Don't Miss!
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Sports
U-19 Women's T20 World Cup Final 2023: ಇಂಗ್ಲೆಂಡ್ ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಭಾರತ ವನಿತೆಯರು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Lifestyle
ಫೆಬ್ರವರಿ 2023: ಈ ಮಾಸದಲ್ಲಿರುವ ಪ್ರಮುಖ ಹಬ್ಬಗಳು ಹಾಗೂ ವ್ರತಗಳ ಪಟ್ಟಿ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕೇಜ್ರಿಸ್ಟಾರ್ ರವಿಚಂದ್ರನ್ ಮಗನ ಮದುವೆ ಆಮಂತ್ರಣ ಪತ್ರಿಕೆ ವೈರಲ್? ಪತ್ರಿಕೆಯಲ್ಲಿ ಅಂಥದ್ದೇನಿದೆ ?
ಕ್ರೇಜಿಸ್ಟಾರ್ ರವಿಚಂದ್ರನ್ ಯಾರಿಗೆ ಇಷ್ಟ ಇಲ್ಲಾ ಹೇಳಿ? ಕನ್ನಡ ಚಿತ್ರರಂಗದಲ್ಲಿ ಪ್ರೀತಿ ಪ್ರೇಮ ಪ್ರಣಯಕ್ಕೆ ಹೊಸ ಮೆರುಗನ್ನು ತಮ್ಮ ಅಭಿನಯದ ಮೂಲಕ ನೀಡಿದವರು. ಚಿಕ್ಕವರಿಂದ ವೃದ್ದರವರೆಗೂ ಈಗಲೂ ಅಪಾರ ಅಭಿಮಾನಿಗಳು ರವಿಚಂದ್ರನ್ ಅವರನ್ನು ಇಷ್ಟ ಪಡುತ್ತಾರೆ. ಇನ್ನು ರವಿಚಂದ್ರನ್ ಕೂಡ ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ತಂದೆ ವೀರಸ್ವಾಮಿ ಕಾಲದಿಂದಲೂ ಸಹ ರವಿಚಂದ್ರನ್ ಫ್ಯಾಮಿಲಿ ಕನ್ನಡ ಚಿತ್ರರಂಗಕ್ಕಾಗಿ ದುಡಿಯುತ್ತಾ ಬರುತ್ತಿದೆ. ಈಗ ರವಿಚಂದ್ರನ್ ಮಕ್ಕಳು ಸಹ ಕನ್ನಡ ಚಿತ್ರರಂಗದಲ್ಲೇ ತಮ್ಮ ಸಿನಿ ಜರ್ನಿಯನ್ನು0000 ಆರಂಭಿಸಿದ್ದಾರೆ.
2017 ರಲ್ಲಿ ಮನೋರಂಜನ್ ರವಿಚಂದ್ರನ್ ಕನ್ನಡ ಚಿತ್ರರಂಗಕ್ಕೆ 'ಸಾಹೇಬ' ಚಿತ್ರದ ಮೂಲಕ ಎಂಟ್ರಿ ಕೊಟ್ಟಿದ್ದರು. ಬಳಿಕ 'ಬೃಹಸ್ಪತಿ', 'ಮುಗಿಲ್ ಪೇಟೆ' ಸಿನಿಮಾಗಳ ಮೂಲಕ ಜನರನ್ನು ತಂದೆಯಂತೆಯೇ ರಂಜಿಸಲು ಪ್ರಯತ್ನಿಸಿದ್ದಾರೆ. ಈಗ ಅವರ ಇನ್ನೊಂದು ಸಿನಿಮಾ 'ಪ್ರಾರಂಭ' ಕೂಡ ಬಿಡುಗಡೆಗೆ ಸಜ್ಜಾಗಿದೆ. ಕೋವಿಡ್ ಹಿನ್ನಲೆಯ ಕಾರಣ, ಸಿನಿಮಾದ ಕಾರ್ಯಗಳು ವಿಳಂಬವಾಗಿತ್ತು. ಹೀಗಾಗಿ ಲೇಟಾಗಿ ಬಂದ್ರೂ ಲೇಟೆಸ್ಟಾಗಿ ಚಿತ್ರತಂಡ ಎಂಟ್ರಿ ಕೊಡಲು ಸಿದ್ದವಾಗಿದ್ದು, ಬಿಡುಗಡೆಗೂ ಮುನ್ನವೇ ಚಿತ್ರದ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಕ್ರೇಜಿಸ್ಟಾರ್
ರವಿಚಂದ್ರನ್
ಇನ್ನು
ಮುಂದೆ
ಡಾಕ್ಟರ್
ರವಿಚಂದ್ರನ್:
ಬೆಂಗಳೂರು
ವಿವಿಯಿಂದ
ಗೌರವ
ಅಷ್ಟಕ್ಕೂ ಯಾವುದಪ್ಪಾ ಈ ಪೋಸ್ಟರ್? ಯಾಕೆ ಇಷ್ಟು ವೈರಲ್ ಆಗ್ತಿದೆ ಅಂದುಕೊಂಡಿದ್ದೀರಾ? ಈ ಪೋಸ್ಟರ್‌ನ ವಿಶೇಷತೆಯೇ ಹಾಗಿದೆ. ಇದೇ ಮೊದಲ ಬಾರಿಗೆ ಮದುವೆಯ ಆಮಂತ್ರಣದ ರೀತಿಯಲ್ಲಿ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಈ ಪೋಸ್ಟರ್ ಅನ್ನು ನೋಡಿದ ನೆಟ್ಟಿಗರು ಮೊದಲು ಮನೋರಂಜನ್‌ಗೆ ಮದುವೆ ಫಿಕ್ಸ್ ಆಯ್ತಾ ಅಂದುಕೊಳ್ಳೋದು ಪಕ್ಕಾ. ಆ ರೀತಿ ಸಿನಿಮಾ ಪೋಸ್ಟರ್ ಅನ್ನು ಮದುವೆಯ ಆಮಂತ್ರಣ ಪತ್ರಿಕೆಯಂತೆ ಬಿಡುಗಡೆ ಮಾಡಿದ್ದಾರೆ. ಆದರೆ ಇದರ ಅಸಲಿ ಕಥೆಯೇ ಬೇರೆ ಇದೆ.
ತನ್ನವರಿಗೆ
'ಆಸರೆ'ಯಾದ
ಕ್ರೇಜಿಸ್ಟಾರ್
ಪುತ್ರ:
ಮುಗಿಲ್ಪೇಟೆ
ಸದಸ್ಯರಿಗೆ
ತಲಾ
5
ಸಾವಿರ

ಮದುವೆ ಪತ್ರಿಕೆಯಂತಿರೋ ಸಿನಿಮಾ ಪೋಸ್ಟರ್
2020ರ ಡಿಸೆಂಬರ್‌ನಲ್ಲಿ ಮನೋರಂಜನ್ ಅಭಿನಯದ 'ಪ್ರಾರಂಭ' ಸಿನಿಮಾದ ಟ್ರೈಲರ್ ಬಿಡುಗಡೆಯಾಗಿ ಭಾರೀ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಅಂತೂ ಇಂತೂ ಈಗ ಚಿತ್ರದ ಬಿಡುಗಡೆಯ ದಿನ ಪ್ರಕಟವಾಗಿದ್ದು, ಮೇ 13 ರಂದು ರಾಜ್ಯಾದ್ಯಂತ 'ಪ್ರಾರಂಭ' ಸಿನಿಮಾ ರಿಲೀಸ್ ಆಗಲಿದೆ. ಹೀಗಾಗಿ ಚಿತ್ರತಂಡ ಜನರನ್ನು ಚಿತ್ರಮಂದಿರಕ್ಕೆ ಸೆಳಯಲು ಹೊಸ ಪ್ಲಾನ್ ಮಾಡಿದ್ದು, ಮದುವೆ ಆಮಂತ್ರಣದಂತೆ ಪೋಸ್ಟರ್ ಬಿಡುಗಡೆ ಮಾಡಿದೆ. ಎಲ್ಲರೂ ತಪ್ಪದೇ ಇದೇ ತಿಂಗಳು 13 ನೇ ತಾರೀಕು ನಿಮ್ಮ ಹತ್ತಿರದ ಚಿತ್ರ ಮಂದಿರಗಳಿಗೆ ಬನ್ನಿ ಎಂದು ವಿಭಿನ್ನವಾದ ಪೋಸ್ಟರ್ ಮೂಲಕ ಪ್ರೇಕ್ಷಕರಿಗೆ ಆಹ್ವಾನ ನೀಡಿದೆ. ಈ ಸಿನಿಮಾದಲ್ಲಿ ಮನೋರಂಜನ್ ರವಿಚಂದ್ರನ್‌ಗೆ ಜೋಡಿಯಾಗಿ ಹೊಸ ನಟಿ ಕೀರ್ತಿ ಕಲ್ಕೇರಿ ಅಭಿನಯಿಸುತ್ತಿದ್ದಾರೆ.

