For Quick Alerts
  ALLOW NOTIFICATIONS  
  For Daily Alerts

  ಕೋವಿಡ್ ಮೊದಲ ಲಸಿಕೆ ಪಡೆದ ನಟ ಮನೋರಂಜನ್ ರವಿಚಂದ್ರನ್

  |

  ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ. ಕೊರೊನಾ ಲಸಿಕೆಯ ಮೊದಲ ಡೋಸ್ ಪಡೆದ ನಟ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದಾರೆ.

  ''ನಾನು ಇಂದು ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದುಕೊಂಡೆ. ನೀವು ದಯವಿಟ್ಟು ಲಸಿಕೆ ಹಾಕಿಸಿಕೊಳ್ಳಿ, ನಿಮ್ಮ ಸುರಕ್ಷಿತೆಗಾಗಿ, ನಿಮ್ಮ ಕುಟುಂಬದ ಸುರಕ್ಷಿತೆಗಾಗಿ'' ಎಂದು ಬರೆದುಕೊಂಡಿದ್ದಾರೆ.

  ತನ್ನವರಿಗೆ 'ಆಸರೆ'ಯಾದ ಕ್ರೇಜಿಸ್ಟಾರ್ ಪುತ್ರ: ಮುಗಿಲ್‌ಪೇಟೆ ಸದಸ್ಯರಿಗೆ ತಲಾ 5 ಸಾವಿರತನ್ನವರಿಗೆ 'ಆಸರೆ'ಯಾದ ಕ್ರೇಜಿಸ್ಟಾರ್ ಪುತ್ರ: ಮುಗಿಲ್‌ಪೇಟೆ ಸದಸ್ಯರಿಗೆ ತಲಾ 5 ಸಾವಿರ

  ಮುಗಿಲ್‌ಪೇಟೆ ಚಿತ್ರದ ಶೂಟಿಂಗ್

  ಸದ್ಯ, ಮನೋರಂಜನ್ ರವಿಚಂದ್ರನ್ ಮುಗಿಲ್‌ಪೇಟೆ ಚಿತ್ರದಲ್ಲಿ ಬ್ಯುಸಿ ಇದ್ದಾರೆ. ಭರತ್ ಎಸ್ ನಾವುಂದ ನಿರ್ದೇಶಿಸುತ್ತಿರುವ ಮುಗಿಲ್‌ಪೇಟೆ ಚಿತ್ರದಲ್ಲಿ ಖಯಾದು ಲೋಹರ್ ನಾಯಕಿಯಾಗಿದ್ದಾರೆ. ರಕ್ಷಾ ವಿಜಯಕುಮಾರ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

  ಕಾರ್ಮಿಕರ ಸಂಕಷ್ಟಕ್ಕೆ ಮಿಡಿದ ನಟ

  ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದ್ದ ಮುಗಿಲ್‌ಪೇಟೆ ಸಿನಿಮಾದ ಕಾರ್ಮಿಕ ಹಾಗೂ ತಂತ್ರಜ್ಞರಿಗೆ ಮನೋರಂಜನ್ ಸಹಾಯ ಮಾಡಿದರು. ಮುಗಿಲ್‌ಪೇಟೆ ಸಿನಿಮಾಗಾಗಿ ಕೆಲಸ ಮಾಡಿದ ನೂರು ಸಿಬ್ಬಂದಿಗಳಿಗೆ ತಲಾ 5 ಸಾವಿರ ರೂಪಾಯಿ ನೀಡಿದರು.

  ಹೆಸರು ಬದಲಿಸಿಕೊಂಡ ನಟ

  Recommended Video

  ಪೋಲೀಸ್ ಸ್ಟೇಷನ್ ಗೆ ನಟ ಚೇತನ್ ಅಲೆದಾಟ ಇನ್ನು ನಿಂತಿಲ್ಲ! | Filmibeat Kannada

  ಅಂದ್ಜಾಗೆ, ರವಿಚಂದ್ರನ್ ಮಗ ಮನೋರಂಜನ್ ಎನ್ನುವ ಹೆಸರು ಬದಲಿಸಿಕೊಂಡಿದ್ದಾರೆ. ಮನೋರಂಜನ್ ಬದಲು ಮನು ರಂಜನ್ ಎಂದು ಮರುನಾಮಕರಣ ಮಾಡಿಕೊಂಡಿದ್ದಾರೆ. ಸಂಖ್ಯಾಶಾಸ್ತ್ರದ ಪ್ರಕಾರ ತನ್ನ ಹೆಸರಿನಲ್ಲಿ ಬದಲಾವಣೆ ತರುವುದು ಅಗತ್ಯವಾಗಿತ್ತು. ಹಾಗಾಗಿ, ಹೆಸರು ಬದಲಿಸಿರುವ ಮಾಹಿತಿ ಇದೆ.

  English summary
  Kannada actor Manoranjan got first dose of coronavirus vaccination today (june 25th).
  Saturday, June 26, 2021, 14:43
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X