»   » ಕನ್ನಡದ ಎಲ್ಲ ಸ್ಟಾರ್ ನಟ-ನಟಿಯರನ್ನ ಹಿಂದಿಕ್ಕಿದ ಮೇಘನಾ ರಾಜ್

ಕನ್ನಡದ ಎಲ್ಲ ಸ್ಟಾರ್ ನಟ-ನಟಿಯರನ್ನ ಹಿಂದಿಕ್ಕಿದ ಮೇಘನಾ ರಾಜ್

Posted By:
Subscribe to Filmibeat Kannada
ಮೇಘನಾ ರಾಜ್ ಎಲ್ಲಾ ಸ್ಯಾಂಡಲ್ ವುಡ್ ಸ್ಟಾರ್ ಗಳನ್ನ ಹಿಂದಿಕ್ಕಿದ ನಟಿ | Filmibeat Kannada

ಸಾಮಾನ್ಯವಾಗಿ ಹೀರೋಗಳಿಗೆ ಹೆಚ್ಚು ಫಾಲೋವರ್ಸ್ ಮತ್ತು ಅಭಿಮಾನಿಗಳು ಇರ್ತಾರೆ ಎನ್ನುವುದು ನಂಬಿಕೆ ಹಾಗೂ ಅದು ಸತ್ಯ ಕೂಡ ಹೌದು. ಅದರಲ್ಲೂ ಕನ್ನಡದ ಸ್ಟಾರ್ ನಟರ ವಿಚಾರದಲ್ಲಿ ಇದು ನಿಜ.

ಸುದೀಪ್, ದರ್ಶನ್, ಪುನೀತ್ ರಾಜ್ ಕುಮಾರ್, ಯಶ್, ಹೀಗೆ ಬಹುತೇಕ ನಟರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳುತ್ತಿದ್ದಾರೆ. ಹೀಗಾಗಿ, ಫಾಲೋವರ್ಸ್ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.

ಇನ್ನು ನಾಯಕಿಯರ ವಿಚಾರಕ್ಕೆ ಬಂದ್ರೆ ರಮ್ಯಾ, ರಕ್ಷಿತಾ, ರಾಧಿಕಾ ಪಂಡಿತ್, ರಚಿತಾ ರಾಮ್ ಸೇರಿದಂತೆ ಹಲವು ನಾಯಕಿಯರು ಥಟ್ ಅಂತ ನೆನಪಾಗ್ತಾರೆ. ಆದ್ರೆ, ಫಾಲೋವರ್ಸ್ ಈ ವಿಚಾರಕ್ಕೆ ಬಂದ್ರೆ, ಸ್ಯಾಂಡಲ್ ವುಡ್ ನ ಎಲ್ಲ ಹೀರೋ, ಹೀರೋಯಿನ್ ಗಳನ್ನ ನಟಿ ಮೇಘನಾ ರಾಜ್ ಹಿಂದಿಕ್ಕಿದ್ದಾರೆ. ಮುಂದೆ ಓದಿ....

ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ತಾರೆ

ಮೇಘನಾ ರಾಜ್ ಕನ್ನಡದಲ್ಲಿ ಅತಿ ಹೆಚ್ಚು ಫೇಸ್ ಬುಕ್ ಫಾಲೋವರ್ಸ್ ಹೊಂದಿರುವ ನಟಿ. 25 ಲಕ್ಷಕ್ಕೂ (25,08,492) ಹೆಚ್ಚು ಮಂದಿ ಮೇಘನಾ ಅವರನ್ನ ಫಾಲೋ ಮಾಡ್ತಿದ್ದಾರೆ.

ದುರ್ಯೋಧನ ದರ್ಶನ್ ಮಡದಿ ಭಾನುಮತಿ ಲುಕ್ ಬಹಿರಂಗ

ನಾಯಕಿಯರೇ ಸ್ಟ್ರಾಂಗ್

ಫೇಸ್ ಬುಕ್ ನಲ್ಲಿ ಸ್ಟಾರ್ ನಟರಿಗೆ ಹೋಲಿಸಿದ್ರೆ, ನಾಯಕಿಯರೇ ಹೆಚ್ಚು ಸ್ಟ್ರಾಂಗ್ ಆಗಿದ್ದಾರೆ. ಪ್ರಿಯಾಮಣಿ (25,08,488), ರಾಗಿಣಿ (19,46,818), ರಮ್ಯಾ (15,23,552), ಸಂಜನಾ ಗಲ್ರಾನಿ (22,83,763) ಹಾಗೂ ರಾಧಿಕಾ ಪಂಡಿತ್ (8,33,363) ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ.

ಫೇಸ್ ಬುಕ್ ನಲ್ಲಿ ನಟರು ಹಿಂದೆ

ಟ್ವಿಟ್ಟರ್ ಗೆ ಹೋಲಿಸಿಕೊಂಡ್ರೆ ಫೇಸ್ ಬುಕ್ ನಲ್ಲಿ ಹಿಂದಿ ಬಿದ್ದಿರುವ ಸ್ಯಾಂಡಲ್ ವುಡ್ ನಟರು ಅಷ್ಟಾಗಿ ಆಕ್ಟಿವ್ ಆಗಿಲ್ಲ. ಚಾಲೆಂಜಿಂಗ್ ಸ್ಟಾರ್ ದರ್ಶನ್ (10,75,257), ಚಿರಂಜೀವಿ ಸರ್ಜಾ (6,04,354 ), ಯಶ್ (4,90,444) ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ.

ಮೇಘನಾ ರಾಜ್ ಬ್ಯುಸಿ

ನಟ ಸುಂದರ್ ರಾಜ್ ಮತ್ತು ಪ್ರಮೀಳಾ ಜೋಶಾಯ್ ದಂಪತಿಯ ಮುದ್ದಿನ ಮಗಳು ಮೇಘನಾ, ತೆಲುಗಿನ 'ಬೆಂಡು ಅಪ್ಪರಾವ್ RMP' ಚಿತ್ರದ ಮೂಲಕ ಸಿನಿ ವೃತ್ತಿ ಆರಂಭಿಸಿದರು. 2010 ರಲ್ಲಿ 'ಪುಂಡ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿದರು. ನಂತರ ಮಲಯಾಳಂ ಜಿಗಿದ ನಟಿ ಯಶಸ್ವಿ ನಟಿಯಾದರು. ನಂತರ 'ರಾಜಾಹುಲಿ', 'ಬಹುಪಾರಕ್, 'ಆಟಗಾರ', 'ಭುಜಂಗ', 'ಅಲ್ಲಮ', 'ನೂರೊಂದು ನೆನಪು', ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯ, ದರ್ಶನ್ ಅಭಿನಯಿಸುತ್ತಿರುವ 'ಕುರುಕ್ಷೇತ್ರ' ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ನಿಶ್ಚಿತಾರ್ಥದ ನಂತರ ಮೇಘನಾ ರಾಜ್ ಹೊಸ ಸಿನಿಮಾ ಶುರು

English summary
Kannada Actress Meghana Raj have more followers in Kannada film industry. she has over 25 lakh followers in her Facebook account.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X