For Quick Alerts
  ALLOW NOTIFICATIONS  
  For Daily Alerts

  ಮಯೂರಿ ಅವರತಾರಕ್ಕೆ ಬೆಚ್ಚಿಬಿದ್ದ ಸಂಚಾರಿ ವಿಜಯ್

  By Pavithra
  |

  ನಟಿ ಮಯೂರಿ ಸದ್ಯ ಜರ್ಮನಿಯಲ್ಲಿ ಜಾಲಿಯಾಗಿ ಸುತ್ತಾಡುತ್ತಿದ್ದಾರೆ. ಆದರೆ ಇತ್ತ ನಟ ಸಂಚಾರಿ ವಿಜಯ್ ಮಯೂರಿ ಅವರ ಹೊಸ ಅವತಾರವನ್ನು ನೋಡಿ ಬೆಚ್ಚಿ ಬೆದರಿದ್ದಾರೆ. ತಪ್ಪಾಗಿ ಯೋಚನೆ ಮಾಡಬೇಡಿ, ನಾವ್ ಹೇಳ್ತಿರೋದು ಮಯೂರಿ ಅವರ ಹೊಸ ಸಿನಿಮಾದ ಬಗ್ಗೆ. ಮಯೂರಿ ಅಭಿನಯದ 'ಆಟಕ್ಕುಂಟು ಲೆಕ್ಕಕ್ಕಿಲ್ಲ' ಚಿತ್ರದ ಫಸ್ಟ್ ಲುಕ್ ಬಿಡುಗಡೆ ಆಗಿದೆ.

  ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರವನ್ನು ಹೊಂದಿರುವ 'ಆಟಕ್ಕುಂಟು ಲೆಕ್ಕಕ್ಕಿಲ್ಲ' ಚಿತ್ರದಲ್ಲಿ ನಟಿ ಮಯೂರಿ, ಸಂಚಾರಿ ವಿಜಯ್, ಗೌತಮ್ ಹಾಗೂ ದುನಿಯಾ ರಶ್ಮಿ ಅಭಿನಯ ಮಾಡಿದ್ದಾರೆ. ರಾಮ್ ಚಂದ್ರ ನಿರ್ದೇಶನದ ಚಿತ್ರದಲ್ಲಿ ಮಯೂರಿ ರೌದ್ರಾವತಾರದ ಲುಕ್ ಬಿಡುಗಡೆ ಆಗಿದೆ. ನಟ ಗೌತಮ್ ಹುಟ್ಟುಹಬ್ಬದ ವಿಶೇಷವಾಗಿ ಪೋಸ್ಟರ್ ರಿಲೀಸ್ ಮಾಡಲಾಗಿದೆ.

  'ಕೃಷ್ಣಲೀಲಾ' ಖ್ಯಾತಿಯ ನಟಿ ಮಯೂರಿ ಈಗ 'ಆಟಕ್ಕುಂಟು ಲೆಕ್ಕಕ್ಕಿಲ್ಲ' 'ಕೃಷ್ಣಲೀಲಾ' ಖ್ಯಾತಿಯ ನಟಿ ಮಯೂರಿ ಈಗ 'ಆಟಕ್ಕುಂಟು ಲೆಕ್ಕಕ್ಕಿಲ್ಲ'

  ವಸುಂದರ ಕ್ರಿತಿಕ್ ಫಿಲಂಸ್ ಅಡಿಯಲ್ಲಿ ನಿರ್ಮಾಣ ಆಗಿರುವ 'ಆಟಕ್ಕುಂಟು ಲೆಕ್ಕಕ್ಕಿಲ್ಲ' ಸಿನಿಮಾದ ಚಿತ್ರೀಕರಣ ಕಂಪ್ಲೀಟ್ ಆಗಿದ್ದು ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಆಗಿದೆ.

  ಮಯೂರಿ ಹಾಗೂ ಸಂಚಾರಿ ವಿಜಯ್ ಸಾಕಷ್ಟು ವಿಭಿನ್ನ ಸಿನಿಮಾಗಳಲ್ಲಿ ಅಭಿನಯಿಸಿದ್ದು 'ಆಟಕ್ಕುಂಟು ಲೆಕ್ಕಕ್ಕಿಲ್ಲ' ಕೂಡ ಇಬ್ಬರ ವೃತ್ತಿ ಜೀವನದಲ್ಲಿ ವಿಶೇಷ ಸಿನಿಮಾ ಆಗುವ ಸೂಚನೆ ಫಸ್ಟ್ ಲುಕ್ ನಲ್ಲಿ ಗೊತ್ತಾಗುತ್ತಿದೆ.

  English summary
  Kannada actress mayuri kyatari, sanchari vijay starrer Aatakuntu Lekkakilla movie first look released. mayuri plays a different role in the film

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X