»   » ಮನೋರಂಜನ್ ಮುಂದಿನ ಚಿತ್ರಕ್ಕೆ 'ರವಿಚಂದ್ರನ್' ಹೆಸರು

ಮನೋರಂಜನ್ ಮುಂದಿನ ಚಿತ್ರಕ್ಕೆ 'ರವಿಚಂದ್ರನ್' ಹೆಸರು

Posted By:
Subscribe to Filmibeat Kannada

ಕ್ರೇಜಿಸ್ಟಾರ್ ಪುತ್ರ ಮನೋರಂಜನ್ ಅಭಿನಯಿಸುತ್ತಿರುವ ಮುಂದಿನ ಚಿತ್ರ 'ವಿಐಪಿ' (ವೃತ್ತಿ ಇಲ್ಲದ ಪದವಿಧರ) ಎನ್ನಲಾಗಿತ್ತು. ಆದ್ರೀಗ, ಈ ಚಿತ್ರದ ಟೈಟಲ್ ಬದಲಾಯಿಸಿದ್ದು, ರವಿಚಂದ್ರನ್ ಹೆಸರಿನಲ್ಲಿ ಶೀರ್ಷಿಕೆ ಇಡಲಾಗಿದೆ.

ಹೌದು, ತಮಿಳಿನಲ್ಲಿ 'ವಿಐಪಿ' (ವೇಲೈ ಇಲೈ ಪಟ್ಟಧಾರಿ) ಎಂಬ ಹೆಸರಿನಲ್ಲಿ ಸಿನಿಮಾ ಮೂಡಿ ಬಂದಿತ್ತು. ಇನ್ನು ಕನ್ನಡದಲ್ಲಿ 'ವಿಐಪಿ' (ವೃತ್ತಿ ಇಲ್ಲದ ಪದವಿಧರ) ಎಂಬ ಹೆಸರು, ತಮಿಳಿನ ಟೈಟಲ್ ಗೆ ಹತ್ತಿರವಾಗಿರುವುದರಿಂದ ಬದಲಾಯಿಸಲಾಗಿದೆ ಎನ್ನುತ್ತಾರೆ ನಿರ್ದೇಶಕರು.

ಹೊಸ ಬೈಕ್ ನಲ್ಲಿ ಅಮ್ಮನ ಜೊತೆ 'ಸಾಹೇಬ' ಮನೋರಂಜನ್ ಸವಾರಿ

 Manoranjan’s new Movie title S/o Ravichandran

ಹೀಗಾಗಿ, ಮನೋರಂಜನ್ ಅವರ ಈ ಚಿತ್ರಕ್ಕೀಗ 'ಸನ್ ಆಫ್ ರವಿಚಂದ್ರನ್' ಎಂದು ಹೊಸ ಟೈಟಲ್ ಇಡಲಾಗಿದೆ. ಇನ್ನು ಈ ಟೈಟಲ್ ನೋಡಿ ರವಿಚಂದ್ರನ್ ಈ ಚಿತ್ರದಲ್ಲಿ ತಂದೆ ಪಾತ್ರ ಮಾಡ್ತಿದ್ದಾರೆ ಎಂದು ಕೊಳ್ಳಬೇಡಿ. ಡೈಲಾಗ್ ಕಿಂಗ್ ಸಾಯಿ ಕುಮಾರ್ ಮನೋರಂಜನ್ ಅವರ ತಂದೆಯಾಗಿ ಕಾಣಿಸಿಕೊಂಡಿದ್ದಾರೆ.

ಇನ್ನು ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಕನ್ನಡದ ಸಂಸ್ಕೃತಿಗೆ ತಕ್ಕಂತೆ ಚಿತ್ರವನ್ನ ಬದಲಾಯಿಸಿಕೊಳ್ಳಲಾಗಿದೆ. ಹಿಂದಿ ಹಾಗೂ ತೆಲುಗು ಚಿತ್ರದಲ್ಲಿ ಗುರುತಿಸಿಕೊಂಡಿರುವ ನಟಿ 'ಮಿಷ್ಠಿ' ಈ ಚಿತ್ರದ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡಿದ್ದಾರೆ.

 Manoranjan’s new Movie title S/o Ravichandran

ನಂದಕಿಶೋರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ವಿ ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ. ರಾಕ್ ಲೈನ್ ವೆಂಕಟೇಶ್ ಈ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದಾರೆ.

English summary
Ravichandran son manoranjan’s upcoming film gets a new title. It was earlier called VIP (Vrutti Illada Padavidara) now it will be S/o Ravichandran.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada