»   » ಕನ್ನಡಿಗರ ಕಲಾಭವನ ನೋಡಿ ಮನಸೋತ ಪರಭಾಷಾ ಸೂಪರ್ ಸ್ಟಾರ್ಸ್

ಕನ್ನಡಿಗರ ಕಲಾಭವನ ನೋಡಿ ಮನಸೋತ ಪರಭಾಷಾ ಸೂಪರ್ ಸ್ಟಾರ್ಸ್

Posted By:
Subscribe to Filmibeat Kannada

ಕನ್ನಡ ಕಲಾವಿದರಿಗೊಂದು ಕಲಾ ಭವನ ಕಟ್ಟಬೇಕು ಎನ್ನುವುದು ಡಾ ರಾಜ್ ಕುಮಾರ್ ಅವರ ಕನಸು. ಈ ಕನಸನ್ನ ಈಡೇರಿಸಲು ರಾಜ್ ಕುಮಾರ್, ವಿಷ್ಣವರ್ಧನ್, ಅಂಬರೀಷ್ ಅವರ ಕಾಲದಿಂದಲೂ ಪ್ರಯತ್ನಗಳು ನಡೆಯುತ್ತಲೇ ಇತ್ತು. ಇದುವರೆಗೂ ಆಗಿರಲಿಲ್ಲ.

ಇದೀಗ, ರೆಬಲ್ ಸ್ಟಾರ್ ಅಂಬರೀಷ್, ದೊಡ್ಡಣ್ಣ, ರಾಕ್ ಲೈನ್ ವೆಂಕಟೇಶ್ ಅವರ ಸಾರಥ್ಯದಲ್ಲಿ ಸ್ಯಾಂಡಲ್ ವುಡ್ ತಾರೆಯರಿಗಾಗಿ ನೂತನ ಕಟ್ಟಡ ತಲೆ ಎತ್ತಿ ನಿಂತಿದೆ.

ಕಲಾವಿದರೆಲ್ಲ ಒಂದೆಡೆ ಕೂತು ಸಭೆ, ಸಮಾರಂಭ ಮಾಡಲು ಒಂದು ಖಾಯಂ ನೆಲೆ ಸಿಕ್ಕಿದೆ. ನಮ್ಮ ಈ ಕನ್ನಡ ಕಲಾವಿದರ ಭವನವನ್ನ ನೋಡಲು ಪರಭಾಷಾ ಸೂಪರ್ ಸ್ಟಾರ್ ನಟರು ಬೆಂಗಳೂರಿಗೆ ಆಗಮಿಸಿದ್ದರು. ಮೆಗಾಸ್ಟಾರ್ ಚಿರಂಜೀವಿ, ಮೋಹನ್ ಬಾಬು, ಶತ್ರುಘ್ನ ಸಿನ್ಹಾ, ನಾಸೀರ್ ಅಂತಹ ದಿಗ್ಗಜ ನಟರು ಕಲಾ ಭವನ ನೋಡಿ ಸೋತುಹೋದರು. ಚಿತ್ರಗಳ ಸಮೇತ ಮುಂದೆ ಓದಿ.....

ನಮಗೂ ಈ ರೀತಿ ಭವನ ಬೇಕು

''ರೆಬಲ್ ಸ್ಟಾರ್ ಅಂಬರೀಷ್ ಪ್ರೀತಿಯಿಂದ ಕರೆದಿದ್ದಕ್ಕೆ ಇಲ್ಲಿಗೆ ಬಂದೆ. ಈ ಕಟ್ಟಡ ನೋಡಿದ ಬಳಿಕ ತೆಲುಗು ಸಿನಿಮಾ ಕಲಾವಿದರಿಗಾಗಿಯೂ ಇಂಥದ್ದೇ ಕಾಂಪ್ಲೆಕ್ಸ್ ಇದ್ದರೆ ಚೆನ್ನಾಗಿರುತ್ತದೆ ಎಂಬ ಆಸೆ ಮೂಡುತ್ತಿದೆ'' ಎಂದು ಮೆಗಾಸ್ಟಾರ್ ಚಿರಂಜೀವಿ ಸಂತಸ ವ್ಯಕ್ತಪಡಿಸಿದ್ದಾರೆ.

ಕನ್ನಡ ಕಲಾವಿದರಿಗೆ ಧನ್ಯವಾದ

''ಅಂಬರೀಷ್ ಅವರ ಶ್ರಮದಿಂದ ಮಾತ್ರ ಇಂತಹ ಒಂದು ಕಟ್ಟಡ ನಿರ್ವಣವಾಗಲು ಸಾಧ್ಯ. ಈ ಕಟ್ಟಡಕ್ಕಾಗಿ ಅವಿರತ ಶ್ರಮಿಸಿದ ಎಲ್ಲರಿಗೂ ನನ್ನ ಅಭಿನಂದನೆಗಳು'' - ಶತ್ರುಘ್ನ ಸಿನ್ಹಾ ನಟ

ಕಟ್ಟಡ ನೋಡುತ್ತಿದ್ದರೇ ಖುಷಿಯಾಗುತ್ತಿದೆ

''ಕನ್ನಡ ಚಿತ್ರ ಕಲಾವಿದರ ಸಂಘದ ನೂತನ ಕಟ್ಟಡವನ್ನು ನೋಡುತ್ತಿದ್ದರೆ ನಿಜಕ್ಕೂ ಖುಷಿಯಾಗುತ್ತದೆ. ಈ ಒಗ್ಗಟ್ಟು ಎಲ್ಲರಿಗೂ ಮುಖ್ಯ. ಇದೇ ರೀತಿ ಇನ್ನು ಮುಂದಿನ ದಿನಗಳಲ್ಲಿ ಕಲಾವಿದರ ಒಳಿತಿಗಾಗಿ ಸಂಘ ದುಡಿಯಲಿ'' ಎಂದು ಬಹುಭಾಷಾ ನಟ ನಾಸೀರ್ ಹರ್ಷ ವ್ಯಕ್ತಪಡಿಸಿದ್ದಾರೆ.

ಶಿವಣ್ಣ ಮತ್ತು ಅಪ್ಪು

ಪರಭಾಷೆಯ ಸೂಪರ್ ಸ್ಟಾರ್ ಗಳನ್ನ ಬರಮಾಡಿಕೊಂಡ ರೆಬಲ್ ಸ್ಟಾರ್ ಅಂಬರೀಷ್ ಮತ್ತು ಕನ್ನಡ ಚಿತ್ರರಂಗ ಅವರಿಗೆ ಕಲಾ ಭವನವನ್ನ ತೋರಿಸಿದರು. ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಕೂಡ ಭಾಗಿಯಾಗಿದ್ದರು.

ದರ್ಶನ್, ಯಶ್ ಭಾಗಿ

ಕಲಾವಿದರ ನೂತನ ಭವನಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ಯಶ್ ಕೂಡ ಭೇಟಿ ನೀಡಿ ಹೊಸ ಕಟ್ಟಡ ಕಂಡು ಖುಷಿಯಾದರು.

ತಾರೆಯರ ದಂಡು.....

ಅಂಬರೀಷ್, ಬಿ. ಸರೋಜಾದೇವಿ, ದೊಡ್ಡಣ್ಣ, ಶಿಜಗ್ಗೇಶ್, ದೇವರಾಜ್, ಪುನೀತ್ ರಾಜ್​ಕುಮಾರ್, ದರ್ಶನ್, ಹಂಸಲೇಖ, ಯಶ್, ಹೇಮಾ ಚೌಧರಿ, ರವಿಶಂಕರ್, ಸುಮಲತಾ, ‘ನೆನಪಿರಲಿ' ಪ್ರೇಮ್ ಸುಂದರ್​ರಾಜ್, ಸಾಧುಕೋಕಿಲ, ಪ್ರಮೀಳಾ ಜೋಷಾಯ್, ಶ್ರುತಿ, ರಾಕ್​ಲೈನ್ ವೆಂಕಟೇಶ್, ಅನು ಪ್ರಭಾಕರ್, ರಾಜೇಂದ್ರಸಿಂಗ್ ಬಾಬು, ಸರಿತಾ, ಮೇಘನಾರಾಜ್, ಅಜಯ್ ರಾವ್, ರಘು ಮುಖರ್ಜಿ, ಉಮೇಶ್, ಶ್ರೀನಿವಾಸಮೂರ್ತಿ ಮುಂತಾದವರ ಭಾಗಿಯಾಗಿದ್ದರು.

English summary
Telugu actor Chiranjeevi, Mohan Babu, Nasir and Bollywood star Shatrughan Sinha has visit to Karnataka Film Artist's House.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada