»   » ಗಣೇಶ್ ರವರ 'ಗೋಲ್ಡನ್' ಅಭಿಮಾನಿಗಳು ಇವರೇ!

ಗಣೇಶ್ ರವರ 'ಗೋಲ್ಡನ್' ಅಭಿಮಾನಿಗಳು ಇವರೇ!

Posted By:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಅಂದ್ರೆ ಯಾರಿಗ್ತಾನೆ ಇಷ್ಟ ಇಲ್ಲ ಹೇಳಿ. ಕಿರುತೆರೆ ಇಂದ ಬೆಳ್ಳಿ ತೆರೆಗೆ ಕಾಲಿಟ್ಟು ಕೋಟ್ಯಾಂತರ ಕನ್ನಡಿಗರ ಮನೆ ಮನ ಗೆದ್ದಿರುವ ನಟ 'ಮಳೆ ಹುಡುಗ' ಗಣೇಶ್.

ಅಷ್ಟಕ್ಕೂ ಸ್ಟಾರ್ ಹೀರೋಗಳು ಅಂದ್ರೆ ಲೆಕ್ಕವಿಲ್ಲದಷ್ಟು ಅಭಿಮಾನಿಗಳು ಇರುವುದು ಸಹಜ. ಆದ್ರೆ, ಗೋಲ್ಡನ್ ಸ್ಟಾರ್ ಗೆ ಇರುವ ಫ್ಯಾನ್ಸ್ ಸ್ವಲ್ಪ ಸ್ಪೆಷಲ್. ಅದ್ಹೇಗೆ ಸ್ಪೆಷಲ್ ಅಂತ ನಾವು ಹೇಳ್ತೀವಿ ಕೇಳಿ.

meet-the-hardcore-fans-of-golden-star-ganesh

ಗಣೇಶ್ ಜೊತೆ ಇರುವ ಈ ಹುಡುಗನ ಹೆಸರು ಪ್ರೀತಂ ಅಂತ. ದಾವಣಗೆರೆಯ ಹುಡುಗ. ಈತ ಗಣೇಶ್ ಅಭಿನಯದ 'ಮುಂಗಾರು ಮಳೆ' ಚಿತ್ರವನ್ನ ಬರೋಬ್ಬರಿ 100 ಬಾರಿ ನೋಡಿದ್ದಾನೆ. ಅದೂ, ಥಿಯೇಟರ್ ನಲ್ಲೇ ಅಂದ್ರೆ ನೀವು ನಂಬಲೇಬೇಕು. [ಅಭಿಮಾನಿಗಳಲ್ಲಿ ಗಣೇಶ್ ಕ್ಷಮೆ ಯಾಚಿಸಿದ್ದು ಯಾಕೆ?]

'ಮುಂಗಾರು ಮಳೆ' ಚಿತ್ರದಲ್ಲಿ ಗಣೇಶ್ ಪಾತ್ರದ ಹೆಸರೂ ಪ್ರೀತಂ ಅಂತಾನೇ ನೆನಪಿದ್ಯಾ? ಇದಕ್ಕೋ ಏನೋ, ಗಣೇಶ್ ಮೇಲೆ ಅಭಿಮಾನ ಬೆಳೆಸಿಕೊಂಡ ಈತ ಅಂದಿನಿಂದ ಇಂದಿನವರೆಗೂ ಗಣೇಶ್ ನಟಿಸಿರುವ ಎಲ್ಲಾ ಚಿತ್ರಗಳನ್ನೂ ಮಿಸ್ ಮಾಡದೆ, ಲೆಕ್ಕವಿಲ್ಲದಷ್ಟು ಬಾರಿ ನೋಡಿದ್ದಾನೆ.

ಸಾಲದಕ್ಕೆ ಗಣೇಶ್ ರನ್ನ ಕಣ್ಣಾರೆ ನೋಡ್ಬೇಕು ಅಂತ ವರ್ಷಗಳಿಂದ ಹಪಹಪಿಸುತ್ತಿದ್ದ ಪ್ರೀತಂಗೆ ಮೊನ್ನೆ ಸುವರ್ಣಾವಕಾಶ ಸಿಕ್ತು. 'ಸೂಪರ್ ಮಿನಿಟ್' ಕಾರ್ಯಕ್ರಮದ ಚಿತ್ರೀಕರಣ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆಯುತ್ತಿತ್ತು. ಇದನ್ನು ತಿಳಿದ ಕೂಡಲೆ, ದಾವಣಗೆರೆಯಿಂದ ಬೆಂಗಳೂರಿಗೆ ಬಸ್ ಹತ್ತಿ, ಕಂಠೀರವ ಸ್ಟುಡಿಯೋದಲ್ಲಿ ಗಣೇಶ್ ರನ್ನ ಭೇಟಿ ಮಾಡಿ ಫುಲ್ ಖುಷ್ ಆಗಿದ್ದಾನೆ. ['ಸೂಪರ್ ಮಿನಿಟ್' ನಲ್ಲಿ ನೀವೂ ಭಾಗವಹಿಸಬೇಕಾ? ಹೀಗೆ ಮಾಡಿ...]

meet-the-hardcore-fans-of-golden-star-ganesh

ಧಾರವಾಡದ ಅಶ್ವಿನಿ ರವರದ್ದು ಇದೇ ಕಥೆ. 'ಮುಂಗಾರು ಮಳೆ' ಚಿತ್ರ ನೋಡಿ ಗಣೇಶ್ ಗೆ ಕಟ್ಟಾ ಅಭಿಮಾನಿಯಾಗಿರುವ ಅಶ್ವಿನಿ ಕೂಡ ಕಂಠೀರವ ಸ್ಟುಡಿಯೋದಲ್ಲಿ ಗಣೇಶ್ ರನ್ನ ಭೇಟಿ ಮಾಡಿ ಖುಷಿ ಪಟ್ಟಿದ್ದಾರೆ. ಆ ಮೂಲಕ ಒಂಬತ್ತು ವರ್ಷದಿಂದ ಗಣೇಶ್ ರನ್ನ ನೋಡ್ಬೇಕು ಎನ್ನುವ ಅಶ್ವಿನಿ ಬಯಕೆ ಈಡೇರಿದೆ.

English summary
Meet Preetham from Davanagere and Ashwini from Dharwad, the hardcore fans of Kannada Actor Golden Star Ganesh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada