»   » ಹಿನ್ನಲೆ ಗಾಯಕಿಯಾದ ನಟಿ ಮೇಘನಾ ರಾಜ್

ಹಿನ್ನಲೆ ಗಾಯಕಿಯಾದ ನಟಿ ಮೇಘನಾ ರಾಜ್

Posted By:
Subscribe to Filmibeat Kannada

ನಟಿ ಮೇಘನಾ ರಾಜ್ ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಕೇವಲ ಅಭಿನಯ ಮಾತ್ರವಲ್ಲ, ಇತ್ತೀಚಿಗೆ ಗಾಯನದಲ್ಲೂ ಹೆಚ್ಚು ತೊಡಗಿಸಿಕೊಳ್ಳುತ್ತಿದ್ದಾರೆ. ತೆರೆಮೇಲೆ ತಮ್ಮ ನಟನೆಯಿಂದ ಮಿಂಚುವ ಮೇಘನಾ ಈಗ ತೆರೆಹಿಂದೆನೂ ಕಮಾಲ್ ಮಾಡುತ್ತಿದ್ದಾರೆ.[ಯಶಸ್ಸು ಅಂದ್ರೆ 6 ತಿಂಗಳಿಗೊಂದು ಸಿನಿಮಾ ಮಾಡೋದಲ್ಲ: ಮೇಘನಾ]

ಹೌದು, ಮೇಘನಾ ರಾಜ್ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವ 'ಜಿಂದಾ' ಚಿತ್ರದ ಹಾಡೊಂದಕ್ಕೆ ತಾವೇ ದ್ವನಿಯಾಗುತ್ತಿದ್ದಾರೆ. ಈ ಮೂಲಕ 'ಜಿಂದಾ' ಚಿತ್ರದಲ್ಲಿ ಕೇವಲ ನಾಯಕಿಯಾಗಿ ಮಾತ್ರವಲ್ಲದೇ ಗಾಯಕಿಯಾಗಿಯೂ ಬದಲಾಗಿದ್ದಾರೆ. ಮೇಘನಾ ಗಾಯಕಿಯಾಗಿರುವುದು ಇದೇ ಮೊದಲಲ್ಲ. ಈ ಹಿಂದೆ ಶ್ರೀನಗರ ಕಿಟ್ಟಿ ಹಾಗೂ ಮೇಘನಾ ರಾಜ್ ಅಭಿನಯದ 'ಬಹುಪರಾಕ್' ಚಿತ್ರದಲ್ಲಿ ಕೂಡ ಮೇಘನಾ ಹಾಡೊಂದಕ್ಕೆ ಧ್ವನಿಯಾಗಿದ್ದರು. ಇನ್ನೂ ಮಲಯಾಳಂ ಚಿತ್ರದಲ್ಲೂ ಮೇಘನಾ ಕಂಠದಲ್ಲಿ ಹಾಡು ಮೂಡಿಬಂದಿದೆ.['ನೂರೊಂದು ನೆನಪು'ಗಳಲ್ಲಿ ಚೇತನ್-ಮೇಘನಾ ರಾಜ್]

Meghana Raj Turns Playback Singer Again

ಅಂದ್ಹಾಗೆ, 'ಜಿಂದಾ' 1979-85ರ ವರೆಗಿನ ಸಮಯದಲ್ಲಿ ನಡೆದಂಥ ನೈಜಕಥೆಯನ್ನಾಧರಿಸಿದ ಚಿತ್ರ. ನಿರ್ದೇಶಕ ಮುಸ್ಸಂಜೆ ಮಹೇಶ್ ಈ ಕಥೆಯನ್ನ ನಿರ್ದೇಶನ ಮಾಡುತ್ತಿದ್ದು, ದತ್ತಾತ್ರೇಯ ಬಚ್ಚೇಗೌಡ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇನ್ನೂ ಶ್ರೀಧರ್ ವಿ.ಸಂಭ್ರಮ 'ಜಿಂದಾ' ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

Meghana Raj Turns Playback Singer Again

ಒಂದು ಹೆಣ್ಣಿನಿಂದ ಆರು ಜನ ಯುವಕರ ಜೀವನದಲ್ಲಿ ದೊಡ್ಡ ಅಲ್ಲೋಲ ಕಲ್ಲೋಲವೇ ನಡೆದು ಹೋಗುತ್ತೆ. ಆ ಘಟನೆಯ ಸುತ್ತಾವೇ ಚಿತ್ರಕಥೆಯನ್ನ ಎಣೆಯಲಾಗಿದ್ದು, ಆ ಹೆಣ್ಣಿನ ಪಾತ್ರದಲ್ಲಿ ಮೇಘನಾ ರಾಜ್ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಅರುಣ್, ಲೋಕಿ, ಕೃಷ್ಣ, ಯುವರಾಜ, ನಟ ಅನಿರುದ್ಧ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನೂ ವಿಶೇಷ ಪಾತ್ರದಲ್ಲಿ ಡೈನಾಮಿಕ್ ಹೀರೋ ದೇವರಾಜ್ ಅಭಿನಯಿಸುತ್ತಿದ್ದಾರೆ.

English summary
Kannada actress Meghana Raj is turns Playback singer For her upcoming film Zinda. The Movie Directed by mussanje mahesh

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada