»   » ಅಂಬಿ ಬರ್ಲಿಲ್ಲ ; ಶಿವಣ್ಣ, ಸರೋಜ ದೇವಿ ಕಾಯ್ಲಿಲ್ಲ..!

ಅಂಬಿ ಬರ್ಲಿಲ್ಲ ; ಶಿವಣ್ಣ, ಸರೋಜ ದೇವಿ ಕಾಯ್ಲಿಲ್ಲ..!

Posted By: ಹರಾ
Subscribe to Filmibeat Kannada

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಇಂದು ಮಹತ್ವದ ಸಭೆ ನಡೆಯಬೇಕಿತ್ತು. ಕಳೆದ ಒಂದು ವಾರದಿಂದ ಪ್ರತಿಭಟನೆಯಲ್ಲಿ ನಿರತರಾಗಿದ್ದ ನಿರ್ಮಾಪಕರ ಸಮಸ್ಯೆ ಕುರಿತು ಚರ್ಚಿಸುವುದಕ್ಕೆ ರೆಬೆಲ್ ಸ್ಟಾರ್ ಅಂಬರೀಶ್ ಇಂದು ಕಲಾವಿದರ ಸಂಘದ ಸಭೆ ಕರೆದಿದ್ದರು.

ಅಂಬಿ ದನಿಗೆ ಓಗೊಟ್ಟು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಹಿರಿಯ ನಟಿ ಸರೋಜ ದೇವಿ, ಜಯಮಾಲಾ, ನವರಸ ನಾಯಕ ಜಗ್ಗೇಶ್, ಕೋಮಲ್, ಹಿರಿಯ ನಟ ಶ್ರೀನಾಥ್ ಸೇರಿದಂತೆ ಕಲಾವಿದರ ದಂಡೇ ವಾಣಿಜ್ಯ ಮಂಡಳಿಯಲ್ಲಿ ನೆರೆದಿತ್ತು. [ನಿರ್ಮಾಪಕರ ಸತ್ಯಾಗ್ರಹದ ಬಗ್ಗೆ ಶಿವಣ್ಣ ಕೊಟ್ಟ ಉತ್ತರ ಇದು!]

shivarajkumar ambareesh

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಮ್ಮುಖದಲ್ಲಿ ಕಲಾವಿದರ ಸಂಘದ ಸಭೆ ನಿಗದಿಯಾಗಿದ್ದು ಇಂದು ಸಂಜೆ 4 ಗಂಟೆಗೆ. ಆದ್ರೆ, ಗಂಟೆ ಆರು ಆದರೂ, ಕಲಾವಿದರ ಸಂಘದ ಅಧ್ಯಕ್ಷ ರೆಬೆಲ್ ಸ್ಟಾರ್ ಅಂಬರೀಶ್ ಪತ್ತೆಯಾಗ್ಲಿಲ್ಲ. [ಧರಣಿ ನಿರತ ನಿರ್ಮಾಪಕರ ಭವಿಷ್ಯ ಇಂದು ಅಂಬರೀಷ್ ಕೈಯಲ್ಲಿ!]

4 ಗಂಟೆಯಿಂದ ಕಾದು ಕಾದು ಸುಸ್ತಾದ ಅನೇಕ ಕಲಾವಿದರು ಬೇಸೆತ್ತು ಸಭೆ ನಡೆಸದೆ ಹೊರನಡೆದಿದ್ದಾರೆ. ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್, ಹಿರಿಯ ನಟಿ ಸರೋಜ ದೇವಿ ಮತ್ತು ನಟಿ ಜಯಮಾಲಾ ವಾಣಿಜ್ಯ ಮಂಡಳಿಯಿಂದ ನಿರ್ಗಮಿಸಿದ್ದಾರೆ. [ನಿರ್ಮಾಪಕರು ರೊಚ್ಚಿಗೇಳುವುದಕ್ಕೆ 'ಇವರುಗಳೇ' ಕಾರಣ.!]

ಸಭೆ ಕರೆದವರಿಗೆ ಸಮಯಪ್ರಜ್ಞೆ ಇಲ್ಲದಿರುವುದಕ್ಕೆ ಬೇಸೆತ್ತ ಅನೇಕ ಕಲಾವಿದರು ಮನೆ ಕಡೆ ಮುಖ ಮಾಡುತ್ತಿದ್ದಾರೆ. ಮುಂದೇನೋ...ದೇವರೇ ಬಲ್ಲ..!

English summary
Kannada Actor Ambareesh was supposed to preside the meeting today in KFCC to discuss upon the issue raised by the Producers. But Rebel Star Ambareesh has failed to turn up on time. Hence, Actor Shivarajkumar, Saroja Devi and Jayamala has returned back home.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada