»   » ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಮರಾಠಿ ಚಿತ್ರ 'ಕಪಾಲಿ'ಯಲ್ಲಿ.!

ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಮರಾಠಿ ಚಿತ್ರ 'ಕಪಾಲಿ'ಯಲ್ಲಿ.!

Posted By:
Subscribe to Filmibeat Kannada

ಕನ್ನಡ ಸಿನಿ ಪ್ರಿಯರಿಗೆ ಇವತ್ತು (ಶುಕ್ರವಾರ) ಸಖತ್ ಬೋರಿಂಗ್. ಯಾಕಂದ್ರೆ, ಹೇಳಿಕೊಳ್ಳುವಂತಹ ಯಾವ ಕನ್ನಡ ಚಿತ್ರವೂ ಇಂದು ಬಿಡುಗಡೆ ಆಗಿಲ್ಲ. ಹೀಗಾಗಿ, ಗಾಂಧಿನಗರ ಇವತ್ತು ಬಿಕೋ ಎನ್ನುತ್ತಿದೆ.

ಕನ್ನಡ ಚಿತ್ರಗಳಿಂದ ಸದಾ ಕಂಗೊಳಿಸುತ್ತಿದ್ದ ಕೆ.ಜಿ.ರೋಡ್ ನ ಪ್ರಮುಖ ಚಿತ್ರಮಂದಿರಗಳಲ್ಲಿ ಒಂದಾದ 'ಕಪಾಲಿ' ಥಿಯೇಟರ್ ನಲ್ಲಿ ಇಂದಿನಿಂದ ಮರಾಠಿ ಚಿತ್ರ 'ಸೈರಾಟ್' ಪ್ರದರ್ಶನ ಕಾಣಲಿದೆ. ದಿನದ ನಾಲ್ಕು ಶೋಗಳು (10.30, 1.30, 4.30, 7.30) 'ಸೈರಾಟ್' ಚಿತ್ರಕ್ಕೆ ಮೀಸಲಾಗಿದೆ. [ಮರಾಠಿ ಚಿತ್ರದ ಮೇಲೆ ರಾಕ್ ಲೈನ್ ವೆಂಕಟೇಶ್ ಕಣ್ಣು ಬಿದ್ದದ್ದು ಹೇಗೆ.?]

marathi-movie-sairat-releases-in-kapali-theater

ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ 'ಕಪಾಲಿ' ಚಿತ್ರಮಂದಿರದಲ್ಲಿ ಮರಾಠಿ ಚಿತ್ರ ಪ್ರದರ್ಶನ ಕಾಣುತ್ತಿರುವುದು ಇದೇ ಮೊದಲು. ಈ ಹಿಂದೆ ತೆಲುಗು, ತಮಿಳು, ಹಿಂದಿ, ಇಂಗ್ಲೀಷ್ ಚಿತ್ರಗಳೂ 'ಕಪಾಲಿ'ಯಲ್ಲಿ ಪ್ರದರ್ಶನ ಕಂಡಿತ್ತು. [ಮರಾಠಿ ರೀಮೇಕ್ ಗೆ ಹೆಗಲು ಕೊಡ್ತಾರಾ ಕಲಾ ಸಾಮ್ರಾಟ್.?]

'ಸೈರಾಟ್' ಸಿನಿಮಾ ಮರಾಠಿ ಚಿತ್ರರಂಗದಲ್ಲಿ ದಾಖಲೆ ಸೃಷ್ಟಿಸಿದೆ. ಅದಕ್ಕೋ ಏನೋ...ಕಲೆಕ್ಷನ್ ಇಲ್ಲದ ಕನ್ನಡ ಚಿತ್ರವೊಂದನ್ನು ಪಕ್ಕಕ್ಕೆ ತಳ್ಳಿ, ಅತಿ ಹೆಚ್ಚು ಸೀಟಿಂಗ್ ವ್ಯವಸ್ಥೆ ಇರುವ 'ಕಪಾಲಿ'ಯಲ್ಲಿ 'ಸೈರಾಟ್' ಗೆ ದಾರಿ ಮಾಡಿಕೊಡಲಾಗಿದೆ.

English summary
Super Hit Marathi Movie 'Sairat' has hit the screens in Kapali Theater today (August 5th). This is the first time, where Marathi movie is released in Kapali.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada