ಗೀತಕ್ಕನ ಕತೆ ಹೇಳಿ ಗೆದ್ದ ಮಂಸೋರೆ ಅಬ್ಬಕ್ಕನ ಕತೆ ಹೇಳಲಿದ್ದಾರೆ
Act-1978 ಸಿನಿಮಾ ನಿರ್ದೇಶಿಸಿ ಸಿನಿಮಾದ ಗೆಲುವಿನ ಖುಷಿಯಲ್ಲಿರುವ ನಿರ್ದೇಶಕ ಮಂಸೋರೆ ತಮ್ಮ ಹೊಸ ಸಿನಿಮಾದ ಘೋಷಣೆ ಮಾಡಿದ್ದಾರೆ.
Act-1978 ಮೂಲಕ ಪ್ರಸ್ತುತ ಸಮಾಜದ ಕತೆ ಹೇಳಿದ್ದ ಮಂಸೋರೆ ತಮ್ಮ ಮುಂದಿನ ಸಿನಿಮಾದಲ್ಲಿ ಇತಿಹಾಸದ ವಿಷಯಕ್ಕೆ ಕೈ ಹಾಕಿದ್ದಾರೆ. ವೀರ ರಾಣಿ ಅಬ್ಬಕ್ಕನ ಕತೆಯನ್ನು ಸಿನಿಮಾ ಮಾಡುವ ಸಾಹಸಕ್ಕೆ ಕೈ ಹಾಕಿದ್ದಾರೆ ಮಂಸೋರೆ ಮತ್ತು ತಂಡ.
'ಮೋಡಗಳೆಲ್ಲಾ ರಕ್ತವರ್ಣ.. ಸಮುದ್ರವೆಲ್ಲ ಅಗ್ನಿಕುಂಡ.. ಭೂಭಾಗದ ತುಂಬೆಲ್ಲಾ ಅಧಿಕಾರದ ದಾಹ, ಸ್ವಾರ್ಥದ ವಿಷದುಸಿರು.. ಬೆನ್ನ ಹಿಂದೆ ಇರಿಯುವ, ಕಣ್ಣ ಮುಂದೆಯೂ ಗುಂಡಿಕ್ಕುವ ಶತ್ರುಗಳು...! ತಾಯಿನಾಡು, ತಮ್ಮತನ, ತನ್ನವರಿಗಾಗಿ ಉಪ್ಪಿನ ಹಬೆಯಲ್ಲಿ ಬಿಸಿನೆತ್ತರ ಹರಿಸಿ ಹೋರಾಡಿ ಇತಿಹಾಸದ ಪುಟಗಳಲ್ಲಿ ಕಂಡು ಕಾಣದಂತೆ ಉಳಿದುಹೋದ ವೀರಚರಿತ್ರೆ - ಅರಬ್ಬೀ ಸಮುದ್ರದ ಅಭಯರಾಣಿ ಅಬ್ಬಕ್ಕ..!!" ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ ಮಂಸೋರೆ.

ನಿಮ್ಮೆಲ್ಲರ ಪ್ರೀತಿ, ಬೆಂಬಲ, ಪ್ರೋತ್ಸಾಹ ಈ ಹೊಸ ಸಾಹಸಕ್ಕೆ ಪ್ರೇರೇಪಿಸಿದೆ. ಎಂದಿನಂತೆ ನಿಮ್ಮ ಆಶೀರ್ವಾದ ಬೆಂಬಲ ನಮ್ಮ ತಂಡದ ಮೇಲಿರಲಿ ಎಂದು ಮನವಿ ಮಾಡಿದೆ ಮಂಸೋರೆ ಮತ್ತು ತಂಡ.
Recommended Video
ಉಲ್ಲಾಳದ ರಾಣಿ ಅಬ್ಬಕ್ಕ ಪೋರ್ಚುಗೀಸರ ವಿರುದ್ಧ ಮಾಡಿದ್ದ ಹೋರಾಟ ಇತಿಹಾಸದಲ್ಲಿ ಅಚ್ಚಳಿಯದೆ ನಿಂತಿದೆ. ಅಷ್ಟೇ ಅಲ್ಲದೆ ಆಕೆಯ ಪ್ರಜಾಪ್ರಭುತ್ವ ಮಾದರಿಯ ಆಡಳಿತ ವೈಖರಿಯ ಬಗ್ಗೆಯೂ ಇತಿಹಾಸದಲ್ಲಿ ಉಲ್ಲೇಖಗಳಿವೆ. ಸರ್ವ ಧರ್ಮ ಸಮನ್ವಯತೆ, ಜನಪರ ಆಡಳಿತಗಳಿಂದ ಖ್ಯಾತ ರಾಗಿದ್ದರು ರಾಣಿ ಅಬ್ಬಕ್ಕ. ಈಗ ವೀರ ರಾಣಿಯ ಕತೆಯನ್ನು ಸಿನಿಮಾ ಮಾಡಲು ಆಯ್ಕೆ ಮಾಡಿಕೊಂಡಿದ್ದಾರೆ ಮಂಸೋರೆ.


Click it and Unblock the Notifications











