ಮೇಘನಾ ರಾಜ್ ಹಾಗೂ ಪುತ್ರ ಸೇರಿದಂತೆ ಇಡೀ ಕುಟುಂಬಕ್ಕೆ ಕೊರೊನಾ ಪಾಸಿಟಿವ್

ಸ್ಯಾಂಡಲ್ ವುಡ್ ನಟಿ ಮೇಘನಾ ರಾಜ್ ತಾಯಿ ಪ್ರಮೀಳಾ ಜೋಷಾಯಿಗೆ ಕೊರೊನಾ ಪಾಸಿಟಿವ್ ಬಂದ ಬೆನ್ನಲ್ಲೇ ಈಗ ಮೇಘನಾ ರಾಜ್ ಹಾಗೂ ಪುತ್ರ ಸೇರಿದಂತೆ ಇಡೀ ಕುಟುಂಬಕ್ಕೆ ಕೊರೊನಾ ವರದಿ ಪಾಸಿಟಿವ್ ಬಂದಿದೆ.

Recommended Video

Meghana raj ಮನೆಯಲ್ಲಿ ಎಲ್ಲರಿಗೂ Corona ಪಾಸಿಟಿವ್ | Filmibeat Kannada

ಸೋಂಕು ದೃಢಪಡುತ್ತಿದ್ದಂತೆ ನಟಿ ಪ್ರಮೀಳಾ ಜೋಷಾಯ್ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಮೀಳಾ ಜೋಷಾಯಿ ಎರಡು ದಿನಗಳ ಹಿಂದೆಯೇ ಆಸ್ಪತ್ರೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಸುಂದರ್ ರಾಜ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮೇಘನಾ ಮತ್ತು ಮಗು ಮನೆಯಲ್ಲೇ ಕ್ವಾರಂಟೈನ್ ಆಗಿದ್ದು, ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಮೀಳಾ ಮತ್ತು ಸುಂದರ್ ರಾಜ್ ದಂಪತಿಗೆ ಸ್ವಲ್ಪ ಪ್ರಮಾಣದಲ್ಲಿ ಕೊರೊನಾ ಲಕ್ಷಣ ಕಾಣಿಸಿಕೊಂಡಿದೆ. ಇಬ್ಬರಿಗೂ ವಯಸ್ಸಾದ ಕಾರಣ ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೇಘನಾ ಮತ್ತು ಮಗುವಿಗೆ ಯಾವುದೇ ಕೊರೊನಾ ಲಕ್ಷಣ ಕಾಣಿಸಿಕೊಂಡಿಲ್ಲ, ಇಬ್ಬರ ಆರೋಗ್ಯ ಉತ್ತಮ ವಾಗಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.

Meghana raj And her baby boy tested positive for Corona

ಈ ಮೊದಲು ಎರಡು ಬಾರಿ ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದ ಸುಂದರಿ ರಾಜ್ ಕುಟುಂಬಕ್ಕೆ ವರದಿ ನೆಗೆಟಿವ್ ಬಂದಿತ್ತು, ಆದರೆ ಈಗ ಪಾಸಿಟಿವ್ ಬಂದಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ತಿಂಗಳು ಮೇಘನಾ ರಾಜ್ ಕುಟುಂಬ ಮಗುವಿನ ತೊಟ್ಟಿಲ ಶಾಸ್ತ್ರ ಸಮಾರಂಭ ಮಾಡಿದ್ದರು. ಕುಟುಂಬದವರು ಮತ್ತು ಸ್ನೇಹಿತರು ಸಮಾರಂಭದಲ್ಲಿ ಭಾಗಿಯಾಗಿದ್ದರು.

ಈ ಹಿಂದೆ ಮೇಘನಾ ರಾಜ್ ಮೈದುನ ಧ್ರುವ ಸರ್ಜಾ ಹಾಗೂ ಅವರ ಪತ್ನಿ ಪ್ರೇರಣಾ ಅವರಿಗೆ ಕೊರೊನಾ ಪಾಟಿಸಿಟ್ ಬಂದಿತ್ತು. ನಂತರ ಸೋಂಕಿನಿಂದ ಚೇತರಿಸಿಕೊಂಡಿದ್ದರು.

More from Filmibeat

English summary
Meghana raj And her baby boy tested positive for Corona.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X