For Quick Alerts
  ALLOW NOTIFICATIONS  
  For Daily Alerts

  ನನಗೆ ಅವಳಿ ಮಕ್ಕಳಾಗಬೇಕು ಎನ್ನುವ ಆಸೆಯಿತ್ತು; ನಟಿ ಮೇಘನಾ ರಾಜ್

  |

  ಮೇಘನಾ ರಾಜ್ ಮುದ್ದು ಪುತ್ರನಿಗೆ ಇಂದು ತೊಟ್ಟಿಲು ಶಾಸ್ತ್ರ ಮಾಡಲಾಗಿದೆ. ಶಾಸ್ತ್ರೋಕ್ತವಾಗಿ ಹಿರಿಯರ, ಗುರುಗಳ ಸಮ್ಮುಖದಲ್ಲಿ ಈ ಕಾರ್ಯವನ್ನು ನೆರವೇರಿಸಲಾಗಿದೆ.

  ಚಿಂಟುಗೋಸ್ಕರ ನಾನು ತುಂಬಾ ಸ್ಟ್ರಾಂಗ್ ಆಗಿ ಇದ್ದೀನಿ | Meghana Raj | Filmibeat Kannada

  ಮೇಘನಾ ರಾಜ್ ಕಳೆದ ತಿಂಗಳು ಅಕ್ಟೋಬರ್ 22ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇದೀಗ 20 ದಿನಗಳ ಬಳಿಕ ಮೇಘನಾ ಮನೆಯಲ್ಲಿ ತೊಟ್ಟಿಲ ಶಾಸ್ತ್ರದ ಕಾರ್ಯಕ್ರಮವನ್ನು ಮಾಡಲಾಗಿದೆ. ಬೆಂಗಳೂರಿನ ಜೆಪಿ ನಗರದ ನಿವಾಸದಲ್ಲಿ ಮೇಘನಾ ರಾಜ್ ಮುದ್ದಾದ ಮಗುವಿಗೆ ತೊಟ್ಟಿಲ ಶಾಸ್ತ್ರ ಸಮಾರಂಭ ನಡೆಸಲಾಗಿದೆ.

  ಮೇಘನಾ ರಾಜ್ ಮಗುವಿನ ತೊಟ್ಟಿಲು ಸಾಮಾನ್ಯದ್ದಲ್ಲ: ಇದೆ ವಿಶೇಷತೆ

  ಇದೆ ಸಮಯದಲ್ಲಿ ಮೇಘನಾ ರಾಜ್ ಮಾಧ್ಯಮದವರ ಜೊತೆ ಮಾತನಾಡಿದ್ದಾರೆ. ಚಿರಂಜೀವಿ ನಿಧನದ ಬಳಿಕ ಮೇಘನಾ ಮೊದಲ ಬಾರಿಗೆ ಮನಬಿಚ್ಚಿ ಮಾತನಾಡಿದ್ದಾರೆ. ಅವಳಿ ಮಕ್ಕಳಾಗಬೇಕು ಎನ್ನುವ ಆಸೆ ಇತ್ತು ಎಂದು ಹೇಳಿದ್ದಾರೆ. ಮೇಘನಾ ರಾಜ್ ಗೆ ಅವಳಿ ಮಕ್ಕಳು ಎನ್ನುವ ಸುದ್ದಿ ವೈರಲ್ ಆಗಿತ್ತು. ಎಲ್ಲರೂ ಮೇಘನಾಗೆ ಅವಳಿ ಮಕ್ಕಳು ಅಂತನೆ ಅಂದುಕೊಂಡಿದ್ದರು. ಈ ಬಗ್ಗೆ ಮೇಘನಾ ಮಾತನಾಡಿದ್ದಾರೆ.

  'ಅವಳಿ ಮಕ್ಕಳಾಗುತ್ತೆ ಎಂದು ಅನೇಕರು ಫೋಟೋಗಳನ್ನು ಎಡಿಟ್ ಮಾಡಿ ವೈರಲ್ ಮಾಡಿದ್ದರು. ನನಗೆ ಎಲ್ಲೋ ಭರವಸೆ ಇತ್ತು. ಯಾಕೆಂದರೆ ಸಿಂಗಲ್ ಮಗು ಎಂದು ಹೇಳಿ, ಬಳಿಕ ಹೆರಿಗೆ ಸಮಯದಲ್ಲಿ ಅವಳಿ ಮಕ್ಕಳಾಗಿತ್ತು ಎನ್ನುವ ಸುದ್ದಿ ಕೇಳಿದ್ದೆ. ಹಾಗಾಗಿ ನನಗೂ ಎಲ್ಲೋ ಒಂದು ಕಡೆ ಬರವಸೆ ಇತ್ತು.'

  'ನಾನು ಡಾಕ್ಟರ್ ನ ಮೊದಲು ಕೇಳಿದ್ದು, ಅವಳಿ ಮಕ್ಕಳಾಗುತ್ತಾ ಅಂತ. ನನಗೆ ಅವಳಿ ಮಕ್ಕಳಾಗಬೇಕು ಎನ್ನುವ ಆಸೆ ಇತ್ತು. ಡಾಕ್ಟರ್ ನ ಕೇಳುತ್ತಿದ್ದೆ, ಮಿರಾಕಲಿ ಅವಳಿ ಮಕ್ಕಳು ಆಗಿಬಿಟ್ಟಿದ್ದರೆ ಚೆನ್ನಾಗಿರುತ್ತಿತ್ತು. ಆದರೆ ಅವಳಿ ಮಕ್ಕಳಿಗಿಂತ ಹೆಚ್ಚಾಗಿ ಅವನೊಬ್ಬನೆ ಬಂದಿದ್ದಾನೆ' ಎಂದು ಖುಷಿ ಪಟ್ಟರು.

  English summary
  The Cradle ceremony of Meghana Raj's son held on November 12th. Meghana Raj once expected to have twins

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X