»   » ಕೇರ್ ಆಫ್ ಫುಟ್ ಪಾತ್ ಚಿತ್ರಕ್ಕೆ ಸ್ಪೂರ್ತಿಯಾಗಿದ್ದ ಕಲಾಂ

ಕೇರ್ ಆಫ್ ಫುಟ್ ಪಾತ್ ಚಿತ್ರಕ್ಕೆ ಸ್ಪೂರ್ತಿಯಾಗಿದ್ದ ಕಲಾಂ

Posted By:
Subscribe to Filmibeat Kannada

ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರು ದೇಶಕ್ಕೆ ಮಾಡಿದ್ದು ನಿಸ್ವಾರ್ಥ ಸೇವೆ. ಇವರು ಎಲ್ಲರಿಗೂ ಸ್ಪೂರ್ತಿಯಾಗಿದ್ದರು. ನಾನಂತೂ ಕಲಾಂ ಅವರ ಯೋಜನೆ ಹಾಗೂ ಧ್ಯೇಯೋದ್ದೇಶಗಳಿಂದ ಸ್ಪೂರ್ತಿಯ ಚಿಲುಮೆಯಾಗಿದ್ದೇನೆ ಎಂದು ಸ್ಯಾಂಡಲ್ ವುಡ್ ನಲ್ಲಿ ಬಾಲ ನಟನಾಗಿ ಫೇಮಸ್ ಆಗಿರುವ ಮಾಸ್ಟರ್ ಕಿಶನ್ ಹೇಳಿಕೊಂಡಿದ್ದಾರೆ.

ನಾನು ಮೊದಲು ನಿರ್ದೇಶಿಸಿ ನಟಿಸಿದ ಚಿತ್ರ 'ಕೇರ್ ಆಫ್ ಪುಟ್ ಪಾತ್', ಹೆಸರೇ ಹೇಳುವಂತೆ ಈ ಚಿತ್ರದಲ್ಲಿ ಏನಿರಬಹುದು ಹಾಗು ಚಿತ್ರದ ಕಥೆ ಏನು ಎಂಬುದು 'ಕೇರ್ ಆಫ್ ಪುಟ್ ಪಾತ್' ನೋಡಿದ ಪ್ರೇಕ್ಷಕನಿಗೆ ಅರ್ಥವಾಗುತ್ತದೆ. [ಸ್ಫೂರ್ತಿ ತುಂಬುವ ಡಾ.ಕಲಾಂ ಸ್ಫೂರ್ತಿ ಹೇಳಿಕೆಗಳು]

ಕರ್ನಾಟಕದಾದ್ಯಂತ ಈ ಚಿತ್ರ ನೋಡಿದ ಪ್ರೇಕ್ಷಕರಿಗೆ 'ಕೇರ್ ಆಫ್ ಪುಟ್ ಪಾತ್' ಸ್ಪೂರ್ತಿ ನೀಡಿದೆ. ಎಂದು ಕಿಶನ್ ಹೇಳಿದ್ದಾರೆ.

Master Kishan: Care of Footpath Movie was inspired by Kalam

ನಾನು ಎಲ್ಲೇ ಹೋದರು ಏನೇ ಭಾಷಣ ಮಾಡಿದರೂ ಕೂಡ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಕನಸು ಮತ್ತು ಧ್ಯೇಯ ವಾಕ್ಯಗಳನ್ನು ಹೇಳುತ್ತಿದ್ದೆ. ಹಾಗೂ ಯುವಜನತೆ ಭಾರತವನ್ನು ಉತ್ತಮವಾಗಿ ನಡೆಸಿಕೊಂಡು ಹೋಗಲಿದೆ ಎಂದು ಕಲಾಂ ಅವರು ಕನಸು ಕೂಡ ಕಂಡಿದ್ದರು, ಎಂದು ಕಿಶನ್ ಹೇಳಿಕೊಂಡಿದ್ದಾರೆ.

ಇದೀಗ ಒಬ್ಬ 'ಕ್ಷಿಪಣಿ ಮಾನವ' ಕಲಾಂ ಅವರು ನಮ್ಮನ್ನು ಅಗಲಿರುವುದು ಇಡೀ ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ಒಂದು ಬಾರಿಯಾದರೂ ನಾನು ಅವರನ್ನು ಭೇಟಿ ಮಾಡುತ್ತೇನೆ ಅಂದುಕೊಂಡಿದ್ದೆ ಆದರೆ ಅದು ನನ್ನಿಂದ ಸಾಧ್ಯವಾಗಲಿಲ್ಲ, ಎಂದು ಮಾಸ್ಟರ್ ಕಿಶನ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಭಾರತ ರತ್ನ ಕ್ಷಿಪಣಿ ಮಾನವ, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಸೋಮವಾರ ಸಂಜೆ ವಿಧಿವಶರಾಗಿದ್ದಾರೆ..84 ವರ್ಷ ವಯಸ್ಸಾಗಿದ್ದ ಕಲಾಂ ಅವರು ಶಿಲ್ಲಾಂಗ್ ನಲ್ಲಿ ಉಪನ್ಯಾಸ ನೀಡುವ ಸಂದರ್ಭದಲ್ಲಿ ಕುಸಿದು ಬಿದ್ದಿದ್ದರು.

ನಂತರ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಹೃದಯಾಘಾತಕ್ಕೆ ಒಳಗಾಗಿ ಕೊನೆಯುಸಿರೆಳೆದರು. ಭಾರತದ ಅತ್ಯಂತ ದೊಡ್ಡ ವ್ಯಕ್ತಿತ್ವದ ಒಬ್ಬ ನೇತಾರನನ್ನು ನಾವಿಂದು ಅಗಲಿದ್ದೇವೆ.

English summary
Kannada Child actor Master Kishan first directorial venture, 'Care of Footpath', Kannada movie 'Care of Footpath' Movie was inspired by Dr.A.P.J.Abdul Kalam.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X