»   » ಬಿಗ್ ಎಫ್ಎಂ ನಲ್ಲಿ ಯಶಸ್ವಿ106 ಗಂಟೆಗಳ ಮ್ಯಾರಥಾನ್ ಕಾರ್ಯಕ್ರಮ

ಬಿಗ್ ಎಫ್ಎಂ ನಲ್ಲಿ ಯಶಸ್ವಿ106 ಗಂಟೆಗಳ ಮ್ಯಾರಥಾನ್ ಕಾರ್ಯಕ್ರಮ

Posted By:
Subscribe to Filmibeat Kannada

ಮಂಗಳೂರು ಬಿಗ್ ಎಫ್ಎಂ 92.7 ನ ಆರ್ ಜೆ ರಕ್ಷಿತಾ, ಐಡಿಯಾ ಅರ್ಪಿಸುವ 'ಬಿಗ್ ಆರ್ ಜೆ ಮ್ಯಾರಥಾನ್' ನ 92 ಗಂಟೆಗಳನ್ನು 106 ಗಂಟೆಗಳ ವರೆಗೆ ವಿಸ್ತರಿಸಿ ಯಶಸ್ವಿಯಾಗಿ ಕಾರ್ಯಕ್ರಮ ಮುಗಿಸಿದ್ದಾರೆ.

'ಇಂಡಿಯಾ ಶೇರ್ಸ್ ಇಂಡಿಯಾ ಕೇರ್ಸ್' ಎನ್ನುವ ವಿಷಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬಿಗ್ ಎಫ್ಎಂ ಆರ್ ಜೆ ಗಳು 92 ಗಂಟೆಗಳ ಮ್ಯಾರಥಾನ್ ಕಾರ್ಯಕ್ರಮದಲ್ಲಿ ಇಂಟರ್‌ನೆಟ್ ಶೇರಿಂಗ್ ನ ಬಗ್ಗೆ ನಡೆಸಿದ ಮಾತುಕತೆ ಬಹುಜನರ ಪ್ರಶಂಸೆಗೆ ಪಾತ್ರವಾಯಿತು.

ಇದರಿಂದ ಇನ್ನಷ್ಟು ಉತ್ತೇಜಿತಗೊಂಡ ಆರ್ ಜೆಗಳು ಮುಂದಿನ ದಿನಗಳಲ್ಲಿ ಹೆಚ್ಚಿನ ಆರ್ ಜೆ ಮ್ಯಾರಥಾನ್ ಕಾರ್ಯಕ್ರಮ ನಡೆಸುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

ಜನವರಿ 26ರಂದು ಬೆಳಿಗ್ಗೆ 7 ಗಂಟೆಗೆ ಆರಂಭವಾದ ಕಾರ್ಯಕ್ರಮನ್ನು ಆರ್ ಜೆ ರಕ್ಷಿತಾ 106 ಗಂಟೆ ನಿರಂತರವಾಗಿ ನಡೆಸಿಕೊಟ್ಟು ಜನವರಿ 30 ರಂದು ಸಂಜೆ 5 ಗಂಟೆಗೆ ಯಶಸ್ವಿಯಾಗಿ ಪೂರೈಸಿದರು. ಮುಂದಿನ ಪುಟದಲ್ಲಿ ಕ್ಲಿಕ್ಕಿಸಿ..

ಮಿಸ್ ಕಾಲ್ ನೀಡಿ

ಕಾರ್ಯಕ್ರಮದಲ್ಲಿ ಭಾಗವಹಿಸಿದ ಅತಿಥಿಗಳು ಹಾಗು ಕೇಳುಗರು 180030101927 ಗೆ ಮಿಸ್ ಕಾಲ್ ನೀಡಿ ಇಂಡಿಯಾ ಶೇರ್ಸ್ ಇಂಡಿಯಾ ಕೇರ್ಸ್ ಗೆ ಪ್ರೋತ್ಸಾಹಿಸಿದ್ದು ವಿಶೇಷ.

ಬಡಮಕ್ಕಳಿಗೆ ಒಂದು ಎಂಬಿ ಡೇಟಾ

ಕಾರ್ಯಕ್ರಮದ ಪ್ರಾಯೋಜಕರಾದ ಐಡಿಯಾ ಸಂಥೆಯವರು ಪ್ರತಿ ಮಿಸ್ ಕಾಲಿಗೆ ತಲಾ 1 ಎಂಬಿ ಇಂಟರ್ನೆಟ್ ಡೇಟಾವನ್ನು ಬಡಮಕ್ಕಳಿಗೆ ವಿದ್ಯಾಭ್ಯಾಸ ನೀಡುವ NGOಗಳಿಗೆ ದೇಣಿಗೆಯಾಗಿ ನೀಡಲಿದ್ದಾರೆ.

ಸ್ಥಳೀಯ ಶಾಸಕರ ಭಾಗಿ

ಜನವರಿ 30 ಸಂಜೆ 5 ರ ವೇಳೆಗೆ ದೇಶಾದ್ಯಂತ 5.5ಲಕ್ಷ ಎಂಬಿ ಡೇಟಾ ಸಂಗ್ರಹವಾಗಿತ್ತು. ರಾಜ್ಯ ಆರೋಗ್ಯ ಸಚಿವ ಯು ಟಿ ಖಾದರ್, ಸ್ಥಳೀಯ ಶಾಸಕರಾದ ಜೆ ಆರ್ ಲೋಬೊ, ಮೊಹಿದ್ದೀನ್ ಬಾವ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇತರ ಗಣ್ಯರು

ಅಲ್ಲದೇ, ಗಣೇಶ್ ಕಾರ್ಣಿಕ್, ಟ್ರಾಫಿಕ್ ವಿಭಾಗದ ಎಸಿಪಿ ಉದಯ ನಾಯಕ್ , ಮಂಗಳೂರು ಅಂತರಾಷ್ಟೀಯ ವಿಮಾನ ನಿಲ್ದಾಣದ ಅಧ್ಯಕ್ಷ ರಾಧಾಕೃಷ್ಣ, ಚಲನ ಚಿತ್ರ ನಿರ್ಮಾಪಕ ರಾಜೇಶ್ ಭಟ್ , ಪಣಂಬೂರು ಬೀಚ್ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಯತೀಶ್ ಬೈಕಂಪಾಡಿ , ಚಿತ್ರನಟ ದೇವದಾಸ್ ಕಾಪಿಕಾಡ್ , ಪತ್ರಕರ್ತರು, ಉದ್ಯಮಿಗಳು, ವಿದ್ಯಾರ್ಥಿಗಳು ಈ ಮ್ಯಾರಥಾನ್ ನಲ್ಲಿ ಭಾಗವಹಿಸಿದ್ದರು.

ಆರ್ಜೆಗಳು

92.7 ಬಿಗ್ ಎಫ್ಎಂ ಮ್ಯಾರಥಾನ್ ಕಾರ್ಯಕ್ರಮಕ್ಕೆ RJಗಳಾದ ರಕ್ಷಿತಾ, ಎರಾಲ್ , ರೂಪೇಶ್, ಜಾಯಲ್ ರೆಬೆಲ್ಲೊ , ಆಲ್ಸ್ಟಾನ್, ಕಿರಣ್ ಮತ್ತಿತರರು ಉಪಸ್ಥಿತರಿದ್ದರು.

English summary
Mangaluru 92.7 BIG FM station sets new bench mark with 106-hour Marathon programme.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada