'ಉಪ್ಪಿ ಜೊತೆ ಸಿನಿಮಾ ಮಾಡುವುದು ಪಕ್ಕಾ' ಎಂದ 'ಮಾಸ್ಟರ್ ಪೀಸ್' ನಿರ್ದೇಶಕ!
ನಟ ಉಪೇಂದ್ರ ಜೊತೆ ನಿರ್ದೇಶಕ ಮಂಜು ಮಾಂಡವ್ಯ ಸಿನಿಮಾ ಮಾಡುತ್ತಾರಾ ಇಲ್ವಾ ಎನ್ನುವುದು ದೊಡ್ಡ ಪ್ರಶ್ನೆಯಾಗಿತ್ತು. ಒಂದು ಕಡೆ ಮಂಜು ಮಾಂಡವ್ಯ 'ನಾನು ಉಪ್ಪಿ ಸರ್ ಅವರ 50 ನೇ ಸಿನಿಮಾ ಮಾಡುತ್ತೇನೆ' ಎಂದರೆ, ಇನ್ನೊಂದು ಕಡೆ ಉಪ್ಪಿ ಸಿನಿಮಾ ಬಿಟ್ಟು 'ಪ್ರಜಾಕೀಯ' ಶುರು ಮಾಡಿದ್ದಾರೆ.
ಈ ಗ್ಯಾಪ್ ನಲ್ಲಿ ಉಪೇಂದ್ರ ರವರ 50ನೇ ಸಿನಿಮಾ ಸೆಟ್ಟೇರುತ್ತೋ, ಇಲ್ವೋ ಎಂಬ ಗೊಂದಲದಲ್ಲಿ ಉಪ್ಪಿ ಅಭಿಮಾನಿಗಳು ಇರುವಾಗಲೇ, ನಿರ್ದೇಶಕ ಮಂಜು ಮಾಂಡವ್ಯ ಮೌನ ಮುರಿದಿದ್ದಾರೆ.
ತಮ್ಮ ಹುಟ್ಟುಹಬ್ಬದ ವಿಶೇಷವಾಗಿ ಫೇಸ್ ಬುಕ್ ನಲ್ಲಿ ಒಂದು ವಿಡಿಯೋ ಮಾಡಿರುವ ಮಂಜು ಮಾಂಡವ್ಯ 'ಉಪೇಂದ್ರ ಅವರ ಜೊತೆ ಸಿನಿಮಾ ಮಾಡುವುದು ಪಕ್ಕಾ' ಎಂದು ಹೇಳಿದ್ದಾರೆ. ಮುಂದೆ ಓದಿ...

ಮಂಜು ಮಾಂಡವ್ಯ ಸ್ಪಷ್ಣನೆ
'ಉಪೇಂದ್ರ ಅವರ ಜೊತೆ ಸಿನಿಮಾ ಮಾಡುವುದು ಪಕ್ಕಾ' ಎಂದು 'ಮಾಸ್ಟರ್ ಪೀಸ್' ಖ್ಯಾತಿಯ ನಿರ್ದೇಶಕ ಮಂಜು ಮಾಂಡವ್ಯ ಸ್ಪಷ್ಟ ಪಡಿಸಿದ್ದಾರೆ.

ಎಲ್ಲರೂ ಹೇಳುತ್ತಿದ್ದಾರೆ
''ಎಲ್ಲರೂ ಮುಂದಿನ ಸಿನಿಮಾ ಯಾವುದು? ಉಪೇಂದ್ರ ಸರ್ ಅವರ ಜೊತೆ ಸಿನಿಮಾ ಏನ್ ಆಯ್ತು? ಅಂತ ಕೇಳುತ್ತಿದ್ದಾರೆ. ಜೊತೆಗೆ ಉಪ್ಪಿ ಸರ್ ಅಭಿಮಾನಿಗಳು ಸಹ ನಮ್ಮ ಬಾಸ್ ಜೊತೆ ಸಿನಿಮಾ ಯಾವಾಗ ಮಾಡುತ್ತೀರಾ ಎಂದು ಹೇಳುತ್ತಿದ್ದಾರೆ'' - ಮಂಜು ಮಾಂಡವ್ಯ, ನಿರ್ದೇಶಕ

ಚುನಾವಣೆ ನಂತರ ಸಿನಿಮಾ
''ಉಪ್ಪಿ ಸರ್ ಚುನಾವಣೆಗೆ ಹೋಗಿರುವುದರಿಂದ ಅವರ ಸಿನಿಮಾ ಸದ್ಯಕ್ಕೆ ಮಾಡುವುದಕ್ಕೆ ಆಗುವುದಿಲ್ಲ. ಚುನಾವಣೆ ಮುಗಿದ ನಂತರ ಖಂಡಿತಾ ಆ ಸಿನಿಮಾ ಮಾಡೇ ಮಾಡುತ್ತೇನೆ'' - ಮಂಜು ಮಾಂಡವ್ಯ, ನಿರ್ದೇಶಕ

ಸದ್ಯಕ್ಕೆ ಇನ್ನೊಂದು ಸಿನಿಮಾ
ಉಪೇಂದ್ರ ಅವರ ಚಿತ್ರಕ್ಕೂ ಮುಂಚೆ ಮಂಜು ಮಾಂಡವ್ಯ ಇನ್ನೊಂದು ಸಿನಿಮಾ ಮಾಡಲಿದ್ದು, ಆ ಸಿನಿಮಾದ ನಟರ ಬಗ್ಗೆ ಸದ್ಯದಲ್ಲಿಯೇ ಮಾಹಿತಿ ನೀಡಲಿದ್ದಾರಂತೆ.


Click it and Unblock the Notifications











