For Quick Alerts
  ALLOW NOTIFICATIONS  
  For Daily Alerts

  ವಿಡಿಯೋ ವೈರಲ್; ಮೇಘನಾ ರಾಜ್ ಹೆಸರಿನಲ್ಲಿ ಮೂಡಿದ ಚಿರಂಜೀವಿ ಫೋಟೋ

  |

  ನಟ ಚಿರಂಜೀವಿ ಅಗಲಿಕೆಯ ಬಳಿಕ ಅವರ ಅಭಿಮಾನಿಗಳು ಒಂದಲ್ಲೊಂದು ರೀತಿಯಲ್ಲಿ ಅವರನ್ನು ನೆನಪಿಸಿಕೊಳ್ಳುತ್ತಿರುತ್ತಾರೆ. ಇದೀಗ ಅಭಿಮಾನಿಯೊಬ್ಬನ ಕೈಯಲ್ಲಿ ಅರಳಿದ ಚಿರಂಜೀವಿ ಫೋಟೋವೀಗ ಎಲ್ಲರ ಗಮನ ಸೆಳೆಯುತ್ತಿದೆ. ಮೇಘನಾ ರಾಜ್ ಹೆಸರನ್ನು ಬಳಸಿ ಕಲಾವಿದ ಚಿರಂಜೀವಿ ಅವರ ಫೋಟೋವನ್ನು ಬಿಡಿಸಿದ್ದಾರೆ.

  ಮೇಘನಾ ಹೆಸರಿನಲ್ಲಿ ಅರಳಿದ ಪತಿಯ ಫೋಟೋಗೆ ಮೇಘನಾ ಫಿದಾ ಆಗಿದ್ದಾರೆ. ಅಭಿಮಾನಿ ಫೋಟೋ ಬಿಡಿಸುತ್ತಿರುವ ವಿಡಿಯೋವನ್ನು ಮೇಘನಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಮೇಘನಾ ಮತ್ತು ಚಿರು ಫ್ಯಾನ್ ಪೇಜ್ ಗಳಲ್ಲೂ ಹರಿದಾಡುತ್ತಿದ್ದು, ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

  ಇತ್ತೀಚಿಗೆ ಮೇಘನಾ ರಾಜ್ ಅವರ ಸೀಮಂತದ ಫೋಟೋವೊಂದನ್ನು ಕಲಾವಿದ ಕರಣ್ ಆಚಾರ್ಯ ಎಡಿಟ್ ಮಾಡಿದ್ದರು. ಮೇಘನಾ ಕೈ ಹಿಡಿದು ಚಿರಂಜೀವಿ ಕರೆದುಕೊಂಡು ಹೋಗುತ್ತಿರುವ ಹಾಗೆ ಎಡಿಟ್ ಮಾಡಿದ್ದರು. ಈ ಫೋಟೋ ಸಹ ನೆಟ್ಟಿಗರ ಹೃದಯ ಮುಟ್ಟಿತ್ತು. ಸೀಮಂತ ಸಮಯದಲ್ಲಿ ಗಂಡ ಜೊತೆಯಲ್ಲಿರಬೇಕು ಎಂಬ ಆಸೆ, ಕನಸು ಪ್ರತಿಯೊಬ್ಬ ಪತ್ನಿಗೂ ಇರುತ್ತೆ. ಕಲಾವಿದ ಕರಣ್ ಆಚಾರ್ಯ ಆ ಆಸೆಯನ್ನು ಫೋಟೋ ರೂಪದಲ್ಲಿ ನೆರವೇರಿಸಿದ್ದರು.

  ಮಲೆನಾಡ ಹುಡುಗಿ ಅಡಿಕೆ ಸುಲಿಯೋದು ನೋಡೋಕೆ ಎಷ್ಟು ಚೆಂದ | Asha Bhat | Filmibeat Kannada

  ಅಂದಹಾಗೆ ಮೇಘನಾ ಸದ್ಯ ಮುದ್ದು ಮಗುವಿನ ಆರೈಕೆಯಲ್ಲಿದ್ದಾರೆ. ಇತ್ತೀಚಿಗೆ ಮೇಘನಾ ಮಗು ಸೇರಿದಂತೆ ಇಡೀ ಕುಟುಂಬಕ್ಕೆ ಕೊರೊನಾ ಪಾಸಿಟಿವ್ ಬಂದಿತ್ತು. ಸುಂದರ್ ರಾಜ್ ಮತ್ತು ಪತ್ನಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಕೊಂಡಿದ್ದಾರೆ. ಮೇಘನಾ ಮತ್ತು ಮಗು ಮನೆಯಲ್ಲಿ ಕ್ವಾರಂಟೇನ್ ಆಗಿ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆದುಕೊಂಡಿದ್ದಾರೆ.

  English summary
  Kannada Actress Meghana Raj Shares Fan Art of Chiraranjeevi Sarja Potrait Created Using Her name in Instagram.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X