For Quick Alerts
  ALLOW NOTIFICATIONS  
  For Daily Alerts

  'ಟಕ್ಕರ್' ಕೊಡಲು ಬರ್ತಿದ್ದಾರೆ ದರ್ಶನ್ ಸಹೋದರ ಸಂಬಂಧಿ

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹೋದರ ಸಂಬಂಧಿ ಮನೋಜ್ ಕುಮಾರ್ ಅಭಿನಯದ 'ಟಕ್ಕರ್' ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿದೆ. ಈಗಾಗಲೆ ಪ್ರಮೋಷನ್ ಕೆಲಸ ಶುರು ಮಾಡಿಕೊಂಡಿರುವ ಚಿತ್ರತಂಡ ಇದೇ ತಿಂಗಳು 21ಕ್ಕೆ 'ಟಕ್ಕರ್' ಚಿತ್ರದ ಟೀಸರ್ ರಿಲೀಸ್ ಮಾಡಲು ಪ್ಲಾನ್ ಮಾಡಿಕೊಂಡಿದೆ.

  ವಿಶೇಷ ಅಂದ್ರೆ 'ಟಕ್ಕರ್' ಸಿನಿಮಾದ ಟೀಸರ್ ಅನ್ನು ನಿರ್ದೇಶಕ ಮತ್ತು ನಟ ದಿನಕರ್ ತೂಗುದೀಪ ರಿಲೀಸ್ ಮಾಡುತ್ತಿದ್ದಾರೆ. 'ಟಕ್ಕರ್' ಹೆಸರೇ ಹೇಳುವ ಹಾಗೆ ಪಕ್ಕಾ ಆಕ್ಷನ್ ಸಿನಿಮಾ. ಮಾಸ್ ಲುಕ್ಕಲ್ಲಿ ಮನೋಜ್ ಮಿಂಚಿದ್ದಾರೆ. ಲುಕ್ ಮತ್ತು ಪೋಸ್ಟರ್ ಗಳ ಮೂಲಕ ಮೊದಲ ಸಿನಿಮಾದಲ್ಲೇ ಚಿತ್ರಪ್ರಿಯರ ಗಮನ ಸೆಳೆದಿರುವ ಮನೋಜ್ 'ಟಕ್ಕರ್' ಟೀಸರ್ ಈಗ ಭಾರಿ ಕುತೂಹಲ ಮೂಡಿಸಿದೆ.

  ಅಂದ್ಹಾಗೆ 'ಟಕ್ಕರ್' ರಘು ಶಾಸ್ತ್ರಿ ನಿರ್ದೇಶನದ ಚಿತ್ರ. ಈ ಮೊದಲು ವಿನಯ್ ರಾಜ್ ಕುಮಾರ್ ಅಭಿನಯದ 'ರನ್ ಆಂಟೋನಿ' ಚಿತ್ರಕ್ಕೆ ನಿರ್ದೇಶನ ಮಾಡಿದ್ದ ರಘು ಶಾಸ್ತ್ರಿ ಈಗ 'ಟಕ್ಕರ್' ಮೂಲಕ ಎರಡನೇ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಹಿಂದೆ 'ಹುಲಿರಾಯ' ಚಿತ್ರವನ್ನು ನಿರ್ಮಾಣ ಮಾಡಿದ್ದ ಕೆ.ಎನ್ ನಾಗೇಶ್ 'ಟಕ್ಕರ್' ಸಿನಿಮಾದ ನಿರ್ಮಾಣದ ಹೊಣೆ ಹೊತ್ತುಕೊಂಡಿದ್ದಾರೆ.

  ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಚಿತ್ರದಲ್ಲಿ ಮನೋಜ್ ಗೆ ನಾಯಕಿಯಾಗಿ ಕಿರುತೆರೆ ನಟಿ ರಂಜಿನಿ ಕಾಣಿಸಿಕೊಂಡಿದ್ದಾರೆ. ಸದ್ಯ ಟೀಸರ್ ಮೂಲಕ 'ಟಕ್ಕರ್' ಕೊಡಲು ಸಿದ್ದವಾಗಿರುವ ಮನೋಜ್ ಸಧ್ಯದಲ್ಲೇ ಚಿತ್ರಮಂದಿರಕ್ಕೆ ಎಂಟ್ರಿ ಕೊಡಲಿದ್ದಾರೆ.

  English summary
  Kannada actor Manoj Kumar starrer 'Takkar' movie teaser release on Aapril 21. Manoj Kumar is relative from Challenging Star Darshan. This teaser will release by Dinakar Thoogudeepa.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X