»   » ಬಿಡುಗಡೆಗೆ ಮುನ್ನವೇ 'ಮಾಸ್ಟರ್ ಪೀಸ್' ಟಿಕೆಟ್ ಉಡೀಸ್

ಬಿಡುಗಡೆಗೆ ಮುನ್ನವೇ 'ಮಾಸ್ಟರ್ ಪೀಸ್' ಟಿಕೆಟ್ ಉಡೀಸ್

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನ ಅಣ್ತಮ್ಮ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಮಾಸ್ಟರ್ ಪೀಸ್' ಇದೇ 24 ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆ ಕಾಣುತ್ತಿದ್ದು, ಈಗಾಗಲೇ ಎಲ್ಲಾ ಚಿತ್ರಮಂದಿರಗಳಲ್ಲಿ ಟಿಕೆಟ್ ಬಹುತೇಕ ಸೋಲ್ಡ್ ಔಟ್ ಆಗಿದೆ. ಅಬ್ಬಬ್ಬಾ ಅಂದ್ರೆ ಅಲ್ಲೊಂದು ಇಲ್ಲೊಂದು ಸೀಟ್ ಗಳು ಮಾತ್ರ ಬಾಕಿ ಇವೆ.

ನಿನ್ನೆಯಿಂದ (ಡಿಸೆಂಬರ್ 22) ಬುಕ್ಕಿಂಗ್ ಆರಂಭವಾಗಿದ್ದು, ಕೇವಲ ಎರಡೇ ದಿನಗಳಲ್ಲಿ ಬುಕ್ ಮೈ ಶೋ ನಲ್ಲಿ ಸುಮಾರು 7000 ಟಿಕೆಟ್ ಗಳು ಸೋಲ್ಡ್ ಔಟ್ ಆಗಿದ್ದು, ಇದು ಕನ್ನಡ ಚಿತ್ರರಂಗದಲ್ಲಿ ದಾಖಲೆ ಸೃಷ್ಟಿಸಿದೆ. ಮಾತ್ರವಲ್ಲದೇ ಎಲ್ಲಾ ಮಲ್ಟಿಪ್ಲೆಕ್ಸ್ ಗಳಲ್ಲಿ ಟಿಕೆಟ್ ಸೋಲ್ಡ್ ಔಟ್ ಆಗಿರುವುದರಿಂದ, ಹೆಚ್ಚುವರಿ ಶೋಗಳನ್ನು ನಡೆಸಲಾಗುತ್ತಿದೆ.[ಯಶ್ 'ಮಾಸ್ಟರ್ ಪೀಸ್' ಮೇಲೆ 'ಮಂಡ್ಯ ಸ್ಟಾರ್' ಟಾರ್ಗೆಟ್.!]


'Masterpiece' Advance booking tickets for first 2 days sold out

ನಮ್ಮ ಬೆಂಗಳೂರಿನ ಮುಖ್ಯ ಚಿತ್ರಮಂದಿರ ಸಂತೋಷ್ ಥಿಯೇಟರ್, ಮಾಗಡಿ ರೋಡ್ ಪ್ರಸನ್ನ ಚಿತ್ರಮಂದಿರ, ತಾವರೆಕೆರೆಯ ಬಾಲಾಜಿ ಚಿತ್ರಮಂದಿರ, ಬನಶಂಕರಿಯ ಈಶ್ವರಿ ಚಿತ್ರಮಂದಿರ, ಶ್ರೀ ಶ್ರೀನಿವಾಸ ಚಿತ್ರಮಂದಿರ ಪದ್ಮನಾಭನಗರ, ವೆಂಕಟೇಶ್ವರ ಚಿತ್ರಮಂದಿರ ಅವಲಹಳ್ಳಿ ಗಿರಿನಗರ, ಕಾರ್ನಿವಲ್ ಸಿನಿಮಾಸ್ ರಾಕ್ ಲೈನ್ ಮಾಲ್, ಪಿವಿಆರ್ ಒರೆಯಾನ್ ಮಾಲ್ ರಾಜಾಜಿನಗರ ಮತ್ತು ಗಣೇಶ್ ಚಿತ್ರಮಂದಿರ ಯಲಹಂಕ ನ್ಯೂ ಟೌನ್ ಮುಂತಾದೆಡೆ ಈಗಾಗಲೇ ಬಹುತೇಕ ಎಲ್ಲಾ ಟಿಕೆಟ್ ಗಳು ಸೋಲ್ಡ್ ಔಟ್ ಆಗಿದೆ.[ಯಶ್ 'ಮಾಸ್ಟರ್ ಪೀಸ್' ಬಿಡುಗಡೆಗೆ ನೋ ಪ್ರಾಬ್ಲಂ!!]


