»   » ಎಚ್.ಎಂ.ರೇವಣ್ಣ ಪುತ್ರನ ಜೊತೆ ಮೇಘನಾ ರೋಮ್ಯಾನ್ಸ್

ಎಚ್.ಎಂ.ರೇವಣ್ಣ ಪುತ್ರನ ಜೊತೆ ಮೇಘನಾ ರೋಮ್ಯಾನ್ಸ್

Posted By:
Subscribe to Filmibeat Kannada

ಇತ್ತೀಚೆಗಷ್ಟೇ 'ಚಾರ್ಮಿನಾರ್' ಚಂದ್ರು ಅವರ ಹೊಸ ಚಿತ್ರ 'ಲಕ್ಷ್ಮಣ' ಸೆಟ್ಟೇರಿದ ವಿಚಾರ ಗೊತ್ತಲ್ವಾ. ರಾಜಕಾರಣಿ ಎಚ್.ಎಂ.ರೇವಣ್ಣ ಪುತ್ರ ಅನೂಪ್ 'ಲಕ್ಷ್ಮಣ' ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಡುತ್ತಿರುವುದೂ ಹಳೇ ಸುದ್ದಿ. ಈಗ ಇದೇ 'ಲಕ್ಷ್ಮಣ' ಅಡ್ಡದಿಂದ ಖಾಸ್ ಖಬರ್ ಹೊರಬಿದ್ದಿದೆ.

ಅನೂಪ್ ರೇವಣ್ಣ ಜೊತೆ ರೋಮ್ಯಾನ್ಸ್ ಮಾಡುವ ಹೀರೋಯಿನ್ ಹುಡುಕಾಟದಲ್ಲಿ ಇಲ್ಲಿವರೆಗೂ ಆರ್.ಚಂದ್ರು ಬಿಜಿಯಾಗಿದ್ದರು. ಈಗ ಅವರ ಕಣ್ಣಿಗೆ ಹಿರಿಯ ನಟ ಸುಂದರ್ ರಾಜ್ ಪುತ್ರಿ ಮೇಘನಾ ರಾಜ್ ಬಿದ್ದಿದ್ದಾರೆ. [ರಾಜಕಾರಣಿ ಪುತ್ರನ ಕೈಲಿ ಲಾಂಗು-ಗನ್ ಕೊಟ್ಟ ಚಂದ್ರು]

Meghana Raj is roped into play lead in R.Chandru's 'Lakshmana'

'ಲಕ್ಷ್ಮಣ' ಚಿತ್ರದ ಮೂಹೂರ್ತ ಸಂದರ್ಭದಲ್ಲಿ ''ಸ್ಯಾಂಡಲ್ ವುಡ್ ಹೀರೋಯಿನ್ ಗಳಿಗೆ ಜಾಸ್ತಿ ಆದ್ಯತೆ ನೀಡುತ್ತೇನೆ. ಸದ್ಯದಲ್ಲೇ ಒಬ್ಬರನ್ನ ಸೆಲೆಕ್ಟ್ ಮಾಡಲಾಗುತ್ತೆ.'' ಅಂತ ಹೇಳಿದ್ದರು. ಈಗ ಕನ್ನಡದ ಹುಡುಗಿ ಮೇಘನಾ ರಾಜ್ ರನ್ನ ಆಯ್ಕೆ ಮಾಡಿದ್ದಾರೆ ಆರ್.ಚಂದ್ರು. [ಆರ್.ಚಂದ್ರು ನಿರ್ದೇಶನದಲ್ಲಿ ಎಚ್.ಎಂ.ರೇವಣ್ಣ ಪುತ್ರ ಅನೂಪ್ ಎಂಟ್ರಿ]

Meghana Raj is roped into play lead in R.Chandru's 'Lakshmana'

"ಎ ಪ್ಯೂರ್ ಲವರ್ ಬಾಯ್" ಎಂಬ ಅಡಿಬರಹ ಇರುವ 'ಲಕ್ಷ್ಮಣ' ಪಕ್ಕಾ ಆಕ್ಷನ್ ಜೊತೆಗೆ ಲವ್, ಸೆಂಟಿಮೆಂಟ್, ಕಾಮಿಡಿ ಟಚ್ ಇರುವ ಚಿತ್ರ. ಬರುವ ಜುಲೈ 1 ರಿಂದ ಬೆಂಗಳೂರು, ಹೈದರಾಬಾದ್ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಚಿತ್ರೀಕರಣಕ್ಕೆ ಚಾಲನೆ ನೀಡಲಿದ್ದಾರೆ ಚಂದ್ರು.

English summary
Director R.Chandru has finally selected Meghana Raj to play lead opposite Anup Revanna in Kannada movie 'Lakshmana'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada