For Quick Alerts
  ALLOW NOTIFICATIONS  
  For Daily Alerts

  ವಿದೇಶದಲ್ಲಿ ಜಾಲಿ ಮೂಡ್ ನಲ್ಲಿದ್ದಾರೆ ಸ್ಯಾಂಡಲ್ ವುಡ್ ನಾಯಕಿಯರು

  By Pavithra
  |

  ಚಂದನವನದ ನಾಯಕಿಯರು ಕಾಣೆ ಆಗಿದ್ದಾರಂತೆ. ಅರೆ ಸಿನಿಮಾ ಬಿಟ್ಟು ಹೀರೋಯಿನ್ಸ್ ಎಲ್ಲರೂ ಎಲ್ಲಿ ಹೋದರು ಅಂತ ಹುಡುಕಿದರೆ ಎಲ್ಲರೂ ಇನ್‌ಸ್ಟಾಗ್ರಾಂನಲ್ಲಿ ಪತ್ತೆ ಆಗಿದ್ದಾರೆ. ಅಂದರೆ ಸ್ಯಾಂಡಲ್ ವುಡ್ ಹೀರೋಯಿನ್ಸ್ ಎಲ್ಲಿದ್ದಾರೆ ಎನ್ನುವುದು ಇನ್‌ಸ್ಟಾಗ್ರಾಂ ನೋಡಿದ ನಂತರ ಗೊತ್ತಾಗಿದೆ.

  ಬೇಸಿಗೆ ಶುರು ಆದ್ರೆ ಸಾಕು ಮಕ್ಕಳಿಗೆ ರಜಾ ಇರುತ್ತೆ. ಅವರನ್ನ ಪ್ರವಾಸಕ್ಕೆ ಕರೆದುಕೊಂಡು ಹೋಗುವುದು ಸಾಮಾನ್ಯ ವಿಚಾರ. ಆದರೆ ಈಗ ಸ್ಯಾಂಡಲ್ ವುಡ್ ನ ನಾಯಕಿಯರು ವಿದೇಶ ಸುತ್ತೋದಕ್ಕೆ ಶುರು ಮಾಡಿದ್ದಾರೆ.

  ಖುಷಿ ಖುಷಿಯಾಗಿ ಫಾರಿನ್ ಟ್ರಿಪ್ ಮಾಡ್ತಿದ್ದಾರೆ ಶ್ವೇತಾ ಚೆಂಗಪ್ಪಖುಷಿ ಖುಷಿಯಾಗಿ ಫಾರಿನ್ ಟ್ರಿಪ್ ಮಾಡ್ತಿದ್ದಾರೆ ಶ್ವೇತಾ ಚೆಂಗಪ್ಪ

  ಹೌದು ಕನ್ನಡದ ಸಾಕಷ್ಟು ನಾಯಕಿಯರು ದೇಶ ಬಿಟ್ಟು ವಿದೇಶದತ್ತ ಮುಖ ಮಾಡಿದ್ದಾರೆ. ಹಲವಾರು ಕಾರಣಕ್ಕೆ ಹೀರೋಯಿನ್ಸ್ ಫಾರಿನ್ ಗೆ ಹೋಗಿದ್ದಾರೆ. ಹಾಗಾದರೆ ಯಾರೆಲ್ಲ ವಿದೇಶದಲ್ಲಿದ್ದಾರೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಮುಂದೆ ಓದಿ

  ಇಟಲಿ ಸುತ್ತುತ್ತಿದ್ದಾರೆ ಶರ್ಮಿಳಾ ಮಾಂಡ್ರೆ

  ಇಟಲಿ ಸುತ್ತುತ್ತಿದ್ದಾರೆ ಶರ್ಮಿಳಾ ಮಾಂಡ್ರೆ

  'ಆಕೆ' ಸಿನಿಮಾದ ನಂತರ ಚಿತ್ರರಂಗದಲ್ಲಿ ಸೈಲೆಂಟ್ ಆಗಿರುವ ನಟಿ ಶರ್ಮಿಳಾ ಮಾಂಡ್ರೆ ಇಟಲಿ ಪ್ರವಾಸ ಮಾಡುತ್ತಿದ್ದಾರೆ. ಶರ್ಮಿಳಾ ತಮ್ಮ ಗೆಳತಿಯರ ಜೊತೆಯ ಫಾರಿನ್ ಟ್ರಿಪ್ ಮಾಡುತ್ತಿದ್ದಾರೆ.

  ಮಲ್ಡೀವ್ಸ್ ನಲ್ಲಿ ಶ್ವೇತಾ ಚೆಂಗಪ್ಪ

  ಮಲ್ಡೀವ್ಸ್ ನಲ್ಲಿ ಶ್ವೇತಾ ಚೆಂಗಪ್ಪ

  ನಟಿ ಹಾಗೂ ನಿರೂಪಕಿ ಶ್ವೇತಾ ಚೆಂಗಪ್ಪ ಮದುವೆಯ ವಾರ್ಷಿಕೋತ್ಸವದ ಸಂತಸದಲ್ಲಿ ಇದ್ದಾರೆ. ಈ ವರ್ಷ ಅವರು ತಮ್ಮ ಮದುವೆ ವಾರ್ಷಿಕೋತ್ಸವವನ್ನು ವಿಶೇಷವಾಗಿ ವಿದೇಶದಲ್ಲಿ ಆಚರಣೆ ಮಾಡಿದ್ದಾರೆ. ಮಲ್ಡೀವ್ಸ್ ನ ಸಮುದ್ರ ತೀರದಲ್ಲಿ ತಮ್ಮ ಪತಿ ಜೊತೆಗೆ ಶ್ವೇತಾ ಫೋಟೋ ಕ್ಲಿಕ್ಕಿಸಿಕೊಂಡು ತಮ್ಮ ಇನ್‌ಸ್ಟಾಗ್ರಾಂ ನಲ್ಲಿ ಹಾಕಿದ್ದಾರೆ.

  ಅಬು ದಾಬಿ ನಲ್ಲಿ ಹುಟ್ಟುಹಬ್ಬ ಮಾಡಿಕೊಂಡ ಮೇಘನಾ

  ಅಬು ದಾಬಿ ನಲ್ಲಿ ಹುಟ್ಟುಹಬ್ಬ ಮಾಡಿಕೊಂಡ ಮೇಘನಾ

  ಚಾರ್ ಮಿನಾರ್ ಬೆಡಗಿ ಮೇಘನಾ ಗಾಂವ್ಕರ್ ಪ್ರವಾಸ ಪ್ರಿಯೆ. ಈ ವರ್ಷದ ತಮ್ಮ ಹುಟ್ಟುಹಬ್ಬವನ್ನು ಅಬು ದಾಬಿನಲ್ಲಿ ಆಚರಣೆ ಮಾಡಿಕೊಂಡಿದ್ದಾರೆ. ಸದ್ಯ ಸೌದಿಯಲ್ಲಿ ಮೇಘನಾ ಸುತ್ತಾಡುತ್ತಿದ್ದಾರೆ.

  ಫ್ರಾನ್ಸ್ ನಲ್ಲಿ ಸುತ್ತಾಡುತ್ತಿದ್ದಾರೆ ಸುಮಲತಾ

  ಫ್ರಾನ್ಸ್ ನಲ್ಲಿ ಸುತ್ತಾಡುತ್ತಿದ್ದಾರೆ ಸುಮಲತಾ

  ನಟಿ ಸುಮಲತಾ ಅಂಬರೀಶ್ ಕೂಡ ವಿದೇಶ ಪ್ರವಾಸ ಮಾಡುತ್ತಿದ್ದಾರೆ. ಸುಮಲತಾ ಅಂಬರೀಶ್ ಫ್ರಾನ್ಸ್ ನಲ್ಲಿರುವ ಫೋಟೋಗಳನ್ನ ಇನ್‌ಸ್ಟಾಗ್ರಾಂ ನಲ್ಲಿ ಅಪ್ಲೋಡ್ ಮಾಡಿದ್ದಾರೆ.

  English summary
  Kannada Actresses Sumalatha, Sharmila Mandre, Megana Gaonkar and Shweta Changappa are On foreign tour..

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X