ಪಕ್ಕಾ ಮದುವೆ ಪೋಸ್ಟರ್ ಅನ್ಸುತ್ತೆ ಈ ಸಿನಿಮಾ ಪೋಸ್ಟರ್
ಮದುವೆ ಆಮಂತ್ರಣ ಪತ್ರಿಕೆ ನೋಡಿದರೆ, ಡಾ. ರವಿಚಂದ್ರನ್ ಆಶೀರ್ವಾದದೊಂದಿಗೆ ಎಂಬ ಬರಹದೊಂದಿಗೆ ಪ್ರಾರಂಭವಾಗುತ್ತೆ. ಇದರಲ್ಲಿ ಬರೆದಿರುವುದು ಮದುವೆ ಸಮಾಚಾರವಾಲ್ಲ. ಬದಲಾಗಿ ಪಕ್ಕಾ ಸಿನಿಮಾ ವಿಚಾರ. ನೋಡಲು ವೆಡ್ಡಿಂಗ್ ಕಾರ್ಡ್ ತರನೇ ಕಾಣುವ ಈ ಕಾರ್ಡ್ ರೀತಿ ಇರುವ ಪೋಸ್ಟರ್‌ನಲ್ಲಿ ಶ್ರೀ ದೇವರ ಅನುಗ್ರಹದಿಂದ ಹಾಗೂ ಗುರುಹಿರಿಯರ ಕೃಪೆಯಿಂದ ನಮ್ಮ ಸಿನಿಮಾ ಸ್ವಸ್ತಿಶ್ರೀ ವಿಜಯಾಭ್ಯುದಯ ಶ್ರೀ ಶಾಲಿವಾಹನ ಶಕ ವರ್ಷಗಳು 1994ನೇ ಶ್ರೀ ಶುಭಕೃತ ನಾಮ ಸಂವತ್ಸರದ ವೈಶಾಖ ಮಾಸ, ಶುಕ್ಲ ಪಕ್ಷ ದಿನಾಂಕ 13-05-2022ನೇ ಶುಕ್ರವಾರ ನಮ್ಮ ಪ್ರಾರಂಭ ಚಿತ್ರ ಬಿಡುಗಡೆ ಆಗಲಿದೆ ಎಂದು ಬರೆಯಲಾಗಿದೆ.
ಈ ಪೋಸ್ಟರ್ ನ ಮತ್ತೊಂದು ವಿಶೇಷತೆ ಏನಂದ್ರೆ, ನವ ಜೋಡಿಯ ರೀತಿಯಲ್ಲಿ ನಟ- ನಟಿಯ ಹೆಸರನ್ನು ಮುದ್ರಿಸಲಾಗಿದೆ. ಚಿ|ರಾ|ಮನೋರಂಜನ್ ರವಿಚಂದ್ರನ್ (ಶ್ರೀಮತಿ ಸುಮತಿ ಮತ್ತು ಶ್ರೀ ಡಾ. ಕ್ರೇಜಿಸ್ಟಾರ್ ರವಿಚಂದ್ರನ್ ರವರ ಜೇಷ್ಟ ಪುತ್ರ) ಚಿ|ರಾ|ಕು| ಕೀರ್ತಿ ಕಲ್ಕೇರಿ (ಶ್ರೀಮತಿ ಅಶ್ವಿನಿ ರಮೇಶ್ ಕಲ್ಕೇರಿ ಅವರ ಜೇಷ್ಟ ಪುತ್ರಿ) ಎಂದು ಬರೆಯಲಾಗಿದೆ. ಈ ಪೋಸ್ಟರ್ ಅನ್ನು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಭಾರೀ ಟ್ರೆಂಡ್ ಸೃಷ್ಟಿ ಮಾಡ್ತಿದೆ.

