»   » 'ವಂಶೋದ್ಧಾರಕ'ನಿಗೆ ನಾಯಕಿ ಮೇಘನಾ ರಾಜ್

'ವಂಶೋದ್ಧಾರಕ'ನಿಗೆ ನಾಯಕಿ ಮೇಘನಾ ರಾಜ್

Posted By:
Subscribe to Filmibeat Kannada

ನಟಿ ಮೇಘನಾ ರಾಜ್ ಈಗ ಸಾಕಷ್ಟು ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. 'ಬಹುಪರಾಕ್' ಚಿತ್ರದ ಬಳಿಕ ಅವರ 'ಅಲ್ಲಮ' ಚಿತ್ರದ ಘೋಷಿಸಲಾಯಿತು. ಇದೀಗ 'ವಂಶೋದ್ಧಾರಕ'ನಿಗೆ ನಾಯಕಿಯಾಗುತ್ತಿದ್ದಾರೆ. ವಿಜಯ್ ರಾಘವೇಂದ್ರ ನಾಯಕ ನಟನಾಗಿರುವ ಚಿತ್ರ ಇದು.

ಇನ್ನು ವಂಶೋದ್ಧಾರಕ ಚಿತ್ರದ ವಿಚಾರಕ್ಕೆ ಬಂದರೆ, ಇದೊಂದು ಗ್ರಾಮೀಣ ಹಿನ್ನೆಲೆಯಲ್ಲಿ ಸಾಗುವ ಚಿತ್ರ. ಪೂಜಾಗಾಂಧಿ ಅಭಿನಯದ 'ತಿಪ್ಪಜ್ಜಿ ಸರ್ಕಲ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವ ಚಿಕ್ಕಣ್ಣ ನಿರ್ದೇಶನ ವಂಶೋದ್ಧಾರಕನಿಗಿದೆ. ಅಕ್ಟೋಬರ್ 24 ರಂದು ಚಿತ್ರ ಸೆಟ್ಟೇರುತ್ತಿದೆ. ಪಿಎಚ್ ಕೆ ದಾಸ್ ಅವರ ಛಾಯಾಗ್ರಹಣ ಚಿತ್ರಕ್ಕಿದ್ದು, ವಿ ಮನೋಹರ್ ಅವರ ಸಂಗೀತ ಚಿತ್ರಕ್ಕಿದೆ. ['ಅಲ್ಲಮಾ' ಮೇಘನಾರಾಜ್ ನಿಮ್ಮ ಕಥೆ ಏನು?]


ಇನ್ನು ಅಲ್ಲಮ ಚಿತ್ರದಲ್ಲಿ ಮೇಘನಾ ಅವರು 12ನೇ ಶತಮಾನದ ಡಾನ್ಸರ್ ಒಬ್ಬಳ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಧನಂಜಯ್ ಮುಖ್ಯಭೂಮಿಕೆಯಲ್ಲಿರುವ 'ಅಲ್ಲಮ' ಚಿತ್ರಕ್ಕೆ ಖ್ಯಾತ ನಿರ್ದೇಶಕ ಟಿ.ಎಸ್.ನಾಗಾಭರಣ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇಲ್ಲಿಯವರೆಗೂ ಮಾಡಿರದ ಪಾತ್ರಗಳಿಗಿಂತ ಭಿನ್ನವಾಗಿರೋ ಅಲ್ಲಮ ಪಾತ್ರವನ್ನ ಆಯ್ದುಕೊಂಡಿರೋ ಮೇಘನಾರಾಜ್ ಫಸ್ಟ್ ಲುಕ್ ಕೂಡ ಮೋಡಿ ಮಾಡ್ತಿದೆ.

ಎಲ್ಲವೂ ಅಂದುಕೊಂಡಂತೆ ನಡೆದರೆ ಅಲ್ಲಮಾ ಚಿತ್ರ 2015ರ ಏಪ್ರಿಲ್ ಹೊತ್ತಿಗೆ ಪ್ರೇಕ್ಷಕರ ಮುಂದೆ ಬರಲಿದೆ. ಸದ್ಯಕ್ಕೆ ಧನಂಜಯ್ ಅವರು ರಾಟೆ, ಬಾಕ್ಸರ್ ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. ಅಲ್ಲಮಾ ಚಿತ್ರೀಕರಣ ಅಕ್ಟೋಬರ್ ತಿಂಗಳಲ್ಲಿ ಆರಂಭವಾಗಲಿದೆ. (ಫಿಲ್ಮಿಬೀಟ್ ಕನ್ನಡ)

English summary
Actress Meghana Raj, daughter of veteran actor Sunder Raj and Pramila Joshi, is all set to be paired with Vijay Raghavendra. The duo will be see in a movie titled Vamshodaraka. The movie will be launched on October 24th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada