»   » ಮೈದುನನ ಚಿತ್ರಕ್ಕೆ ಮೇಘನಾ ನಿರ್ಮಾಪಕಿ: 'ಸರ್ಪ್ರೈಸ್' ಎಂದ ನಟಿ.!

ಮೈದುನನ ಚಿತ್ರಕ್ಕೆ ಮೇಘನಾ ನಿರ್ಮಾಪಕಿ: 'ಸರ್ಪ್ರೈಸ್' ಎಂದ ನಟಿ.!

Posted By:
Subscribe to Filmibeat Kannada

ನಟಿ ಮೇಘನಾ ರಾಜ್ ಮತ್ತು ನಟ ಚಿರಂಜೀವಿ ಸರ್ಜಾ ಅವರ ನಿಶ್ಚಿತಾರ್ಥ ಕಳೆದ ವಾರವಷ್ಟೇ ಬೆಂಗಳೂರಿನಲ್ಲಿ ಅದ್ಧೂರಿಯಾಗಿದೆ ನಡೆದಿದೆ. ಎಂಗೇಜ್ ಮೆಂಟ್ ಮುಗಿಸಿಕೊಂಡ ಇಬ್ಬರು ಹೊಸ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಈ ಮಧ್ಯೆ ನಟಿ ಮೇಘನಾ ರಾಜ್ ಅವರ ಬಗ್ಗೆ 'ಸರ್ಪ್ರೈಸ್' ಸುದ್ದಿಯೊಂದು ಕೇಳಿ ಬಂದಿದೆ. ದಕ್ಷಿಣ ಭಾರತದ ಯಶಸ್ವಿ ನಟಿಯಾಗಿರುವ ಮೇಘನಾ, ಈಗ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದಾರಂತೆ.

ತಮ್ಮ ಚೊಚ್ಚಲ ಚಿತ್ರಕ್ಕೆ ತಮ್ಮ ಭಾವಿ ಮೈದುನ (ಧ್ರುವ ಸರ್ಜಾ) ನಾಯಕನನ್ನಾಗಿಸಲಿದ್ದಾರೆ ಎಂಬ ಸುದ್ದಿ ವರದಿಯಾಗಿವೆ. ಇದು ನಿಜನಾ ಎನ್ನುವಷ್ಟರಲ್ಲಿ ಸ್ವತಃ ಮೇಘನಾ ಈ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಮುಂದೆ ಓದಿ.....

ಧ್ರುವ ಚಿತ್ರಕ್ಕೆ ಮೇಘನಾ ಪ್ರೊಡ್ಯೂಸರ್.!

ಧ್ರುವ ಸರ್ಜಾ ನಟನೆ ಮಾಡಲಿರುವ ಚಿತ್ರವೊಂದನ್ನ ಮೇಘನಾ ನಿರ್ಮಾಣ ಮಾಡಲಿದ್ದಾರೆ ಎಂಬ ಸುದ್ದಿ ಈಗ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಈ ಸುದ್ದಿ ಕೇಳಿ ಧ್ರುವ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ.

ಫೋಟೋ ಆಲ್ಬಂ: ಲೀಲಾ ಪ್ಯಾಲೇಸ್ ನಲ್ಲಿ ಚಿರು-ಮೇಘನಾ 'ರಾಯಲ್' ನಿಶ್ಚಿತಾರ್ಥ

ಸರ್ಪ್ರೈಸ್ ಎಂದ ಮೇಘನಾ

ಈ ಸುದ್ದಿಗಳು ಮಾಧ್ಯಮದಲ್ಲಿ ವರದಿಯಾಗಿದ್ದನ್ನ ಗಮನಿಸಿದ ಮೇಘನಾ ರಾಜ್ ''ಇದು ನನಗೂ ಕೂಡ ಸರ್ಪ್ರೈಸ್'' ಎಂದು ಪ್ರತಿಕ್ರಿಯಿಸಿದ್ದಾರೆ.

ಇದು ಗಾಸಿಪ್ ಅಷ್ಟೇ.!

ಈ ಬಗ್ಗೆ ತಮ್ಮ ಟ್ವಿಟ್ಟರ್ ನಲ್ಲಿ ಸ್ಪಷ್ಟನೆ ನೀಡಿರುವ ಮೇಘನಾ '' ಇದು ನನಗೆ ಸರ್ಪ್ರೈಸ್ ತಂದಿದೆ. ಇದರಿಂದ ನಿಮಗೆ ಎಷ್ಟು ಸರ್ಪ್ರೈಸ್ ಆಗುತ್ತಿದೆಯೋ ಅಷ್ಟೇ ಸರ್ಪ್ರೈಸ್ ನನಗೂ ಆಗುತ್ತಿದೆ'' ಎಂದು ಹೇಳುವ ಮೂಲಕ ಇದು ಕೇವಲ ಗಾಸಿಪ್ ಅಷ್ಟೇ ಎಂದಿದ್ದಾರೆ.

ಅಣ್ಣ - ಅತ್ತಿಗೆ ಜೋಡಿ ನೋಡಿ ನಟ ಧ್ರುವ ಸರ್ಜಾ ಹೀಗೆ ಹೇಳುತ್ತಾರೆ!

'ಇರುವುದೆಲ್ಲವ ಬಿಟ್ಟು' ಚಿತ್ರದಲ್ಲಿ ಮೇಘನಾ

ಸದ್ಯ, ಮೇಘನಾ ರಾಜ್ ಕಾಂತ ಕನ್ನಲ್ಲಿ ನಿರ್ದೇಶನ ಮಾಡುತ್ತಿರುವ 'ಇರುವುದೆಲ್ಲವಬಿಟ್ಟು' ಎಂಬ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇದಾದ ನಂತರ ಮುಸ್ಸಂಜೆ ಮಹೇಶ್ ನಿರ್ದೇಶನದ ಚಿತ್ರದಲ್ಲಿ ಮೇಘನಾ ಅಭಿನಯಿಸಲಿದ್ದಾರೆ.

ನಿಶ್ಚಿತಾರ್ಥದ ನಂತರ ಮೇಘನಾ ರಾಜ್ ಹೊಸ ಸಿನಿಮಾ ಶುರು

ಧ್ರುವ ಮುಂದಿನ ಸಿನಿಮಾ ಯಾವುದು?

ನಂದಕಿಶೋರ್ ನಿರ್ದೇಶನ ಮಾಡಲಿರುವ ಪೊಗರು ಚಿತ್ರದಲ್ಲಿ ಧ್ರುವ ಸರ್ಜಾ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಆದ್ರೆ, ಇದೊಂದು ರೀಮೇಕ್ ಸಿನಿಮಾ ಎಂಬ ಕಾರಣಕ್ಕೆ ಈ ಚಿತ್ರದಿಂದ ಹೊರಬಂದಿದ್ದಾರೆ ಎಂದು ಸುದ್ದಿ ಕೇಳಿಬರುತ್ತಿದೆ.

'ಭರ್ಜರಿ' ಗೆದ್ದರೂ ಧ್ರುವ ಸರ್ಜಾ ಮುಂದಿನ ಚಿತ್ರಕ್ಕೆ ಎದುರಾದ ಕಂಟಕ !

English summary
Actress Meghana Raj will Not Producing the Dhruva Sarja movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada