For Quick Alerts
  ALLOW NOTIFICATIONS  
  For Daily Alerts

  ವಿದೇಶದಿಂದ ಭಾರತಕ್ಕೆ ಬಂದ ನಟಿ ಮೇಘನಾ: ಏರ್ ಇಂಡಿಯಾ ವಿರುದ್ಧ ಅಸಮಾಧಾನ

  |

  ಕೊರೊನಾ ಲಾಕ್‌ಡೌನ್‌ನಿಂದ ಸ್ವಲ್ಪ ಮಟ್ಟಿಗೆ ವಿನಾಯಿತಿ ಸಿಗುತ್ತಿದ್ದಂತೆ ನಟಿ ಮೇಘನಾ ಗಾಂವ್ಕರ್ ವಿದೇಶಕ್ಕೆ ಹಾರಿದ್ದರು. ಅಮೆರಿಕಾಗೆ ಪ್ರವಾಸ ಹೋಗಿದ್ದ ನಟಿ ಸುಮಾರು ಎರಡು ತಿಂಗಳ ಕಾಲ ಹೊರ ದೇಶಗಳಲ್ಲಿ ಕಾಲ ಕಳೆದಿದ್ದರು.

  ವಿದೇಶದಲ್ಲಿ ಹಾಲಿಡೇ ಎಂಜಾಯ್ ಮಾಡಿದ ನಟಿ ಮೇಘನಾ ಇಂದು ಭಾರತಕ್ಕೆ ಹಿಂತಿರುಗಿದ್ದಾರೆ. ದೆಹಲಿ ಮೂಲಕ ಬೆಂಗಳೂರಿಗೆ ಬಂದ ನಟಿ ಏರ್ ಇಂಡಿಯಾ ಸಿಬ್ಬಂದಿ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

  ಅಮೆರಿಕಾದಲ್ಲಿ ರಾಯರ ದರ್ಶನ ಮಾಡಿದ ಮೇಘನಾ: ಧನ್ಯವಾದ ಹೇಳಿದ ಜಗ್ಗೇಶ್

  ದೆಹಲಿ ವಿಮಾನ ನಿಲ್ದಾಣದಲ್ಲಿ ಏನಾಯ್ತು ಎಂಬುದರ ಬಗ್ಗೆ ಸ್ಪಷ್ಟವಾಗಿ ತಿಳಿಸಿದ ಮೇಘನಾ ''ಏರ್ ಇಂಡಿಯಾ ಸಿಬ್ಬಂದಿಗಳ ನಡೆ ಕಿರುಕುಳ ಇದ್ದಂತಿತ್ತು. ಅವರ ಸೇವೆ ನಿಜಕ್ಕೂ ಭಯಾನಕವಾಗಿತ್ತು. ಏರ್ ಇಂಡಿಯಾ ಬಗ್ಗೆ ನಿರಾಸೆಯಾಗಿದೆ. ನಾನು ಮುಂದಿನ ದಿನದಲ್ಲಿ ಮತ್ಯಾವುತ್ತು ಏರ್ ಇಂಡಿಯಾದಲ್ಲಿ ಪ್ರಯಾಣ ಮಾಡುವುದಿಲ್ಲ. ಅತ್ಯಂತ ಕೆಟ್ಟ ವಿಮಾನ ಸಂಸ್ಥೆ'' ಎಂದು ಟ್ವೀಟ್ ಮಾಡಿದ್ದಾರೆ.

  ಮೇಘನಾ ಅವರ ಟ್ವೀಟ್‌ಗೆ ನೋಡಿದ ನೆಟ್ಟಿಗರು ಏನಾಯ್ತು ಮೇಘನಾ ಎಂದು ಕಾಮೆಂಟ್ ಮಾಡ್ತಿದ್ದಾರೆ. ಈ ಕುರಿತು ಮತ್ತೊಂದು ಟ್ವೀಟ್ ಮಾಡಿರುವ ಮೇಘನಾ, ''ಮಹಿಳೆಯರೊಂದಿಗೆ ವಿನಮ್ರವಾಗಿ ಮತ್ತು ಗೌರವಯುತವಾಗಿ ನಡೆದುಕೊಳ್ಳುವಂತೆ ನಿಮ್ಮ ಸಿಬ್ಬಂದಿಗೆ ಹೇಳಿಕೊಡಬೇಕಿದೆ. ಏರ್ ಇಂಡಿಯಾದಲ್ಲಿ ಪ್ರತಿ ಸಲವೂ ಪ್ರಯಾಣಿಸಿದಾಗಲೂ ವೃತ್ತಿಪರ ರಹಿತ ಅನುಭವ ಆಗಿದೆ. ಒಟ್ಟಾರೆ ಹಣ, ಸಮಯ ನಮ್ಮ ಶಕ್ತಿ ವ್ಯರ್ಥವಾಗಿದೆ'' ಎಂದು ತಿಳಿಸಿದ್ದಾರೆ.

  ವಿಜಯ್ ಸೇತುಪತಿಗೆ ಕ್ಲೀನ್ ಬೌಲ್ಡ್ ಆದ ನಟಿ ಮೇಘನಾ ಗಾಂವ್ಕರ್

  ''ಕೊರೊನಾ ವೈರಸ್ ಎನ್ನುವುದು ಅಧಿಕಾರಿಗಳಿಗೆ ಹಣ ಸಂಪಾದಿಸಲು ಈ ಹಿಂದಿನಗಿಂತಲೂ ಉತ್ತಮ ಅವಕಾಶ ಆಗಿದೆ. ಕೊವಿಡ್ ಹಗರಣ ನಿಜಕ್ಕೂ ಎಷ್ಟು ದೊಡ್ಡದಿದೆ? ನೀವು ಮತ್ತು ನಾನು ಇದನ್ನೂ ಊಹಿಸಿಕೊಳ್ಳಲು ಸಾಧ್ಯವಿಲ್ಲ'' ಎಂದು ನಟಿ ಬೇಸರ ವ್ಯಕ್ತಪಡಿಸಿದ್ದಾರೆ.

  ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರತಿಯೊಬ್ಬರಿಗೂ ಕೊವಿಡ್ ಪರೀಕ್ಷೆ ಮಾಡಲಾಗುತ್ತದೆ. ಪರೀಕ್ಷೆಯ ವರದಿ ಬಂದ ಬಳಿಕವಷ್ಟೇ ಅವರನ್ನು ತೆರಳಲು ಅವಕಾಶ ಮಾಡಿಕೊಡಲಾಗುತ್ತಿದೆಯಂತೆ. ನಟಿ ಮೇಘನಾ ಅವರಿಗೂ ಸಹ ದೆಹಲಿ ವಿಮಾನ ನಿಲ್ದಾಣದಲ್ಲಿ ಕೊವಿಡ್ ಪರೀಕ್ಷೆ ಮಾಡಿದ್ದ ಫಲಿತಾಂಶ ನೆಗಿಟಿವ್ ಬಂದಿದೆ.

  ಸಲಾರ್ ಅಂದ್ರೆ ಏನು ಗೊತ್ತಾ..? | Filmibeat Kannada

  ಕೊನೆಯದಾಗಿ ಜಗ್ಗೇಶ್ ನಟನೆಯ 'ಕಾಳಿದಾಸ ಕನ್ನಡ ಮೇಷ್ಟ್ರು' ಚಿತ್ರದಲ್ಲಿ ಮೇಘನಾ ಗಾಂವ್ಕರ್ ನಾಯಕಿಯಾಗಿ ನಟಿಸಿದ್ದರು.

  English summary
  Kannada actress Meghana Gaonkar expressed displeasure against Air India after she return from abroad.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X