»   » ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಪೂರಕವಾಗುವ ತ್ರಿಡಿ ಚಿತ್ರ ಮಾಡಿದ ಮಾಸ್ಟರ್ ಕಿಶನ್

ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಪೂರಕವಾಗುವ ತ್ರಿಡಿ ಚಿತ್ರ ಮಾಡಿದ ಮಾಸ್ಟರ್ ಕಿಶನ್

Posted By:
Subscribe to Filmibeat Kannada

ಬಾಲ ನಟನಾಗಿ ಬೆಳ್ಳಿತೆರೆ ಮೇಲೆ ಮಿಂಚುತ್ತಿದ್ದ ಮಾಸ್ಟರ್ ಕಿಶನ್, ತಮ್ಮ ಒಂಬತ್ತನೇ ವಯಸ್ಸಿಗೆ ಬೀದಿ ಬದಿ ಮಕ್ಕಳಿಗೆ ವಿದ್ಯಾಭ್ಯಾಸ ಒದಗಿಸುವ 'ಕೇರ್ ಆಫ್ ಫುಟ್ ಪಾತ್' ಸಿನಿಮಾ ನಿರ್ದೇಶಿಸಿ ದಾಖಲೆ ಬರೆದಿದ್ದರು.

ಇದೀಗ ಇದೇ ಮಾಸ್ಟರ್ ಕಿಶನ್ ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ತ್ರಿಡಿ ಚಿತ್ರವೊಂದನ್ನ ತಯಾರು ಮಾಡಿದ್ದಾರೆ.

Master Kishan's new 3D movie related to Medical Education

ಮಾನವ ದೇಹದ ಅವಯವಗಳನ್ನು ಮುಟ್ಟಿ ನೋಡಿದ ಕಲ್ಪನೆ ಮೂಡಿಸುವ ಚಿತ್ರಗಳನ್ನು ಮಾಸ್ಟರ್ ಕಿಶನ್ ಅಭಿವೃದ್ಧಿ ಪಡಿಸಿದ್ದಾರೆ. ತ್ರಿಡಿ ತಂತ್ರಜ್ಞಾನದ ಈ ಚಿತ್ರವನ್ನು ವಿನ್ ಫೋರಮೆಕ್ಸ್ ಸಂಸ್ಥೆಯ ಸಹಯೋಗದಲ್ಲಿ ಸಿದ್ಧಪಡಿಸಲಾಗಿದೆ.

''3ಡಿ ತಂತ್ರಜ್ಞಾನವನ್ನು ಮೆಡಿಕಲ್ ಕಾಲೇಜುಗಳಲ್ಲಿ ಬಳಸಿ ವಿದ್ಯಾರ್ಥಿಗಳಿಗೆ ಅತ್ಯಂತ ಸೂಕ್ಷ್ಮ ವಿಷಯಗಳನ್ನು ಸಶಕ್ತವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವ ಹೊಸ ತಂತ್ರಜ್ಞಾನವನ್ನು ಇದೇ ಮೊದಲ ಬಾರಿಗೆ ಆವಿಷ್ಕರಿಸಲಾಗಿದೆ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ 3ಡಿ ತಂತ್ರಜ್ಞಾನವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೂ ತಮ್ಮ ಸೇವೆಗಳಲ್ಲಿ ಬಳಸಿಕೊಳ್ಳಬೇಕು. ದೇಶಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಶಿಕ್ಷಣ ಒದಗಿಸಲು ಇದು ಸಹಕಾರಿ'' ಎನ್ನುತ್ತಾರೆ ಮಾಸ್ಟರ್ ಕಿಶನ್.

ಈಗಾಗಲೇ ಸಚಿವ ಯು.ಟಿ.ಖಾದರ್, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಬಿಡುಗಡೆಗೊಳಿಸಿರುವ ಈ ಚಿತ್ರವನ್ನ ದ.ಕ ಮತ್ತು ಉಡುಪಿ ಜಿಲ್ಲೆಗಳ ವೈದ್ಯಕೀಯ ಉಪನ್ಯಾಸಕರಿಗೆ ತೋರಿಸಲಾಗುತ್ತಿದೆ.

English summary
Master Kishan has come up with a new 3D Technology related to Medical Education.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada