»   » ರಾಕಿಂಗ್ ಸ್ಟಾರ್ ಯಶ್ ವಿರುದ್ದ ಮಂಡ್ಯ ಸ್ಟಾರ್ ಪ್ರತಿಭಟನೆ

ರಾಕಿಂಗ್ ಸ್ಟಾರ್ ಯಶ್ ವಿರುದ್ದ ಮಂಡ್ಯ ಸ್ಟಾರ್ ಪ್ರತಿಭಟನೆ

Posted By:
Subscribe to Filmibeat Kannada

ಚಂದನವನದ ರಾಕಿಂಗ್ ಸ್ಟಾರ್ ಯಶ್ ನಟಿಸಿರುವ 'ಮಾಸ್ಟರ್ ಪೀಸ್' ಚಿತ್ರಕ್ಕೆ ರಾಜ್ಯಾದ್ಯಂತ ಭರ್ಜರಿ ಓಪನಿಂಗ್ ಸಿಕ್ಕಿದೆ. ಆದರೆ ಮಂಡ್ಯದಲ್ಲಿ ಚಿತ್ರ ಪ್ರದರ್ಶನ ಮಾಡಬಾರದು ಎಂದು 'ಮಂಡ್ಯ ಸ್ಟಾರ್' ಪ್ರತಿಭಟನೆಗೆ ಕರೆ ಕೊಟ್ಟ ಹಿನ್ನಲೆಯಲ್ಲಿ ಮಂಡ್ಯ ರೈತರು ಬೃಹತ್ ಪ್ರತಿಭಟನೆ ಮಾಡುವ ಮೂಲಕ ವಿಭಿನ್ನ ಸ್ವಾಗತ ನೀಡಿದರು.

ಮಂಜು ಮಾಂಡವ್ಯ ನಿರ್ದೇಶನದ 'ಮಾಸ್ಟರ್ ಪೀಸ್' ಬಿಡುಗಡೆ ಮಾಡಬಾರದು ಎಂದು ಮಂಡ್ಯ ಸ್ಟಾರ್ ಚಿತ್ರತಂಡ ಮತ್ತು ಮಂಡ್ಯ ರೈತರು ಮಂಡ್ಯದ ಗುರುಶ್ರೀ ಚಿತ್ರಮಂದಿರದ ಎದುರು ಪ್ರತಿಭಟನೆ ನಡೆಸಿದರು.[ಟ್ವಿಟ್ಟರ್ ನಲ್ಲಿ 'ಮಾಸ್ಟರ್ ಪೀಸ್' ಚಿಂದಿ ಚಿತ್ರಾನ್ನ]

ನಟ ಯಶ್ ಅವರ ಆಪ್ತ ಸೂರಿ ಎಂಬುವವರು ರೈತರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಮಂಡ್ಯ ರೈತರು ಈ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ವೇಳೆ ಪ್ರತಿಭಟನಾಕಾರರ ಮತ್ತು ಯಶ್ ಅಭಿಮಾನಿಗಳ ನಡುವೆ ಕೆಲಹೊತ್ತು ಮಾತಿನ ಚಕಮಕಿ ನಡೆಯಿತು. ಮುಂದೆ ಓದಿ..

ರೈತರ ವಿರುದ್ಧ ಮಾತಾಡಿದ್ದು ತಪ್ಪು

'ದುಡ್ಡು ಯಾರು ಬೇಕಾದ್ರೂ ಸಂಪಾದನೆ ಮಾಡ್ತಾರೆ, ಆದರೆ ರೈತರ ವಿರುದ್ಧ ಮಾತಾಡಿದ್ದು, ತಪ್ಪಾಯ್ತು ಅಂತ ಇಲ್ಲಿ ಬಂದು ಕ್ಷಮೆ ಕೇಳ್ಬೇಕು. ಅವರ ಅಪ್ಪ ರೈತ ಆದ್ರೆ ಬರ್ತಾನೆ. ಇಲ್ಲಾಂದ್ರೆ ಬರಲ್ಲಾ. ಕೇಳಿದ್ರೆ ನಾನು ಮಂಡ್ಯ ಅಂತಾನೇ.

ಇಲ್ಲೇ ಬಂದು ಕ್ಷಮೆ ಕೇಳಬೇಕು

ಆದರೆ ನಾವು ಇಲ್ಲಿ ಹುಟ್ಟಿ ಇಲ್ಲೇ ಬೆಳೆದವನು, ಅಲ್ಲಿ ಹೋಗಿ ಇಲ್ಲಿ ಬಂದು ನಾನು ಮಂಡ್ಯದವನೆ ಅಂತ ಅನ್ನೋದು ಅಲ್ಲ. ಅವನು ಇಲ್ಲಿ ಬಂದು ಕ್ಷಮೆ ಕೇಳಬೇಕು. ಅವರ ಮನೆ ಬಾಗಿಲಿಗೆ ಹೋದ್ರೆ, ವಾಚ್ ಮನ್ ಕಳಿಸೋದು ಅವರ ಅವ್ವನನ್ನು ಕಳಿಸೋದು ಅವೆಲ್ಲಾ ಏನು ಬೇಡ ಅದೆಲ್ಲಾ ಸೆಕೆಂಡರಿ ಮೊದಲು ಅವನು ಇಲ್ಲೇ ಬಂದು ಕ್ಷಮೆ ಕೇಳಬೇಕು. ಎಂದು ಪ್ರತಿಭಟನಾ ಮುಖಂಡ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.

ಸಿನಿಮಾ ಪೋಸ್ಟರ್ ಗೆ ಬೆಂಕಿ

ಪ್ರತಿಭಟನಾಕಾರರು ಯಶ್ ಅವರ ಭಾವಚಿತ್ರ ಹಾಗೂ ಸಿನಿಮಾದ ಪೋಸ್ಟರ್ ಗಳನ್ನು ನೆಲಕ್ಕೆ ಕೆಡವಿ ಬೆಂಕಿ ಹಚ್ಚಿ ತಮ್ಮ ಆಕ್ರೋಶವನ್ನು ತೀವ್ರವಾಗಿ ವ್ಯಕ್ತಪಡಿಸಿದರು. ಜೊತೆಗೆ ಯಶ್ ವಿರುದ್ಧ ದಿಕ್ಕಾರ ಎಂಬ ಘೋಷಣೆ ಕೂಗಿದರು. ಸ್ಥಳದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

ಸಿನಿಮಾ ಹೌಸ್ ಫುಲ್ ಪ್ರದರ್ಶನ

ಆದರೆ ಇಷ್ಟು ಪ್ರತಿಭಟನೆ ನಡೆಯುತ್ತಿದ್ದರೂ ಕೂಡ ಮಂಡ್ಯದ ಗುರುಶ್ರೀ ಚಿತ್ರಮಂದಿರದಲ್ಲಿ ಮಾತ್ರ ಅಭಿಮಾನಿಗಳು ಮತ್ತು ಪ್ರೇಕ್ಷಕರು ಇದ್ಯಾವುದರ ಪರಿವೆಯೇ ಇಲ್ಲದೇ ಆರಾಮಾವಾಗಿ ಸಿನಿಮಾ ನೋಡುತ್ತಿದ್ದಾರೆ. ಸಿನಿಮಾ ಹೌಸ್ ಫುಲ್ ಪ್ರದರ್ಶನ ಕೂಡ ಕಾಣುತ್ತಿದೆ. ಬೆಳ್ಳಂಬೆಳಗ್ಗೆ ಅಭಿಮಾನಿಗಳು ಯಶ್ ಅವರ ಬೃಹತ್ ಕಟೌಟ್ ಗೆ ಕ್ಷೀರಾಭಿಷೇಕ ಮಾಡಿ ಸಿನಿಮಾ ಬಿಡುಗಡೆಗೆ ಚಾಲನೆ ನೀಡಿದರು.

ರೈತರ ವಿರುದ್ಧ ನಾನೇಕೆ ಕೆಟ್ಟದಾಗಿ ಮಾತಾಡಲಿ

'ನನ್ನ ಸಿನಿಮಾಗಳಾದ 'ಕಿರಾತಕ', 'ರಾಜಾಹುಲಿ', 'ಡ್ರಾಮಾ' ಮುಂತಾದವು ಮಂಡ್ಯ ಜಿಲ್ಲೆಯ ಕುರಿತಾದ ಕತೆಗಳೇ ಆಗಿದ್ದವು. ಈಗ ಅವರ ಬಗ್ಗೆ ನಾನೇಕೆ ಕೆಟ್ಟದಾಗಿ ಮಾತಾಡಬೇಕು?. ಒಬ್ಬ ಸೆಲೆಬ್ರಿಟಿಯಾಗಿ ರೈತರ ವಿರುದ್ಧ ಮಾತನಾಡುವುದಕ್ಕೆ ಆಗುತ್ತಾ?, ಮಂಡ್ಯ ಜನರೇ ನನಗೆ ಕರೆ ಮಾಡಿ ಇದಕ್ಕೆಲ್ಲ ನೀವು ತಲೆ ಕೆಡಿಸಿಕೊಳ್ಳಬೇಡಿ ಎಂದಿದ್ದಾರೆ'.

ಕಾಲ್ ಶೀಟ್ ಕೊಡದಿದ್ದಕ್ಕೆ ಅಪಪ್ರಚಾರ

'ನಾನು ತಪ್ಪು ಮಾಡಿದ್ದರೆ ಅವರ ಕ್ಷಮೆ ಕೇಳುವುದು ನನಗೆ ಕಷ್ಟವೇನೂ ಅಲ್ಲ. ಆದರೆ ಕೆಲವರು ನಾನು ಕಾಲ್ ಶೀಟ್ ಕೊಡದೇ ಇದ್ದ ಕಾರಣ ಅಪಪ್ರಚಾರ ಮಾಡುತ್ತಿರುವುದು ನಿಜಕ್ಕೂ ಬೇಸರದ ಸಂಗತಿ ಎಂದು ಯಶ್ ಕನ್ನಡ ದಿನಪತ್ರಿಕೆ ಒಂದಕ್ಕೆ ಸ್ಪಷ್ಟನೆ ನೀಡಿದ್ದಾರೆ.

English summary
Mandya Star Film team in association with District association of farmers today (Dec.24) protested against screening of 'Masterpiece' film at Guru Theater, Mandya starring actor Yash. Mandya Star demanded an apology from Yash regarding his alleged statement on farmers.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada