»   » ಬಾಲಿವುಡ್ಡಿಗೆ ಹಾರಿದ 'ಡ್ಯಾನ್ಸಿಂಗ್ ಸ್ಟಾರ್' ಮಯೂರಿ

ಬಾಲಿವುಡ್ಡಿಗೆ ಹಾರಿದ 'ಡ್ಯಾನ್ಸಿಂಗ್ ಸ್ಟಾರ್' ಮಯೂರಿ

Posted By:
Subscribe to Filmibeat Kannada

ಖ್ಯಾತ ನೃತ್ಯಗಾರ್ತಿ, ಸಂಗೀತ ನಿರ್ದೇಶಕ ರಘು ದೀಕ್ಷಿತ್ ಪತ್ನಿ ಮಯೂರಿ ಉಪಾಧ್ಯಾಯ ಯಾರಿಗ್ತಾನೆ ಗೊತ್ತಿಲ್ಲ ಹೇಳಿ. 'ಡ್ಯಾನ್ಸಿಂಗ್ ಸ್ಟಾರ್' ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಗಳಿಸಿರುವ ಮಯೂರಿ ಇದೀಗ ಬಾಲಿವುಡ್ ಗೆ ಹಾರಿದ್ದಾರೆ.

ಬಾಲಿವುಡ್ ನ ಬಿಗ್ ಬಜೆಟ್ ಸಿನಿಮಾವೊಂದರ ಹಾಡುಗಳಿಗೆ ಮಯೂರಿ ನೃತ್ಯ ಸಂಯೋಜನೆ ಮಾಡಿ ಬಂದಿದ್ದಾರೆ. ಬಿಟೌನ್ ನ ಬಿಗ್ ಸ್ಟಾರ್ ಸಿನಿಮಾದಲ್ಲಿ ಕೆಲಸ ಮಾಡಿದ್ದೇನೆ ಅಂತ ಹೇಳುವ ಮಯೂರಿ, ಆ ಸ್ಟಾರ್ ಯಾರು ಅನ್ನೋ ಗುಟ್ಟನ್ನ ಬಿಟ್ಟುಕೊಟ್ಟಿಲ್ಲ.

mayuri

ಅಂದ್ಹಾಗೆ, ಸ್ಯಾಂಡಲ್ ವುಡ್ ನಲ್ಲಿ ಯೋಗರಾಜ್ ಭಟ್ ನಿರ್ದೇಶನದ 'ಪಂಚರಂಗಿ', 'ಇಜ್ಜೋಡು' ಮತ್ತು 'ತಮಸ್ಸು' ಚಿತ್ರಗಳಿಗೆ ಮಯೂರಿ ನೃತ್ಯ ನಿರ್ದೇಶನ ಮಾಡಿದ್ದಾರೆ.

ಕಮರ್ಶಿಯಲ್ ಹಾಡುಗಳಿಗಿಂತ ಹೆಚ್ಚಾಗಿ ಸದಭಿರುಚಿಯ ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡುವುದು ಮಯೂರಿ ಉಪಾಧ್ಯಾಯ ಅವರಿಗೆ ಇಷ್ಟ. ಹೀಗಾಗಿ ಹಾಡುಗಳ ಸೆಲೆಕ್ಷನ್ ನಲ್ಲಿ ಅವರು ತುಂಬಾನೇ ಚ್ಯುಸಿ.

mayuri

ಇದೀಗ ಮಯೂರಿ ಉಪಾಧ್ಯಾಯ ಬಾಲಿವುಡ್ ನಲ್ಲಿ ನೃತ್ಯ ಸಂಯೋಜನೆ ಮಾಡಿರುವ ಹಾಡುಗಳು ಕೂಡ ಸಖತ್ ಡಿಫರೆಂಟ್ ಆಗಿ ಮೂಡಿಬಂದಿದ್ಯಂತೆ. ಮಯೂರಿ ಅವರ ಬಾಲಿವುಡ್ ಪ್ರಾಜೆಕ್ಟ್ ಬಗ್ಗೆ ಮತ್ತಷ್ಟು ಮಾಹಿತಿ ತಿಳಿದುಕೊಳ್ಳುವುದಕ್ಕೆ 'ಫಿಲ್ಮಿಬೀಟ್ ಕನ್ನಡ' ಓದುತ್ತಿರಿ.

English summary
Dancer, 'Dancing Star' Judge, Wife of Music Director Raghu Dixit, Mayuri Upadhyaya has choreographed songs for Bollywood's Big Budget Movie. Mayuri Upadhyaya has not revealed much details about the Bollywood Movie in which she has worked.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada