For Quick Alerts
  ALLOW NOTIFICATIONS  
  For Daily Alerts

  ಕಾಲಿವುಡ್ ನಲ್ಲಿ ಅರಳಲಿದೆ ಕನ್ನಡದ 'ಕೆಂಡಸಂಪಿಗೆ'

  By Pavithra
  |
  ಕಾಲಿವುಡ್ ನಲ್ಲಿ ಅರಳಲಿದೆ ಕನ್ನಡದ 'ಕೆಂಡಸಂಪಿಗೆ' | Filmibeat Kannada

  ಕೆಂಡ ಸಂಪಿಗೆ ಸಿನಿಮಾ ಮೂಲಕ ಚಂದನವನದಲ್ಲಿ ಭರವಸೆ ಮೂಡಿಸಿದ ನಟಿ ಮಾನ್ವಿತಾ ಹರೀಶ್. ಅಭಿನಯ ಮಾಡಿದ ಮೊದಲ ಚಿತ್ರದಲ್ಲಿ ಕನ್ನಡಿಗ ಮನಸ್ಸು ಗೆದ್ದ ನಟಿ. ಅದಾದ ನಂತರ ಹಲವಾರು ಚಿತ್ರಗಳಲ್ಲಿ ನಟಿಸಿದರೂ ಕೂಡ ಮಾನ್ವಿತಾ ಅಭಿನಯಕ್ಕೆ ತಕ್ಕ ಸಿನಿಮಾ ಎನ್ನಿಸಿದ್ದು ಟಗರು. ಟಗರು ಚಿತ್ರದ ಅಭಿನಯಕ್ಕೆ ಕನ್ನಡ ಚಿತ್ರರಂಗ ಮಾತ್ರವಲ್ಲದೆ ಅಕ್ಕ ಪಕ್ಕದ ಇಂಡಷ್ಟ್ರಿಯವರು ಮನಸೋತ್ತಿದ್ದಾರೆ.

  ಕಳೆದವಾರದಲ್ಲಿ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮ ಸಿನಿಮಾ ನೋಡಿ ಮಾನ್ವಿತಾ ಅಭಿನಯವನ್ನ ಮೆಚ್ಚಿಕೊಂಡಿದ್ದರು. ಅದಷ್ಟೇ ಅಲ್ಲದೆ ಮುಂದಿನ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಲು ಅವಕಾಶ ನೀಡಿ ಎರಡು ಸಾವಿರದ ನೋಟಿನ ಮೇಲೆ ಸಹಿ ಹಾಕಿ ಮಾನ್ವಿತಾ ಅವರಿಗೆ ಕೊಟ್ಟಿದ್ದರು. ಈ ಸುದ್ದಿ ಇನ್ನು ಚಾಲ್ತಿಯಲ್ಲಿರುವಾಗಲೇ ಮಾನ್ವಿತಾ ಅಭಿಮಾನಿಗಳಿಗೆ ಸಿಹಿಯಾದ ಸುದ್ದಿ ಸಿಕ್ಕಿದೆ.

  ಆರ್.ಜಿ.ವಿ ಚಿತ್ರದಲ್ಲಿ ಮಾನ್ವಿತಾ ನಾಯಕಿ: ಸಂಭಾವನೆ ಎಷ್ಟು ಅಂತ ಗೊತ್ತಾದ್ರೆ ಸುಸ್ತಾಗ್ತೀರಾ! ಆರ್.ಜಿ.ವಿ ಚಿತ್ರದಲ್ಲಿ ಮಾನ್ವಿತಾ ನಾಯಕಿ: ಸಂಭಾವನೆ ಎಷ್ಟು ಅಂತ ಗೊತ್ತಾದ್ರೆ ಸುಸ್ತಾಗ್ತೀರಾ!

  ಟಗರು ಪುಟ್ಟಿ ಇನ್ನು ಕೆಲವೇ ದಿನಗಳಲ್ಲಿ ಕಾಲಿವುಡ್ ಅಂಗಳಕ್ಕೆ ಕಾಲಿಡುತ್ತಿದ್ದಾರೆ. ಈಗಾಗಲೇ ತಮಿಳು ಚಿತ್ರರಂಗದಿಂದ ಮಾನ್ವಿತಾ ಅವರಿಗೆ ಆಫರ್ ಗಳು ಬರಲಾರಂಭಿಸಿದ್ದು ಟ್ವಿಟ್ಟರ್ ಫೇಸ್ ಬುಕ್ ನಲ್ಲಿ ಮಾನ್ವಿತಾಗೆ ಕಾಲಿವುಡ್ ಮಂದಿ ಸಂಭ್ರಮದಿಂದ ಬರಮಾಡಿಕೊಳ್ಳುತ್ತಿದ್ದಾರೆ.

  ಆದರೆ ಮಾನ್ವಿತಾ ಯಾವ ಚಿತ್ರದಲ್ಲಿ ಅಭಿನಯ ಮಾಡುತ್ತಿದ್ದಾರೆ ಎನ್ನುವುದರ ಬಗ್ಗೆ ಮಾತ್ರ ಇನ್ನು ಸುಳಿವು ನೀಡಿಲ್ಲ. ಈಗಾಗಲೇ ಸಾಕಷ್ಟು ಕನ್ನಡ ಕಲಾವಿದರು ಕಾಲಿವುಡ್ ನಲ್ಲಿ ಗುರುತಿಸಿಕೊಂಡಿದ್ದು ಮಾನ್ವಿತಾ ಕೂಡ ತಮಿಳು ಚಿತ್ರರಂಗದಲ್ಲಿ ಮಿಂಚು ಹರಿಸಲಿದ್ದಾರೆ ಎನ್ನುವ ಸೂಚನೆಯಂತೂ ಕನ್ನಡಿಗರಿಗೆ ಸಿಕ್ಕಿದೆ.

  ಟಾಲಿವುಡ್ ಅಂಗಳದಲ್ಲಿ ಶುರುವಾಗಲಿದೆ 'ಸುಕ್ಕಾ ಸುರಿ' ದರ್ಬಾರ್ಟಾಲಿವುಡ್ ಅಂಗಳದಲ್ಲಿ ಶುರುವಾಗಲಿದೆ 'ಸುಕ್ಕಾ ಸುರಿ' ದರ್ಬಾರ್

  English summary
  Kannada actress Manvitha Harish got the opportunity in Tamil cinema. Manvitha's Tamil film is about to be informed in a few days.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X