For Quick Alerts
  ALLOW NOTIFICATIONS  
  For Daily Alerts

  ತಮಿಳು ನಟ ಸಿಂಬುಗೆ ಥ್ಯಾಂಕ್ಸ್ ಹೇಳಿದ ಮೇಘನಾ ರಾಜ್

  By Bharath Kumar
  |

  ನಟ ಚಿರಂಜೀವಿ ಸರ್ಜಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ನಟಿ ಮೇಘನಾ ರಾಜ್ ಮತ್ತೆ ತಮ್ಮ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ನಡುವೆ ತಮಿಳು ನಟ ಸಿಂಬುಗೆ ವಿಶೇಷವಾದ ಥ್ಯಾಂಕ್ಸ್ ಹೇಳಿದ್ದಾರೆ.

  ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಪಟ್ಟ ವಿಚಾರದಲ್ಲಿ ತಮಿಳು ನಟ ಸಿಂಬು, ಕನ್ನಡಿಗರ ಪರವಾಗಿ ಮಾತನಾಡಿ ಸುದ್ದಿಯಾಗಿದ್ದರು. ಹಾಗಂತ ಮೇಘನಾ ಥ್ಯಾಂಕ್ಸ್ ಹೇಳಿರುವುದು ಈ ವಿಚಾರಕ್ಕಲ್ಲ.

  ಬಿಡುಗಡೆಗೆ ಸಜ್ಜಾಗಿದೆ 'ಇರುವುದೆಲ್ಲವ ಬಿಟ್ಟು' ಸಿನಿಮಾಬಿಡುಗಡೆಗೆ ಸಜ್ಜಾಗಿದೆ 'ಇರುವುದೆಲ್ಲವ ಬಿಟ್ಟು' ಸಿನಿಮಾ

  ಮೇಘನಾ ರಾಜ್ ಮತ್ತು ತಿಲಕ್ ಅಭಿನಯದ 'ಇರುವುದೆಲ್ಲವ ಬಿಟ್ಟು' ಚಿತ್ರದ ಹಾಡಿಗೆ ನಟ ಸಿಂಬು ದನಿಯಾಗಿದ್ದಾರೆ. ಇದೇ ಮೊದಲ ಬಾರಿಗೆ ಕನ್ನಡ ಹಾಡೊಂದನ್ನ ಸಿಂಬು ಹಾಡಿದ್ದಾರೆ. ಹೀಗಾಗಿ, ತಮ್ಮ ಚಿತ್ರಕ್ಕೆ ಹಾಡೇಳಿರುವುದಕ್ಕೆ ಸಿಂಬುಗೆ, ಮೇಘನಾ ಧನ್ಯವಾದ ತಿಳಿಸಿದ್ದಾರೆ.

  ಇನ್ನು ಶ್ರೀಧರ್ ವಿ ಸಂಭ್ರಮ್ ಸಂಗೀತ ನಿರ್ದೇಶನದಲ್ಲಿ ತಯಾರಾಗಿರುವ ಈ ಸಿನಿಮಾದ ಆಡಿಯೋ ಬಿಡುಗಡೆ ಇದೇ ತಿಂಗಳು 25ನೇ ತಾರೀಖು ಬಿಡುಗಡೆಯಾಗುತ್ತಿದೆ.

  ಕಾಂತಕನ್ನಲ್ಲಿ ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಮಹೇಶ್ ಮಳವಳ್ಳಿ ಅವರ ಸಂಭಾಷಣೆ, ವಿಲಿಯಂ ಡೇವಿಡ್ ಅವರ ಛಾಯಾಗ್ರಹಣವಿದ್ದು, ಶ್ರೀಮಹದೇವ್, ಅಚ್ಯುತ್ ಕುಮಾರ್, ಅರುಣ ಬಾಲರಾಜ್, ಅಭಿಷೇಕ್ ರಾಯಣ್ಣ, ರಿಚರ್ಡ್ ಲೂಯಿಸ್ ಮುಂತಾದವರು ಅಭಿನಯಿಸಿದ್ದಾರೆ.

  English summary
  Kannada actress meghana raj announced the audio release date of kannada film 'iruvudellava bittu'. and she say thanks to Mr. Silambarasan aka Simbu for being a part of this team and supporting.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X