»   » ಮೇಘನಾ ಮದುವೆಗೆ ಸಿಗುತ್ತಿರೊ ಸ್ಪೆಷಲ್ ಗಿಫ್ಟ್ ಇದು

ಮೇಘನಾ ಮದುವೆಗೆ ಸಿಗುತ್ತಿರೊ ಸ್ಪೆಷಲ್ ಗಿಫ್ಟ್ ಇದು

Posted By:
Subscribe to Filmibeat Kannada
ಮದುವೆಗೂ ಮುನ್ನ ತಿಲಕ್ ಜೊತೆ ಕಾಣಿಸಿಕೊಂಡ ಮೇಘನಾ ರಾಜ್ | Filmibeat Kannada

ಮದುವೆ ಜೀವನದಲ್ಲಿ ಅತ್ಯಂತ ಸುಂದರವಾದ ಕ್ಷಣಗಳನ್ನ ಕಟ್ಟಿಕೊಡುವ ಸಂದರ್ಭ. ಮದುವೆ ಸಮಾರಂಭ ಅಂದಾಗ ಸಾಕಷ್ಟು ಉಡುಗೊರೆಗಳು ಸಿಗುತ್ತಲೇ ಇರುತ್ತವೆ. ಸದ್ಯ ಸ್ಯಾಂಡಲ್ ವುಡ್ ನಲ್ಲಿ ನಟಿ ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಅವರ ಮದುವೆ ಸಂಭ್ರಮ ಕಳೆಗಟ್ಟಿದೆ. ಮೇಘನಾ ರಾಜ್ ಮದುವೆಗೆ ಸಿನಿಮಾತಂಡದಿಂದ ವಿಶೇಷ ಉಡುಗೊರೆಯನ್ನು ನೀಡಲು ಚಿತ್ರದ ನಿರ್ದೇಶಕರು ತಯಾರು ಮಾಡಿದ್ದಾರೆ.

ಹೌದು ನಟಿ ಮೇಘನಾ ರಾಜ್ ಅಭಿನಯದ 'ಇರುವುದೆಲ್ಲವ ಬಿಟ್ಟು' ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಲು ತಯಾರಿ ಮಾಡಿಕೊಂಡಿದ್ದಾರೆ. ಮೇಘನಾ ಮತ್ತು ಚಿರು ಮೇ 2 ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಅಂದೇ ಚಿತ್ರದ ಟ್ರೇಲರ್ ಕೂಡ ರಿಲೀಸ್ ಆಗಲಿದೆ. ಇರುವುದೆಲ್ಲವ ಬಿಟ್ಟು ಕಾಂತ ಕನ್ನಲಿ ನಿರ್ದೇಶನದ ಸಿನಿಮಾ ಚಿತ್ರದಲ್ಲಿ ಮೇಘನಾ ರಾಜ್ ನಾಯಕಿಯಾಗಿ ಅಭಿನಯಿಸಿದ್ದು ತಿಲಕ್, ಅಚ್ಚುತ್ ಕುಮಾರ್ ಹಾಗೂ ಶ್ರೀ ಮಹಾದೇವ್ ಕೂಡ ಸಿನಿಮಾದಲ್ಲಿ ಅಭಿನಯ ಮಾಡಿದ್ದಾರೆ.

ವಾರ ಪೂರ್ತಿ ನಡೆಯಲಿದೆ 'ಮೇಘನಾ-ಚಿರು' ಮದುವೆ ಸಂಭ್ರಮ

Meghana Raj starrer Kannada Film Iruvudellava Bittu trailer will be launched on May 2nd.

ಬಿಲ್ವಾ ಕ್ರಿಯೇಷನ್ಸ್ ಅಡಿಯಲ್ಲಿ ದೇವರಾಜ್ ದಾವಣಗೆರೆ ಚಿತ್ರವನ್ನ ನಿರ್ಮಾಣ ಮಾಡಿದ್ದು. ಇರುವುದೆಲ್ಲವ ಬಿಟ್ಟು ಸಿನಿಮಾದ ಚಿತ್ರೀಕರಣವನ್ನು ಕಂಪ್ಲೀಟ್ ಮಾಡಿದ್ದಾರೆ ನಿರ್ದೇಶಕರು. ಚಿತ್ರಕ್ಕೆ ಶ್ರೀಧರ್ ವಿ ಸಂಭ್ರಮ್ ಸಂಗೀತ ಸಂಯೋಜನೆ ಮಾಡಿದ್ದು ಸಿನಿಮಾ ಟೈಟಲ್ ಹಾಗೂ ಸಬ್ ಟೈಟಲ್ ನಿಂದ ಪ್ರೇಕ್ಷಕರಲ್ಲಿ ಚಿತ್ರದ ಬಗ್ಗೆ ಕೌತುಕ ಮೂಡಿಸಿದೆ.

Meghana Raj starrer Kannada Film Iruvudellava Bittu trailer will be launched on May 2nd.

ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿರುವ ಇರುವುದೆಲ್ಲವ ವಿಟ್ಟು ಸಿನಿಮಾ ಟೀಂ ಸದ್ಯ ಪೋಸ್ಟ್ ಪ್ರೊಡಕ್ಷನ್ಸ್ ನಲ್ಲಿ ಬ್ಯುಸಿ ಆಗಿದೆ. ಮೆಃನಾ ಮದುವೆಗೆ ಟ್ರೇಲರ್ ಗಿಫ್ಟ್ ನೀಡಲು ಮುಂದಾಗಿದ್ದು ಸದ್ಯ ಅದೇ ಕೆಲಸದಲ್ಲಿ ನಿರತವಾಗಿದೆ.

English summary
Kannada Actress Meghana Raj starrer Kannada Film 'Iruvudellava Bittu' trailer will be launched on May 2nd. Incidentally, Meghana Raj's marriage will be held on the same day. Meghana Raj is getting married to Kannada Actor Chiranjeevi Sarja.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X