»   » ಸುದೀಪ್ ರನ್ನು ಭೇಟಿಯಾದ ಜಪಾನ್ ಅಭಿಮಾನಿ

ಸುದೀಪ್ ರನ್ನು ಭೇಟಿಯಾದ ಜಪಾನ್ ಅಭಿಮಾನಿ

By: ಉದಯರವಿ
Subscribe to Filmibeat Kannada

ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಜಪಾನ್ ನಲ್ಲೂ ಅಭಿಮಾನಿಗಳಿದ್ದಾರೆ ಎಂದು ಕೇಳಿದ್ದೆವು. ಆದರೆ ನಮ್ಮ ಸುದೀಪ್ ಅವರಿಗೂ ಜಪಾನ್ ನಲ್ಲಿ ಅಭಿಮಾನಿಗಳಿದ್ದಾರೆ ಎಂಬ ಸಂಗತಿ ಇದೀಗ ಬೆಳಕಿಗೆ ಬಂದಿದೆ.

ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಣಿಂದೆತ್ತ ಸಂಬಂಧವಯ್ಯ? ಬೆಟ್ಟದ ನೆಲ್ಲಿಯ ಕಾಯಿ ಸಮುದ್ರದೊಳಗಣ ಉಪ್ಪು ಎತ್ತಣಿಂದೆತ್ತ ಸಂಬಂಧವಯ್ಯಾ? ಗುಹೇಶ್ವರಲಿಂಗಕ್ಕೆಯೂ ಎನಗೆಯೂ ಎತ್ತಣಿಂದೆತ್ತ ಸಂಬಂಧವಯ್ಯ? ಎಂದು ಅಲ್ಲಮಪ್ರಭು ಅವರ ಅದ್ಭುತ ವಚನ ಇಲ್ಲಿ ನೆನಪಾಗುತ್ತದೆ. [ಚಿತ್ರ ವಿಮರ್ಶೆ: ಮನ ಗೆದ್ದ ಸುದೀಪ್ 'ಮಾಣಿಕ್ಯ']

ಎಸ್ ಎಸ್ ರಾಜಮೌಳಿ ಅವರ 'ಈಗ' ಚಿತ್ರದ ಮೂಲಕ ಅಪಾರ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡ ನಟ ಸುದೀಪ್. ಈ ಚಿತ್ರ ಜಪಾನ್ ಭಾಷೆಗೂ ಡಬ್ ಆಗಿದೆ ಬಿಡುಗಡೆಯಾಗಿತ್ತು. ಬಳಿಕ ಜಪಾನ್ ನಲ್ಲೂ ಸುದೀಪ್ ಜನಪ್ರಿಯರಾದರು. ಅಲ್ಲಿಯ ಅಭಿಮಾನಿಯೊಬ್ಬರು ಸುದೀಪ್ ಅವರನ್ನು ಹುಡುಕಿಕೊಂಡು ಸೀದಾ ಅವರ ಮನೆಗೆ ಬಂದಿದ್ದಾರೆ.

ಮಾಣಿಕ್ಯ ನೋಡಲು ಬಂದ ಜಪಾನ್ ಅಭಿಮಾನಿ

ಈ ಹೆಣ್ಣುಮಗಳ ಹೆಸರು ಜುಂಕೋ (Junko). ಇತ್ತೀಚೆಗೆ ತೆರೆಕಂಡು ಬಾಕ್ಸ್ ಆಫೀಸಲ್ಲಿ ಲಗೋರಿ ಆಡುತ್ತಿರುವ ಮಾಣಿಕ್ಯ ಚಿತ್ರವನ್ನು ವೀಕ್ಷಿಸಲು ಬಂದಿದ್ದಾರೆ. ಆಕೆಯ ಅಭಿಮಾನಕ್ಕೆ ಸುದೀಪ್ ಕ್ಲೀನ್ ಬೌಲ್ಡ್ ಆಗಿದ್ದಾರೆ.

ಇಪ್ಪತ್ತೈದು ದಿನ ಪೂರೈಸಿದ ಮಾಣಿಕ್ಯ

ತೆಲುಗಿನ 'ಮಿರ್ಚಿ' ಚಿತ್ರದ ರೀಮೇಕ್ ಆದ 'ಮಾಣಿಕ್ಯ' ಚಿತ್ರ ಯಶಸ್ವಿ 25 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಈ ಸಂದರ್ಭದಲ್ಲಿ ದೂರದಿಂದ ಜಪಾನ್ ಅಭಿಮಾನಿ ಬಂದು ಭೇಟಿಯಾಗಿರುವುದು ನಿಜಕ್ಕೂ ಅಪರೂಪದ ಘಟನೆ.

ಸುದೀಪ್ ಅವರನ್ನು ಭೇಟಿಯಾದ ಜುಂಕೋ

ಸೋಮವಾರ (ಮೇ 19) ಸುದೀಪ್ ಅವರನ್ನು ಭೇಟಿಯಾದ ಜುಂಕೋ ಸರ್ಪ್ರೈಸ್ ನೀಡಿದರು. ಒಬ್ಬ ನಟನಿಗೆ ಎಲ್ಲೋ ದೂರದ ದೇಶದಿಂದ ಅಭಿಮಾನಿಯೊಬ್ಬರು ಬಂದು ಭೇಟಿಯಾಗುವುದಿದೆಯಲ್ಲಾ ಅದು ನಿಜಕ್ಕೂ ಸಂತಸದ ಸಂಗತಿ.

ಮೊಬೈಲ್ ನಲ್ಲೂ ಅಭಿಮಾನದ ಪ್ರದರ್ಶನ

ಸುದೀಪ್ ಅಭಿನಯಿಸಿದ 'ಈಗ' ಚಿತ್ರದ ಫೋಟೋವನ್ನು ತನ್ನ ಮೊಬೈನಲ್ಲೂ ಹಾಕಿಕೊಂಡು ಅಭಿಮಾನವನ್ನು ಪ್ರದರ್ಶಿಸಿದ್ದಾರೆ ಜುಂಕೋ.

ಮಾಣಿಕ್ಯ ಚಿತ್ರಕ್ಕೂ ಭರ್ಜರಿ ಪ್ರತಿಕ್ರಿಯೆ

ಇನ್ನು 'ಮಾಣಿಕ್ಯ' ಚಿತ್ರದಲ್ಲಿ ಸುದೀಪ್ ಅವರಿಗೆ ತಂದೆಯಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯಿಸಿದ್ದಾರೆ. ಭರ್ಜರಿ ತಾರಾಗಣವನ್ನು ಹೊಂದಿರುವ ಮಾಣಿಕ್ಯ ಚಿತ್ರವನ್ನು ಅಭಿಮಾನಿಗಳಿಂದಲೂ ಮೆಚ್ಚುಗೆಯ ಮಹಾಪೂರ ಹರಿದುಬಂದಿದೆ.

English summary
A women named Junko had flied down all the way from Japan to watch Kiccha Sudeep's directorial venture Maanikya, which was released on May 1. It is said that Kiccha Sudeep has got an International identity with his mind-blowing performance in director SS Rajamouli's Eega. 
 
Please Wait while comments are loading...