For Quick Alerts
  ALLOW NOTIFICATIONS  
  For Daily Alerts

  ಕಾವೇರಿ ವಿಶೇಷ ಅಧಿವೇಶನ: 'ಮಂಡ್ಯದ ಗಂಡು' ಅಂಬರೀಶ್ ನಾಪತ್ತೆ

  By Harshitha
  |

  ''ನಾವು ನಿಮ್ಮನ್ನು ನೀರು ಕೇಳಲ್ಲ. ಬೆಳೆಯ ನಷ್ಟಕ್ಕೆ ಪರಿಹಾರ ಕೇಳಲ್ಲ. ಮೈಶುಗರ್ ಆರಂಭ ಮಾಡಿಸಿ ಎಂದು ಕೇಳಲ್ಲ. ರಸ್ತೆ ರಿಪೇರಿ ಮಾಡಿಸಿ ಎಂದು ಕೇಳಲ್ಲ. ಮಂಡ್ಯದ ಜನತೆಗೆ ನಿಮ್ಮನ್ನು ನೋಡಲು ತುಂಬ ಆಸೆಯಾಗಿದೆ. ಎಲ್ಲಿದ್ದರೂ ಪ್ಲೀಸ್..ಪ್ಲೀಸ್ ಬನ್ನಿ''

  - ಹೀಗಂತ ಪರಿ ಪರಿಯಾಗಿ ಬೇಡಿಕೊಂಡಿದ್ದು ಬೇರೆ ಯಾರೋ ಅಲ್ಲ. ರೆಬೆಲ್ ಸ್ಟಾರ್ ಅಂಬರೀಶ್ ಪರ ಮತ ಚಲಾಯಿಸಿದ ಮಂಡ್ಯದ ಮಣ್ಣಿನ ಮಕ್ಕಳು.! ['ಚಕ್ರವರ್ತಿ'ಯಲ್ಲಿ ದರ್ಶನ್ ನ್ಯೂ ಲುಕ್ ಹೇಗಿದೆ, ನೋಡಿದ್ರಾ?]

  ಮಂಡ್ಯ, ಮೈಸೂರು ಸೇರಿದಂತೆ ಕಾವೇರಿ ಕೊಳ್ಳದ ಪ್ರದೇಶಗಳು ಕಳೆದ ಮೂರು ವಾರಗಳಿಂದ ಹೋರಾಟ, ಪ್ರತಿಭಟನೆಗಳಿಂದ ಹೊತ್ತಿ ಉರಿಯುತ್ತಿದ್ದರೂ, ಅದೇ ಮಂಡ್ಯ ಕ್ಷೇತ್ರದ ಶಾಸಕರಾಗಿರುವ ಅಂಬರೀಶ್ ಮಾತ್ರ ಇಲ್ಲಿಯವರೆಗೂ ನಾಪತ್ತೆ.! ವಿಪರ್ಯಾಸ ಅಂದ್ರೆ ಇಂದು ನಡೆದ ವಿಶೇಷ ಅಧಿವೇಶನದಲ್ಲೂ 'ಮಂಡ್ಯದ ಗಂಡು' ಪತ್ತೆ ಆಗಿಲ್ಲ. ಮುಂದೆ ಓದಿ....

  ವಿಶೇಷ ಅಧಿವೇಶನಕ್ಕೆ ಅಂಬರೀಶ್ ಗೈರು

  ವಿಶೇಷ ಅಧಿವೇಶನಕ್ಕೆ ಅಂಬರೀಶ್ ಗೈರು

  ಕಾವೇರಿ ನೀರು ವಿಚಾರವಾಗಿ ಒಂದು ಸಾಲಿನ ನಿರ್ಣಯ ಕೈಗೊಳ್ಳಲು ಇಂದು (ಸೆಪ್ಟೆಂಬರ್ 23, ಶುಕ್ರವಾರ) ವಿಶೇಷ ಅಧಿವೇಶನ ಕರೆಯಲಾಗಿದೆ. ಮಂಡ್ಯ ಕ್ಷೇತ್ರದ ಶಾಸಕರಾಗಿದ್ದರೂ, ಈ ವಿಶೇಷ ಅಧಿವೇಶನದಲ್ಲಿ ಅಂಬರೀಶ್ ಭಾಗವಹಿಸಲಿಲ್ಲ.

  ಮಂಡ್ಯದಲ್ಲಿ ಆಕ್ರೋಶ

  ಮಂಡ್ಯದಲ್ಲಿ ಆಕ್ರೋಶ

  ಕಾವೇರಿ ನೀರಿಗಾಗಿ ನಿರ್ಣಯ ಕೈಗೊಳ್ಳಲು ವಿಶೇಷ ಅಧಿವೇಶನ ಕರೆದಿದ್ದರೂ, ಅದಕ್ಕೆ ಮಂಡ್ಯ ಶಾಸಕ ಅಂಬರೀಶ್ ಗೈರಾಗಿರುವುದಕ್ಕೆ ಮಂಡ್ಯ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  ಅಂಬರೀಶ್ ಎಲ್ಲಿದ್ದಾರೆ?

  ಅಂಬರೀಶ್ ಎಲ್ಲಿದ್ದಾರೆ?

  ಸೆಪ್ಟೆಂಬರ್ ಮೊದಲ ವಾರದಲ್ಲಿ ನಡೆದ 'ಅಕ್ಕ' ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಲು ಅಂಬರೀಶ್ ಪತ್ನಿ ಸಮೇತ ಅಮೇರಿಕಾಗೆ ತೆರಳಿದ್ದರು.

  'ಅಕ್ಕ' ಸಮ್ಮೇಳನ ಮುಗೀತಲ್ಲ.!

  'ಅಕ್ಕ' ಸಮ್ಮೇಳನ ಮುಗೀತಲ್ಲ.!

  'ಅಕ್ಕ' ವಿಶ್ವ ಕನ್ನಡ ಸಮ್ಮೇಳನ ಮುಗಿದ ನಂತರ ಆರೋಗ್ಯ ತಪಾಸಣೆಗಾಗಿ ಅಂಬರೀಶ್ ನ್ಯೂಜೆರ್ಸಿಯಲ್ಲಿ ಇದ್ದರು ಎನ್ನಲಾಗಿದೆ.

  ಅಲ್ಲಿಂದಲೇ ಪತ್ರ ಬರೆದಿದ್ದರು.!

  ಅಲ್ಲಿಂದಲೇ ಪತ್ರ ಬರೆದಿದ್ದರು.!

  ರೈತರು ಸಂಯಮ ಕಳೆದುಕೊಳ್ಳದೆ ಶಾಂತಿಯುತ ಹೋರಾಟ ಮಾಡಬೇಕು ಅಂತ ಅಂಬರೀಶ್ ಪತ್ರ ಬರೆದಿದ್ದರು. ಅದನ್ನ ಪತ್ನಿ ಸುಮಲತಾ ಅಂಬರೀಶ್ ಟ್ವೀಟ್ ಮಾಡಿದ್ದರು.

  English summary
  Congress Politician, Mandya MLA, Kannada Actor, Rebel Star Ambareesh is not present at the special legislative session in the Karnataka Assembly held today (September 23rd) over Cauvery Water Sharing Dispute.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X