»   » 'ದಯವಿಟ್ಟು ಗಮನಿಸಿ' ಚಿತ್ರದ ಹಾಟ್ ಸಾಂಗ್ ನಲ್ಲಿ ಮೇಘನಾ ರಾಜ್

'ದಯವಿಟ್ಟು ಗಮನಿಸಿ' ಚಿತ್ರದ ಹಾಟ್ ಸಾಂಗ್ ನಲ್ಲಿ ಮೇಘನಾ ರಾಜ್

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಟಿ ಮೇಘನಾ ರಾಜ್ ಈಗ ಹಾಟ್ ಸಾಂಗ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೆ 'ಜಿಂದಾ' ಮತ್ತು 'ನೂರೊಂದು ನೆನಪು' ಚಿತ್ರಗಳಲ್ಲಿ ನಟಿಸಿದ್ದ ಮೇಘನಾ ರಾಜ್ ಈಗ 'ದಯವಿಟ್ಟು ಗಮನಿಸಿ' ಸಿನಿಮಾದ ಸ್ಪೆಷಲ್ ಸಾಂಗ್ ನಲ್ಲಿ ಹೆಜ್ಜೆ ಹಾಕಲಿದ್ದಾರೆ.

ಈಗಾಗಲೇ 'ದಯವಿಟ್ಟು ಗಮನಿಸಿ' ಸಿನಿಮಾದಲ್ಲಿ ಮೇಘನಾ ರಾಜ್ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಲುಕ್ ಹೊರಬಿದ್ದಿದೆ. ಈ ಹಾಡಿಗಾಗಿ ಸಖತ್ ಬೋಲ್ಡ್ ಆಗಿರುವ ಮೇಘನಾ 'ನೀರ್ ದೋಸೆ' ಚಿತ್ರದ ಹರಿಪ್ರಿಯಾ ಅವರಂತೆ ಮಿಂಚಿದ್ದಾರೆ. ಅಂದ್ಹಾಗೆ, ಇದೇ ಮೊದಲ ಬಾರಿಗೆ ಮೇಘನಾ ರಾಜ್ ಈ ರೀತಿಯ ಒಂದು ಹಾಡಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಜೊತೆಗೆ ಇದೇ ಹಾಡಿನಲ್ಲಿ ಮೇಘನಾ ಅರೆ ನಗ್ನಳಾಗಿ ಬೆನ್ನು ತೋರಿಸಿದ್ದಾರಂತೆ.

Meghana Raj Special Song In Dayavittu Gamanisi

ಅನೂಪ್ ಸೀಳಿನ್ ಸಂಗೀತದಲ್ಲಿ ಬಂದ ಈ ಹಾಡು ಕೇಳುಗರಿಗೆ ಹೊಸ ಫೀಲ್ ನೀಡಲಿದೆಯಂತೆ. ಅರಸು ಅಂತಾರೆ ಸಾಹಿತ್ಯ ಬರೆದಿದ್ದು, ರೋಹಿತ್ ಪದಕಿ ನಿರ್ದೇಶನ ಚಿತ್ರಕ್ಕಿದೆ. ರಘು ಮುಖರ್ಜಿ, ಸಂಯುಕ್ತ ಹೊರನಾಡು, ರಾಜೇಶ್ ನಟರಾಜ್, ವಸಿಷ್ಠ ಸಿಂಹ, ಸಂಗೀತಾ ಭಟ್, ಸುಕೃತಾ ವಾಗ್ಲೆ, ಭಾವನಾ ರಾವ್, ಪ್ರಕಾಶ್ ಬೆಳವಾಡಿ, ಸೇರಿದಂತೆ ಹಲವರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.

English summary
Kannada Actress Meghana Raj, is all set to shake her legs in Kannada Movie 'Dayavittu gamanisi'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada