For Quick Alerts
  ALLOW NOTIFICATIONS  
  For Daily Alerts

  ಚಿರು ಇಲ್ಲದೇ ಮೇಘನಾ ಮೊದಲ ಹುಟ್ಟುಹಬ್ಬ: ಪುತ್ರನ ವಿಡಿಯೋ ಹಂಚಿಕೊಂಡ ನಟಿ

  |

  ಸ್ಯಾಂಡಲ್ ವುಡ್ ನಟಿ ಮೇಘನಾ ರಾಜ್ ಇಂದು ಹುಟ್ಟಿದ ದಿನ. ಪ್ರತಿವರ್ಷ ಸ್ನೇಹಿತರು, ಕುಟುಂಬದವರು ಮತ್ತು ಪತಿ ಚಿರಂಜೀವಿ ಸರ್ಜಾ ಜೊತೆ ಸಂಭ್ರಮ, ಸಡಗರದಿಂದ ಹುಟ್ಟುಹಬ್ಬ ಆಚರಿಸುತ್ತಿದ್ದರು. ಆದರೆ ಚಿರು ಇಲ್ಲದೆ ಮೇಘನಾ ಪಾಲಿಗೆ ಇದು ಮೊದಲ ವರ್ಷದ ಹುಟ್ಟುಹಬ್ಬ.

  ಮನ ಮುಟ್ಟುವಂತಿದೆ ಚಿರು ಫೋಟೋ‌ ಮುಂದೆ ಮಗನ ಆಟದ ವಿಡಿಯೋ | Filmibeat Kannada

  ಪತಿಯ ನೆನಪಿನ ಜೊತೆಗೆ ಮುದ್ದು ಮಗನ ಜೊತೆ ಮೊದಲ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ ಮೇಘನಾ ಹುಟ್ಟುಹಬ್ಬಕ್ಕೂ ಒಂದು ಮೊದಲು ಚಿರಂಜೀವಿ ಜೊತೆ ಹಸೆಮಣೆ ಏರಿದ್ದಾರೆ. ಮೇ 3 ಮೇಘನಾ ಹುಟ್ಟುಹಬ್ಬವಾದರೇ, ಮೇ 2 ಮೇಘನಾ ಮತ್ತು ಚಿರಂಜೀವಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಿನ.

  'ಮರಳಿ ಬಾ ಚಿರು...' ಎಂದು ಭಾವುಕರಾದ ನಟಿ ಮೇಘನಾ ರಾಜ್

  ಮೇಘನಾ ಹುಟ್ಟುಹಬ್ಬಕ್ಕೆ ಸ್ನೇಹಿತರು, ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಹುಟ್ಟುಹಬ್ಬದ ಶುಭಾಶಯ ತಿಳಿಸುತ್ತಿದ್ದಾರೆ. ಇನ್ನು ಮದುವೆ ವಾರ್ಷಿಕೋತ್ಸವದ ದಿನ ಜೂ.ಚಿರು ವಿಡಿಯೋವನ್ನು ಹಂಚಿಕೊಂಡಿದ್ದಾರೆ.

  ಚಿರು ಫೋಟೋ ಮುಂದೆ ಜೂ.ಚಿರು ಆಟವಾಡುತ್ತಿರುವ ವಿಡಿಯೋ ಮನಮುಟ್ಟುವಂತಿದೆ. ವಿಡಿಯೋಗೆ ಅನೇಕ ಗಣ್ಯರು ಪ್ರತಿಕ್ರಿಯೆ ನೀಡಿ ಹಾರ್ಟ್ ಇಮೋಜಿ ಹಾಕಿದ್ದಾರೆ.

  2009ರಲ್ಲಿ ತೆಲುಗು ಸಿನಿಮಾರಂಗದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಮೇಘನಾ ಬಳಿಕ ಪುಂಡ ಸಿನಿಮಾ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾರಂಗದಲ್ಲೂ ಮೇಘನಾ ನಟಿಸಿ ಸೈ ಎನಿಸಿಕೊಂಡಿದ್ದಾರೆ.

  ಕೊನೆಯದಾಗಿ ಮೇಘನಾ ಕುರುಕ್ಷೇತ್ರ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಸದ್ಯ ಮುದ್ದು ಮಗನ ಆರೈಕೆಯಲ್ಲಿ ಬ್ಯುಸಿಯಾಗಿರುವ ಮೇಘನಾ ಮತ್ತೆ ಬಣ್ಣಹಚ್ಚಲಿ ಎನ್ನುವುದು ಅಭಿಮಾನಿಗಳ ಆಶಯ.

  English summary
  Happy Birthday Meghana Raj: Meghana Raj shares her son video in front of Chiranjeevi photo.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X