20 ರಿಂದ 70 ರ ವಯಸ್ಸಿನವರು ಬಂದು ಸಿನಿಮಾ ನೋಡಿ
ಜೇನುಶ್ರೀ ತನುಷ ಪ್ರೊಡೆಕ್ಷನ್ ನಿರ್ಮಿಸಿರುವ ಮನೋರಂಜನ್ ರವಿಚಂದ್ರನ್ ನಾಯಕನಾಗಿ ಅಭಿನಯಿಸಿರುವ 'ಪ್ರಾರಂಭ' ಸಿನಿಮಾ ಇದೇ ಮೇ 13 ರಂದು ಬಿಡುಗಡೆಗೊಳ್ಳುತ್ತಿದೆ. ಬಹಳ ವಿಭಿನ್ನವಾಗಿ ಸಿನಿ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆದಿರುವ ಸಿನಿತಂಡ ಮುಯ್ಯಿ ನಿಮ್ದು, ಮನಸ್ಸು ಮುಟ್ಟೋ ಕೆಲಸ ನಮ್ಮದು ಎಂದು ಹೇಳುವ ಮೂಲಕ ಎಲ್ಲರ ಗಮನವನ್ನು ಸೆಳೆಯುವಲ್ಲಿ ಚಿತ್ರತಂಡ ಯಶಸ್ವಿಯಾಗಿದೆ.
ಇನ್ನು ಪತ್ರಿಕೆಯಲ್ಲಿ ಇವರ ಪ್ರಾರಂಭ ಚಿತ್ರ ಬಿಡುಗಡೆ ಮಹೋತ್ಸವವನ್ನು ನಡೆಸಲು ನಿರ್ಮಾಣ ಸಂಸ್ಥೆ ಹಾಗೂ ನಿರ್ದೇಶಕರು ಕಷ್ಟ ಪಟ್ಟು, ಇಷ್ಟ ಪಟ್ಟು ನಿಶ್ಚಯಿಸಿರುವುದರಿಂದ ತಾವುಗಳು ತಮ್ಮ ಸುಮಧುರ ಸಮಯವನ್ನು ಎತ್ತಿಟ್ಟು 20 ರಿಂದ 70 ರ ವಯಸ್ಕರು ಕುಟುಂಬ ಸಮೇತರಾಗಿ ಆಗಮಿಸಿ ನಮಗೆ ನಮ್ಮ ಚಿತ್ರಕ್ಕೆ ಆರ್ಶೀವದಿಸಬೇಕಾಗಿ ವಿನಂತಿ ಎಂದು ಸಿನಿ ಕಲಾವಿದರು ಮನಸೋಲುವಂತೆ ಮುದ್ರಿಸಿ ಪ್ರೀತಿಯ ಆಹ್ವಾನ ನೀಡಿದ್ದಾರೆ.

ಪ್ರಾರಂಭ ಚಿತ್ರತಂಡದ ಕ್ರಿಯೇಟಿವಿಟಿಗೆ ನೆಟ್ಟಿಗರು ಫಿದಾ
ಇಷ್ಟೇ ಅಲ್ಲದೆ ಪೋಸ್ಟರ್‌ನ ಕೊನೆಯಲ್ಲಿ ಮನು ಕಲ್ಯಾಟಿ ಈ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದು, ಜಗದೀಶ್ ಕಲ್ಯಾಡಿ ನಿರ್ಮಾಣ ಮಾಡುತ್ತಿದ್ದಾರೆ. ಇವರಿಬ್ಬರು ನಾವೆಲ್ಲಾ ಅಲ್ಪ ಪ್ರಿಯರು, ಕುಬೇರರನ್ನಾಗಿ ಮಾಡುವ ಜವಾಬ್ದಾರಿ ನಿಮ್ಮದು ಎಂದು ಚಿತ್ರಮಂದಿರಕ್ಕೆ ಬರುವಂತೆ ಆಮಂತ್ರಣ ಪತ್ರಿಕೆ ನೀಡುವ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಸಿನಿಮಾ ಬಿಡುಗಡೆಯಲ್ಲೂ ಹೊಸತನದವನ್ನು ತಂದಿರುವ ಪ್ರಾರಂಭ ಚಿತ್ರತಂಡದ ಕಲಾತ್ಮಕತೆಗೆ ನೆಟ್ಟಿಗರು ಅಕ್ಷರಶಃ ಮನಸೋತಿದ್ದಾರೆ. ಒಟ್ಟಾರೆ ಚಿತ್ರತಂಡದ ಈ ಪ್ರೀತಿಯ ಆಹ್ವಾನವನ್ನು ಜನರು ಸ್ವೀಕರಿಸಿ ಚಿತ್ರಮಂದಿರಗಳಿಗೆ ಹೋಗಿ ಸಿನಿಮಾ ನೋಡಲಿ, ಚಿತ್ರ ಅದ್ಧೂರಿಯಾಗಿ ಯಶಸ್ವಿಯಾಗಲಿ ಎಂಬುದೇ ಎಲ್ಲರ ಆಶಯ.