಮೊದಲ ಸುತ್ತಿನ ಎಣಿಕೆ ನಂತರ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ 907 ಮತಗಳ ಅಂತರದ ಮುನ್ನಡೆ ಸಾಧಿಸಿದ್ದಾರೆ.

ಆರಂಭದಿಂದಲೂ ಭಾರಿ ಪೈಪೋಟಿ ನೀಡುತ್ತಿರುವ ಸುಮಲತಾ ಅಂಬರೀಶ್ ಕೆಲವೇ ಮತಗಳ ಅಂತರದಿಂದ ಹಿಂದೆ ಬಿದ್ದಿದ್ದಾರೆ. ಅದಕ್ಕೂ ಮುಂಚೆ ಅಂಚೆ ಎಣಿಕೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಮುನ್ನಡೆ ಸಾಧಿಸಿದ್ದರು.

ಲೋಕಸಭೆ ಚುನಾವಣೆ 2019 ಫಲಿತಾಂಶ LIVE : 250 ಕ್ಷೇತ್ರದಲ್ಲಿ NDA ಮುನ್ನಡೆ

ಆದರೆ ಮೊದಲ ಸುತ್ತಿನ ಮತ ಎಣಿಕೆ ಮುಗಿಯುವಷ್ಟರಲ್ಲಿ ಮತ್ತೆ ನಿಖಿಲ್ ಕುಮಾರ್ ಮುನ್ನಡೆ ಸಾಧಿಸಿದ್ದಾರೆ. ಮಂಡ್ಯ ಲೋಕಸಭೆ ಎಣಿಕೆ ಪ್ರತಿಹಂತದಲೂ ಕುತೂಹಲ ಮೂಡಿಸಿದೆ. ಯಾವುದೇ ಹಂತದಲ್ಲೂ ಫಲಿತಾಂಶ ಈ ಕಡೆ, ಆ ಕಡೆ ಆಗುವ ನಿರೀಕ್ಷೆ ಇದೆ.

ಮಂಡ್ಯ ಫಲಿತಾಂಶ LIVE: ಮೊದಲ ಸುತ್ತಿನಲ್ಲಿ ನಿಖಿಲ್ ಗೆ ಮುನ್ನಡೆ

ಚುನಾವಣೆ ಬಳಿಕ ಹೊರಬಿದ್ದಿದ್ದ ಎಕ್ಸಿಟ್ ಪೋಲ್ ನಲ್ಲಿ ಆರು ಸಮೀಕ್ಷೆಗಳು ನಿಖಿಲ್ ಕುಮಾರ್ ಪರವಾಗಿ ಫಲಿತಾಂಶ ನೀಡಿದ್ದರೆ, ಸುಮಲತಾ ಪರವಾಗಿ ನಾಲ್ಕು ಸಮೀಕ್ಷೆಗಳು ಫಲಿತಾಂಶ ಕೊಟ್ಟಿದ್ದವು.

ಆದ್ರೆ, ಸಮೀಕ್ಷೆಗಳನ್ನ ನಾನು ನಂಬಲ್ಲ, ನಮ್ಮ ಪರವಾಗಿ ಜನರು ತೀರ್ಪು ನೀಡಿದ್ದಾರೆ. ನಾನು ಜಯಗಳಿಸುತ್ತೇನೆ ಎಂದು ನಿಖಿಲ್ ಕುಮಾರ್ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದರು.

English summary
Mandya Lok Sabha (MP) Election Result 2019: Sumalatha Ambarish vs Nikhil Kumarasway fight will be decided today. Nikhil kumar gets initial lead in first round count.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more