For Quick Alerts
  ALLOW NOTIFICATIONS  
  For Daily Alerts

  ಮನಿಷಾ ಕೋಯಿರಾಲಾ ಮನದಾಳದ ಮಾತುಗಳು

  By Rajendra
  |

  ಬಾಲಿವುಡ್ ತಾರೆ ಮನಿಷಾ ಕೋಯಿರಾಲಾ ಅವರು ಕ್ಯಾನ್ಸರ್ ರೋಗಕ್ಕೆ ತುತ್ತಾಗಿರುವುದು ಗೊತ್ತೇ ಇದೆ. ಆಕೆ ಅಂಡಾಶಯ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಎಂಬುದು ನೆನ್ನೆಯಷ್ಟೇ (ಡಿಸೆಂಬರ್ 6) ವೈದ್ಯಕೀಯ ಪರೀಕ್ಷೆಯಲ್ಲಿ ಗೊತ್ತಾಗಿದೆ.

  ಈ ಬಗ್ಗೆ ಪ್ರತಿಕ್ರಿಯಿಸಿರುವ ಮನಿಷಾ, "ನನ್ನ ಬಗ್ಗೆ ಏನೂ ಚಿಂತಿಸಬೇಡಿ. ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು. ತಮಗೆ ಕ್ಯಾನ್ಸರ್ ಇದೆ ಎಂದು ಗೊತ್ತಾದ ತಕ್ಷಣ ಶಾಕ್ ಆಯಿತು. ಆದರೆ ಜೀವನ ಎಂದರೆ ಇದೇ ರೀತಿಯ ವಿಸ್ಮಯಗಳಿಂದ ಕೂಡಿರುತ್ತದೆ ಅಲ್ಲವೆ..."

  "ನಾನೀಗ ಆರಾಮವಾಗಿಯೇ ಇದ್ದೇನೆ. ಆದರೆ ಮುಂದೇನಾಗುತ್ತದೋ ಗೊತ್ತಿಲ್ಲ. ತಾವೆಲ್ಲರೂ ನನ್ನ ಮೇಲೆ ತೋರಿದ ಪ್ರೀತಿ, ವಿಶ್ವಾಸಕ್ಕೆ ಚಿರಋಣಿಯಾಗಿದ್ದೇನೆ. ತಾನು ಶೀಘ್ರ ಗುಣಮುಖಳಾಗಿ ಹಿಂತಿರುಗುತ್ತೇನೆ" ಎಂದಿದ್ದಾರೆ.

  "ತಮ್ಮ ಬಗ್ಗೆ ಏನೂ ಅನುಕಂಪ ಬೇಡ. ಯಾರೂ ದುಃಖಪಡಬೇಡಿ. ಈ ಬಗ್ಗೆ ನನ್ನ ಗೆಳೆಯ/ಗೆಳತಿಯರಿಗೆಲ್ಲಾ ವಿನಂತಿಸಿಕೊಂಡಿದ್ದೇನೆ. ನಾನೀಗ ಚೆನ್ನಾಗಿಯೇ ಇದ್ದೇನೆ. ಮುಂದೆಯೂ ಚೆನ್ನಾಗಿರುತ್ತೇನೆ. ಈ ಬಗ್ಗೆ ಯಾವುದೇ ಆತಂಕಬೇಡ. ನೀವು ತೋರಿದ ಪ್ರೀತಿ, ವಿಶ್ವಾಸಕ್ಕೆ ಧನ್ಯವಾದಗಳು" ಎಂದು ಪದೇಪದೇ ವಿನಂತಿಸಿಕೊಂಡಿದ್ದಾರೆ.

  ಮನಿಷಾ ಅವರು ನ್ಯೂಯಾರ್ಕ್ ನಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗಲಿದ್ದಾರೆ. ಡಿಸೆಂಬರ್ 10 ರಂದು ಶಸ್ತ್ರಚಿಕಿತ್ಸೆ ನಡೆಯಲಿದೆ ಎಂದು ಮನಿಷಾ ಅವರ ಮ್ಯಾನೇಜರ್ ವಿವರ ನೀಡಿದ್ದಾರೆ. ನವೆಂಬರ್ 28ರಂದು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ ಕ್ಯಾನ್ಸರ್ ಇರುವ ಅಂಶ ಗೊತ್ತಾಗಿತ್ತು. (ಏಜೆನ್ಸೀಸ್)

  English summary
  Manisha Koirala has been diagnosed with ovarian cancer, and she will undergo surgery in New York on December 10. The Bollywood actress is positive she will overcome the disease. She said, with all your love n prayers I'm sure I'll recover..it was shocking to know but then life is full of surprises...

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X