»   » ಕೆಂಡಸಂಪಿಗೆ ಮಾನ್ವಿತಾ ಎದುರು ಅನಿರೀಕ್ಷಿತವಾಗಿ ಡಿ ಬಾಸ್ ಸಿಕ್ಕಾಗ..

ಕೆಂಡಸಂಪಿಗೆ ಮಾನ್ವಿತಾ ಎದುರು ಅನಿರೀಕ್ಷಿತವಾಗಿ ಡಿ ಬಾಸ್ ಸಿಕ್ಕಾಗ..

Posted By:
Subscribe to Filmibeat Kannada
ಕೆಂಡಸಂಪಿಗೆ ಮಾನ್ವಿತಾ ಎದುರು ಅನಿರೀಕ್ಷಿತವಾಗಿ ಡಿ ಬಾಸ್ ಸಿಕ್ಕಾಗ.. | Filmibeat Kannada

ಚಂದನವನದ ಕೆಂಡಸಂಪಿಗೆ ಮಾನ್ವಿತಾ ಹರೀಶ್ ದಸರಾ ಸಂದರ್ಭದಲ್ಲಿ ಮೈಸೂರಿಗೆ ಹೋದಾಗ ಒಂದು ಆಶ್ಚರ್ಯಕರ ಸಂಗತಿ ನಡೆದಿದೆ. ಈ ಬಗ್ಗೆ ಇತ್ತೀಚಿನ ಫೇಸ್ ಬುಕ್ ಲೈವ್ ನಲ್ಲಿ ಮಾನ್ವಿತಾ ಹೇಳಿಕೊಂಡಿದ್ದಾರೆ. ಮಾನ್ವಿತಾ ಹೇಳಿಕೊಂಡಿರುವ ಘಟನೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಸಂಬಂಧ ಪಟ್ಟಿರುವಂತದ್ದು. ಹೌದು ದರ್ಶನ್ ಅವರನ್ನ ಅನಿರೀಕ್ಷಿತವಾಗಿ ಭೇಟಿ ಮಾಡಿದ ಸಂದರ್ಭ ಅದು .

ಮಾನ್ವಿತಾ ಹರೀಶ್ ದಸರಾ ಸಂದರ್ಭದಲ್ಲಿ ಯುವ ದಸರಾದಲ್ಲಿ ಭಾಗಿ ಆಗಲು ಹೋಗಿದ್ದರಂತೆ. ಆಗ ನಿರ್ಮಾಪಕ ಸಂದೇಶ್ ನಾಗರಾಜ್ ಅವರ ಹೋಟೆಲ್ ನಲ್ಲಿ ಉಳಿದುಕೊಂಡಿದ್ದಾರೆ. ಅದೇ ಸಂದರ್ಭದಲ್ಲಿ ದರ್ಶನ್ ಕೂಡ ಮೈಸೂರಿನಲ್ಲೇ ಇದ್ದರಂತೆ. ಮಾನ್ವಿತಾ ಕಾರ್ಯಕ್ರಮಕ್ಕೆ ರೆಡಿಯಾಗಿ ರೂಮ್ ನಿಂದ ಹೊರಟಿದ್ದಾರೆ.

ಮಾನ್ವಿತಾ ರಾತ್ರಿ ಮಲಗುವ ಮುನ್ನ ಲಾಸ್ಟ್ ಮೆಸೇಜ್ ಮಾಡುವುದು ಇವರಿಗೇನೆ

ಕಾರ್ ನಲ್ಲಿ ಬಂದು ಕುಳಿತ ನಂತರ ಮಾನ್ವಿತಾ ಅವರಿಗೆ ಹೋಟೆಲ್ ನವರು ಬಂದು ಮೇಡಂ ಅಲ್ಲಿ ಮೆಟ್ಟಿಲು ಮೇಲೆ ಕುಳಿತವರು ದರ್ಶನ್ ಸರ್ ಎಂದು ತಿಳಿಸಿದ್ದಾರೆ. ತಕ್ಷಣ ಕಾರ್ ನಿಂದ ಇಳಿದು ಹೋದ ಮಾನ್ವಿತಾ ದರ್ಶನ್ ಅವರ ಬಳಿ ಕ್ಷಮೆ ಕೇಳಿ ಮಾತನಾಡಿಸಿಕೊಂಡು ಹೋಗಿದ್ದಾರೆ. ಈ ಘಟನೆಯನ್ನ ನೋಡಿ ಕೆಂಡಸಂಪಿಗೆ ಹುಡುಗಿದೆ ದರ್ಶನ್ ಅವರ ಮೇಲೆ ಅಭಿಮಾನ ಹೆಚ್ಚಾಗಿದೆ.

Manvitha Harish has met Darshan in Mysore

ಅಷ್ಟು ದೊಡ್ಡ ನಟನಾದರೂ ಕೂಡ ಅಷ್ಟು ಸಿಂಪಲ್ ಆಗಿ ಜೀವನವನ್ನೂ ರೂಡಿಸಿಕೊಂಡಿರುತ್ತಾರೆ ಎಂದು ಖುಷಿ ಪಟ್ಟಿದ್ದಾರೆ ಅದರ ಜೊತೆಯಲ್ಲಿ ಅವಕಾಶ ಸಿಕ್ಕರೆ ರ್ಶನ್ ಜೊತೆ ಅಭಿನಯಿಸುತ್ತೀರಾ ಎನದ್ನುವ ಪ್ರಶ್ನೆಗೆ ಹೌದು ಖಂಡಿತವಾಗಿಯೂ ಎಂದು ಉತ್ತರಿಸಿದ್ದಾರೆ ಮಾನ್ವಿತಾ ಹರೀಶ್.

English summary
Kannada actress Manvitha Harish has met Darshan in Mysore and also manvitha said in future if she had a chance to act with him will definitely work with him.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X