For Quick Alerts
  ALLOW NOTIFICATIONS  
  For Daily Alerts

  ಡಯಟ್ ಮಾಡಿ ತೆಳ್ಳಗೆ ಬಳಕುವ ಬಳ್ಳಿಯಂತೆ ಆದ ನಟಿ ಮಾನ್ವಿತಾ ಕಾಮತ್

  By ಫಿಲ್ಮ್ ಡೆಸ್ಕ್
  |

  ಸ್ಯಾಂಡಲ್ ವುಡ್ ನಟಿ ಮಾನ್ವಿತಾ ಕಾಮತ್ ಎಲ್ಲಿ ಹೋಗಿದ್ದಾರೆ ಅಂತ ಕನ್ನಡ ಪ್ರೇಕ್ಷಕರು ಹುಡುಕುತ್ತಿದ್ದಾರೆ. ಸೂಪರ್ ಹಿಟ್ ಟಗರು ಸಿನಿಮಾ ಬಳಿಕ ಮಾನ್ವಿತಾ ಹೆಸರು ಅಷ್ಟಾಗಿ ಗಾಂಧಿನಗರದಲ್ಲಿ ಕೇಳಿಬಂದಿಲ್ಲ. ಟಗರು ನಂತರ ಮಾನ್ವಿತಾ ಸಿನಿಮಾಗಳು ಅಷ್ಟಾಗಿ ಸದ್ದು ಮಾಡಿಲ್ಲ.

  ಹಿಂದಿ, ಮರಾಠಿ ಅಂತ ಉತ್ತರದ ಕಡೆ ಹೊರಟಿದ್ದ ಮಾನ್ವಿತಾ ಇದೀಗ ತೆಲುಗು ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ನಡುವೆ ಟಗರು ಪುಟ್ಟಿ ತೂಕ ಇಳಿಸಿಕೊಂಡು ತೆಳ್ಳಗೆ ಬಳಕುವ ಬಳ್ಳಿಯಂತೆ ಆಗಿದ್ದಾರೆ. ಇತ್ತೀಚಿಗೆ ಮಾನ್ವಿತಾ ಕೊಂಚ ದಪ್ಪ ಆಗಿದ್ದರು. ನಟಿ ಮಣಿಯರಿಗೆ ಫಿಟ್ನೆಸ್ ತುಂಬಾ ಮುಖ್ಯ.

  ತೆಲುಗು ಸಿನಿಮಾರಂಗಕ್ಕೆ ಕಾಲಿಟ್ಟ ಕನ್ನಡದ ಮತ್ತೋರ್ವ ಖ್ಯಾತ ನಟಿತೆಲುಗು ಸಿನಿಮಾರಂಗಕ್ಕೆ ಕಾಲಿಟ್ಟ ಕನ್ನಡದ ಮತ್ತೋರ್ವ ಖ್ಯಾತ ನಟಿ

  ಹಾಗಾಗಿ ಸದಾ ವರ್ಕೌಟ್, ಡಯಟ್ ಅಂತ ಹೆಚ್ಚು ತಲೆ ಕೆಡಿಸಿಕೊಂಡಿರುತ್ತಾರೆ. ಆದರೆ ಮಾನ್ವಿತಾ ಸ್ವಲ್ಪ ದಪ್ಪ ಆಗಿದ್ದರು. ಹಾಗಾಗಿ ಕಳೆದ ಲಾಕ್‌ಡೌನ್‌ನಿಂದ ವರ್ಕೌಟ್ ಮತ್ತು ಡಯಟ್ ಮಾಡಿ ಈಗ ತೆಳ್ಳಗೆ ಆಗಿದ್ದಾರೆ. ಕಳೆದ ಎಂಟು ತಿಂಗಳಿಂದ ಡಯಟ್ ಮಾಡಿ ಈಗ ಫಲಿತಾಂಶ ಹೀಗೆ ಬಂದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

  ಇತ್ತೀಚಿಗಿನ ಫೋಟೋವನ್ನು ಶೇರ್ ಮಾಡಿರುವ ಮಾನ್ವಿತಾ ಕಪ್ಪು ಬಣ್ಣದ ಬಟ್ಟೆ ಧರಿಸಿದ್ದಾರೆ. ಸಖತ್ ಸಣ್ಣ ಆಗಿರುವ ಮಾನ್ವಿತಾ, '8 ತಿಂಗಳಿಂದ ತೂಕ ಇಳಿಸುವ ತರಬೇತಿ. ಡಯಟ್ ಮತ್ತು ಫಲಿತಾಂಶ ಹೇಗಿದೆ ನೋಡಿ' ಎಂದು ಬರೆದುಕೊಂಡಿದ್ದಾರೆ.

  ಮಾನ್ವಿತಾ ಹೊಸ ಲುಕ್‌ಗೆ ಅಭಿಮಾನಿಗಳು ಮತ್ತು ಸಿನಿ ಗಣ್ಯರು ಪ್ರತಿಕ್ರಿಯೆ ನೀಡಿ ವಾವ್.. ಎನ್ನುತ್ತಿದ್ದಾರೆ. ಹಿತಾ, ಆಶಿಕಾ ರಂಗನಾಥ್ ಸೇರಿದಂತೆ ಅನೇಕರು ಮೆಚ್ಚುಗೆಯ ಕಾಮೆಂಟ್ ಮಾಡುತ್ತಿದ್ದಾರೆ.

  ಮಾನ್ವಿತಾ ಸದ್ಯ ಚೊಚ್ಚಲ ತೆಲುಗು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಮಲ್ಲಿ ಮೊದಲೈಂದಿ ಎಂದು ಚಿತ್ರಕ್ಕೆ ಶೀರ್ಷಿಕೆ ಇಡಲಾಗಿದೆ. ಇತ್ತೀಚಿಗಷ್ಟೆ ಚಿತ್ರದ ಮುಹೂರ್ತ ನೆರವೇರಿದ್ದು, ಫೋಟೋವನ್ನು ಹಂಚಿಕೊಂಡು ಸಂತಸ ಪಟ್ಟಿದ್ದರು. ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಬಿಟ್ಟುಕೊಡದ ಮಾನ್ವಿತಾ ಸದ್ಯದಲ್ಲೇ ಹೇಳುವುದಾಗಿ ಹೇಳಿದ್ದಾರೆ.

  ಅಂತೂ ಇಂತೂ ದೊಡ್ಡ ನಿರ್ಧಾರ ತೆಗೆದುಕೊಂಡ ಕ್ರೇಜಿಸ್ಟಾರ್ ರವಿಚಂದ್ರನ್ | Filmibeat Kannada

  ಮಾನ್ವಿತಾ ಕೊನೆಯದಾಗಿ ಕನ್ನಡದಲ್ಲಿ ಇಂಡಿಯಾ V/S ಇಂಗ್ಲೆಂಡ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ರಾಜಸ್ಥಾನ್ ಡೈರಿ ಮತ್ತು ರೈಂಬೊ ಸಿನಿಮಾ ಮುಗಿಸಿರುವ ಮಾನ್ವಿತಾ ಇದೀಗ ತೆಲುಗು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

  English summary
  Actress Manvitha Kamath has lost weight after 8 months of diet.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X