ಅದರಲ್ಲೂ ಕಾರ್ನಿವಲ್ ಸಿನಿಮಾಸ್ ರಾಕ್ ಲೈನ್ ಮಾಲ್ ನಲ್ಲಂತೂ ಡಿಸೆಂಬರ್ 24 ರಂದು ಬೆಳ್ಳಂ ಬೆಳಗ್ಗೆ 7 ಗಂಟೆಯಿಂದ ಶುರುವಾಗುವ ಶೋ 7.30, 7.45, 9.30, 10.00, ಹಾಗೂ ಮಧ್ಯಾಹ್ನ 12.30, 1 ಘಂಟೆ, 3.30 4 ಘಂಟೆ, ಸಂಜೆ 7 ಘಂಟೆ ಹಾಗೂ ರಾತ್ರಿ 10 ಘಂಟೆವರೆಗೂ ಮುಂದುವರಿಯಲಿದ್ದು, ಒಟ್ನಲ್ಲಿ ಇಡೀ ದಿನ ಯಶ್ ಅವರ 'ಮಾಸ್ಟರ್ ಪೀಸ್' ದರ್ಬಾರ್ ನಡೆಯಲಿದೆ.


'Masterpiece' Advance booking tickets for first 2 days sold out

ಬನಶಂಕರಿ ಈಶ್ವರಿ ಚಿತ್ರಮಂದಿರದಲ್ಲಿ ಬೆಳಗ್ಗೆ 7.30 ಕ್ಕೆ ಆರಂಭಗೊಳ್ಳುವ ಶೋ 11.15 ಮಧ್ಯಾಹ್ನ 2.30 ಸಂಜೆ 6.15 ಮತ್ತು ರಾತ್ರಿ 9.30 ಕ್ಕೆ ಕೊನೆಗೊಳ್ಳಲಿದೆ. ಪದ್ಮನಾಭ ನಗರದ ಶ್ರೀ ಶ್ರೀನಿವಾಸ ಚಿತ್ರಮಂದಿರದಲ್ಲಿ ಬೆಳಗ್ಗೆ 11.15 ಕ್ಕೆ ಶುರುವಾಗುವ ಶೋ ಮಧ್ಯಾಹ್ನ 2.15 ಸಂಜೆ 6.15 ಮತ್ತು ರಾತ್ರಿ 9.15 ಕ್ಕೆ ಮುಗಿಯಲಿದೆ.[ವಿದೇಶದಲ್ಲಿ 'ಮಾಸ್ಟರ್ ಪೀಸ್' ಶೈನಿಂಗ್ ಯಾವಾಗ?]


ಒಟ್ನಲ್ಲಿ ಈಗಾಗಲೇ ಎಲ್ಲಾ ಕಡೆ ಚಿತ್ರಮಂದಿರಗಳು ಚಿತ್ರಬಿಡುಗಡೆಗೆ ಮುನ್ನವೇ ಹೌಸ್ ಫುಲ್ ಬೋರ್ಡ್ ನೇತು ಹಾಕುವ ಸಾಧ್ಯತೆ ಹೆಚ್ಚಿದ್ದು, ರಾಕಿಂಗ್ ಸ್ಟಾರ್ ಯಶ್ ಅವರು ಮತ್ತೊಮ್ಮೆ ಎಲ್ಲಾ ದಾಖಲೆಗಳನ್ನು ಬ್ರೇಕ್ ಮಾಡುವ ಮೂಲಕ ಇತಿಹಾಸ ಸೃಷ್ಟಿಸಲಿದ್ದಾರೆ ಅನ್ನೋದು ಮಾತ್ರ ಪಕ್ಕಾ.

English summary
Yash's 'Masterpiece' gets bigger and better with each passing day, Advance booking for the First Two days already sold out says Bookmyshow website data. More than 7,000 tickets booked for the movie in many Multiplex theaters which sets a new record in Kannada Film Industry.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada