»   » 'ಮಾಸ್ತಿಗುಡಿ' ಟ್ರೈಲರ್ ಬಿಡುಗಡೆಗೆ ಮುಹೂರ್ತ ಫಿಕ್ಸ್!

'ಮಾಸ್ತಿಗುಡಿ' ಟ್ರೈಲರ್ ಬಿಡುಗಡೆಗೆ ಮುಹೂರ್ತ ಫಿಕ್ಸ್!

Posted By:
Subscribe to Filmibeat Kannada

ದುನಿಯಾ ವಿಜಯ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಮಾಸ್ತಿಗುಡಿ', ಕ್ಲೈಮ್ಯಾಕ್ಸ್ ದುರಂತದ ನಂತರ ಸೈಲಾಂಟ್ ಆಗಿತ್ತು. ಕ್ಲೈಮ್ಯಾಕ್ಸ್ ಚಿತ್ರೀಕರಣ ವೇಳೆ ಅನಿಲ್ ಹಾಗೂ ಉದಯ್ ಸಾವನ್ನಪ್ಪಿದ್ದರು. ಸಾಹಸ ನಿರ್ದೇಶಕ ರವಿವರ್ಮ, ಚಿತ್ರ ನಿರ್ದೇಶಕ ನಾಗಶೇಖರ್ ಜೈಲು ಸೇರಿದ್ದರು. ದುನಿಯಾ ವಿಜಯ್ ಅವರಿಗೆ ವಾಣಿಜ್ಯ ಮಂಡಳಿ ತಾತ್ಕಾಲಿಕ ನಿರ್ಬಂಧ ಹೇರಿತ್ತು.['ಮಾಸ್ತಿ ಗುಡಿ' ತಂಡದ ಮೇಲೆ ಹೇರಿದ್ದ ನಿರ್ಬಂಧ ವಾಪಸ್ ಪಡೆದ ಕೆ.ಎಫ್.ಸಿ.ಸಿ ]

ಈಗ, ಈ ಎಲ್ಲ ಸಮ್ಯಸೆಗಳಿಂದ ಹೊರಬಂದಿರುವ 'ಮಾಸ್ತಿಗುಡಿ' ಚಿತ್ರತಂಡ, ಕನ್ನಡ ಚಿತ್ರಪ್ರೇಮಿಗಳಿಗೆ ಸಿಹಿಸುದ್ದಿಯೊಂದನ್ನ ನೀಡಿದೆ. ಹೌದು, ಕ್ಲೈಮ್ಯಾಕ್ಸ್ ದುರಂತದಿಂದ ಸ್ಥಗಿತಗೊಂಡಿದ್ದ 'ಮಾಸ್ತಿಗುಡಿ', ಈಗ ಚಿತ್ರದ ಟ್ರೈಲರ್ ಬಿಡುಗಡೆ ಮಾಡಲು ನಿರ್ಧರಿಸಿದೆ.

Mastigudi Trailer Release On Duniya Vijay's Birthday

ಜನವರಿ 20 ರಂದು ನಟ ದುನಿಯಾ ವಿಜಯ್ ಅವರ ಹುಟ್ಟುಹಬ್ಬವಿದೆ. ಈ ಸಂತಸದ ಸಂದರ್ಭದಲ್ಲಿ 'ಮಾಸ್ತಿಗುಡಿ' ಚಿತ್ರದ ಟ್ರೈಲರ್ ರಿಲೀಸ್ ಮಾಡಲು ಚಿತ್ರತಂಡ ಯೋಚಿಸಿದೆ. ಹೀಗಾಗಿ ಜನವರಿ 20ನೇ ತಾರೀಖು ಮಧ್ಯರಾತ್ರಿ 12 ಗಂಟೆಗೆ ಟ್ರೈಲರ್ ರಿಲೀಸ್ ಆಗಲಿದೆ.['ಮಾಸ್ತಿಗುಡಿ' ಚಿತ್ರದ ಅಸಲಿ ಕಥೆ ಮತ್ತು ಚಿತ್ರಕಥೆ ಏನು? ]

Mastigudi Trailer Release On Duniya Vijay's Birthday

ಅಂದ್ಹಾಗೆ, 'ಮಾಸ್ತಿಗುಡಿ' ಒಂದು ನೈಜಕಥೆಯಾಗಿದ್ದು, ಬಹುತೇಕ ಚಿತ್ರೀಕರಣ ಮುಗಿದಿದೆ. ಚಿತ್ರದಲ್ಲಿ ನಾಯಕ ನಟ ವಿಜಿ, ಮೂರು ವಿಭಿನ್ನ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದು, ಯುವಕ, ಮಧ್ಯ ವಯಸ್ಸಿನ ವ್ಯಕ್ತಿ ಹಾಗೂ ಮುದುಕನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಾಗಶೇಖರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಗೋಲ್ಡನ್ ಕ್ವೀನ್ ಅಮೂಲ್ಯ ಮತ್ತು ಕೃತಿಕರಬಂಧ ನಾಯಕಿಯರಾಗಿ ನಟಿಸಿದ್ದಾರೆ.['ಮಾಸ್ತಿ ಗುಡಿ' ಖಳನಟರ ದುರಂತ ಸಾವು: ದುರ್ಘಟನೆಯ ಸಂಪೂರ್ಣ ವಿವರ]

English summary
Kannada Movie Mastigudi Trailer Release On Duniya Vijay's Birthday. Duniya Vijay Celebrating his 43rd Birthday On January 20th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada