Just In
- 4 min ago
ಬಿಗ್ ಬಾಸ್ ಟ್ವಿಸ್ಟ್: ಹೊಸದಾಗಿ ನಾಮಿನೇಷನ್ ಆದ ನಾಲ್ಕು ಸ್ಪರ್ಧಿಗಳು
- 2 hrs ago
ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ದರ್ಶನ್ ಹೊಸ ಸಿನಿಮಾ: ಮದಕರಿ ನಾಯಕನ ಕತೆ ಏನಾಯಿತು?
- 3 hrs ago
ಕಿರುತೆರೆಯಲ್ಲಿ ಪವರ್ ಸ್ಟಾರ್ ಅಬ್ಬರ: 'ಡಿಕೆಡಿ'ಯಲ್ಲಿ ಅಪ್ಪು ಡಾನ್ಸ್
- 3 hrs ago
ಹಿಂದಿ ಬರಲ್ಲ ಎಂದು ಅವಮಾನಕ್ಕೊಳಗಾಗಿದ್ದ ದಿನಗಳನ್ನು ನೆನೆದು ಕಣ್ಣೀರಿಟ್ಟ ನೋರಾ ಫತೇಹಿ
Don't Miss!
- Automobiles
ರ್ಯಾಪಿಡ್ ಬದಲಾಗಿ ಹೊಸ ಸಿ ಸೆಗ್ಮೆಂಟ್ ಸೆಡಾನ್ ಬಿಡುಗಡೆ ಮಾಡಲಿದೆ ಸ್ಕೋಡಾ
- News
ಚುನಾವಣಾ ಪ್ರಚಾರದಿಂದ ರಾಹುಲ್ ಗಾಂಧಿ ಮೇಲೆ ನಿಷೇಧ ಹೇರುವಂತೆ ಬಿಜೆಪಿ ಒತ್ತಾಯ
- Lifestyle
ಬೆಡ್ನಲ್ಲಿ ಪುರುಷರ ಸಾಮರ್ಥ್ಯ ಹೆಚ್ಚಿಸುತ್ತೆ ಈ ಕೆಗೆಲ್ ವ್ಯಾಯಾಮ
- Sports
ಭಾರತ vs ಇಂಗ್ಲೆಂಡ್: ಕೊಹ್ಲಿ ಜೊತೆಗಿನ ಮಾತಿನ ಚಕಮಕಿ ಬಗ್ಗೆ ಪ್ರತಿಕ್ರಿಯಿಸಿದ ಬೆನ್ ಸ್ಟೋಕ್ಸ್
- Finance
ಮತ್ತಷ್ಟು ಕಡಿಮೆಯಾಯ್ತು ಚಿನ್ನದ ಬೆಲೆ: ಮಾರ್ಚ್ 04ರ ಬೆಲೆ ಇಲ್ಲಿದೆ
- Education
UAS Dharwad Recruitment 2021: ಅರೆಕಾಲಿಕ ಉಪನ್ಯಾಸಕ ಹುದ್ದೆಗಳಿಗೆ ನೇರ ಸಂದರ್ಶನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನಾನು-ದಿಗಂತ್ ಈಗಾಗಲೇ ಅಪ್ಪ-ಅಮ್ಮ ಆಗಿದ್ದೀವಿ: ಐಂದ್ರಿತಾ ರೇ
ಸ್ಯಾಂಡಲ್‌ವುಡ್ ನ ಕ್ಯೂಟ್ ದಂಪತಿ ದಿಗಂತ್ ಹಾಗೂ ಐಂದ್ರಿತಾ ರೇ ಪೋಷಕರಾಗುತ್ತಿದ್ದಾರೆ ಎಂಬ ಸುದ್ದಿ ಕೆಲ ದಿನಗಳಿಂದ ಹರಿದಾಡುತ್ತಿದೆ. ಈ ಬಗ್ಗೆ ನಟಿ ಐಂದ್ರಿತಾ ರೇ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದಾರೆ.
'ನಾನು-ದಿಗಂತ್ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಆದರೆ ನಾನು ಮತ್ತು ದಿಗಂತ್ ಈಗಾಗಲೇ ಪೋಷಕರಾಗಿದ್ದೇವೆ' ಎಂದಿದ್ದಾರೆ ಐಂದ್ರಿತಾ ರೇ. ಹಾಗೆಂದ ಮಾತ್ರಕ್ಕೆ ಈ ದಂಪತಿ ಮಕ್ಕಳನ್ನು ಹೊಂದಿದ್ದಾರೆ ಎಂದರ್ಥವಲ್ಲ.
'ನಾನು ದಿಗಂತ್ ಎರಡು ನಾಯಿಗಳನ್ನು ನಮ್ಮ ಮಕ್ಕಳಂತೆಯೇ ಸಾಕುತ್ತಿದ್ದೇವೆ. (ಡಾಗ್ ಪೇರೆಂಟ್ಸ್) ಇನ್ನು ಮುಂದೆಯೂ ಹೀಗೆ ಇರಬೇಕು ಎಂದುಕೊಂಡಿದ್ದೇವೆ' ಎಂದಿದ್ದಾರೆ ನಟಿ ಐಂದ್ರಿತಾ ರೇ.
ಇತ್ತೀಚೆಗೆ ನಟ ದಿಗಂತ್ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಸಂದರ್ಶಕಿಯು ಮಗುವಿನ ನಿರೀಕ್ಷೆಯಲ್ಲಿದ್ದೀರಾ? ಎಂದು ಕೇಳಿದಾಗ, 'ಸುಮ್ಮನಿರಿ ಅದರ ಬಗ್ಗೆ ಮಾತನಾಡಬೇಡಿ' ಎಂದು ತಮಾಷೆಯಾಗಿ ಸನ್ನೆ ಮಾಡಿದ್ದರು. ಇದೇ ಕಾರಣಕ್ಕೆ ದಿಗಂತ್-ಐಂದ್ರಿತಾ ಮಗುವಿನ ನಿರೀಕ್ಷೆಯಲ್ಲಿರಬಹುದು ಎನ್ನಲಾಗಿತ್ತು.
2018 ರ ಡಿಸೆಂಬರ್ ತಿಂಗಳಲ್ಲಿ ಈ ಯುವ ಜೋಡಿ ವಿವಾಹವಾಗಿದ್ದರು. ಇಬ್ಬರೂ ಸಹ ಸಿನಿಮಾಗಳಲ್ಲಿ ನಟಿಸುವುದನ್ನು ಮುಂದುವರೆಸಿರುವುದರ ಜೊತೆಗೆ ಹಲವಾರು ಸಾಹಸಗಳನ್ನು ಒಟ್ಟಿಗೆ ಮಾಡುತ್ತಿರುತ್ತಾರೆ. ರಿವರ್ ರ್ಯಾಫ್ಟಿಂಗ್, ಸೈಕ್ಲಿಂಗ್, ವ್ಯಾಯಾಮ, ಕಸರತ್ತು, ಸರ್ಫಿಂಗ್ ಹೀಗೆ ಹಲವು ಸಾಹಸ ಕ್ರೀಡೆಗಳಲ್ಲಿ ಈ ಜೋಡಿ ತೊಡಗಿಕೊಂಡಿದ್ದಾರೆ.