For Quick Alerts
  ALLOW NOTIFICATIONS  
  For Daily Alerts

  ಮೇಘನಾ ರಾಜ್ ಆಸ್ಪತ್ರೆಗೆ ಭೇಟಿ ನೀಡಿದ ಬೆನ್ನಲ್ಲೇ ಆಸ್ಪತ್ರೆ ತಲುಪಿದ ಕುಟುಂಬದವರು

  |

  ಒಂಬತ್ತು ತಿಂಗಳ ತುಂಬು ಗರ್ಭಿಣಿ ನಟಿ ಮೇಘನಾ ರಾಜ್ ಇಂದು (ಅ.20) ಬೆಳಗ್ಗೆ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಕೆ ಆರ್ ರಸ್ತೆಯಲ್ಲಿರುವ ಅಕ್ಷ ಆಸ್ಪತ್ರೆಗೆ ಮೇಘನಾ ಭೇಟಿ ನೀಡಿದ್ದಾರೆ. ವೈದ್ಯರು ಡೆಲಿವರಿ ಡೇಟ್ ಕೊಟ್ಟ ಹಿನ್ನಲೆ ಇಂದೇ ಆಸ್ಪತ್ರೆಗೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ. ಗರ್ಭಿಣಿ ಆದಗಿಂದ ಮೇಘನಾ ಅಕ್ಷ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.

  ಇದ್ದಕ್ಕಿದ್ದಂತೆ ಆಸ್ಪತ್ರೆಗೆ ದಾಖಲಾದ Meghana Raj | Filmibeat Kannada

  ಮೇಘನಾ ರಾಜ್ ಆಸ್ಪತ್ರೆಗೆ ತೆರಳುತ್ತಿದ್ದಂತೆ ಮೇಘನಾ ಮತ್ತು ಸರ್ಜಾ ಕುಟುಂಬದವರು ಆಸ್ಪತ್ರೆಗೆ ದಾವಿಸಿದ್ದಾರೆ. ಅತ್ತಿಗೆ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ ಎನ್ನುವ ವಿಚಾರಗೊತ್ತಾಗುತ್ತಿದ್ದಂತೆ ಧ್ರುವ ಸರ್ಜಾ ಸಹ ಆಸ್ಪತ್ರೆಗೆ ಬಂದಿದ್ದಾರೆ. ಮೇಘನಾ ತಂದೆ ಸುಂದರ್ ರಾಜ್ ಮತ್ತು ತಾಯಿ ಪ್ರಮಿಳಾ ಜೊಶಾಯಿ ಮೇಘನಾ ಜೊತೆ ಆಸ್ಪತ್ರೆಗೆ ತೆರಳಿದ್ದಾರೆ.

  ಪ್ರೀತಿಯ ಪತಿ ಚಿರುಗೆ ಭಾವುಕ ಶುಭಾಶಯ ಕೋರಿದ ಮೇಘನಾ ರಾಜ್ಪ್ರೀತಿಯ ಪತಿ ಚಿರುಗೆ ಭಾವುಕ ಶುಭಾಶಯ ಕೋರಿದ ಮೇಘನಾ ರಾಜ್

  ಮೇಘನಾ ರಾಜ್ ಅಪ್ಪ-ಅಮ್ಮ ಸೇರಿದಂತೆ ಸರ್ಜಾ ಕುಟುಂಬದವರು ಆಸ್ಪತ್ರೆಗೆ ತೆರಳಿದ್ದಾರೆ. ಧ್ರುವ ಸರ್ಜಾ ಪತ್ನಿ ಪ್ರೇರಣಾ ತಾಯಿ ಅಮ್ಮಾಜಿ ಮೇಘನಾ ಜೊತೆ ಆಸ್ಪತ್ರೆಯಲ್ಲಿದ್ದಾರೆ. ಮೂಲಗಳ ಪ್ರಕಾರ ವೈದ್ಯರು ಇಂದೇ ಡೆಲಿವರಿ ಡೇಟ್ ಕೊಟ್ಟಿದ್ದಾರೆ, ಹಾಗಾಗಿ ಮೇಘನಾ ಆಸ್ಪತ್ರೆಗೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.

  ಅಂದ್ಹಾಗೆ ಇತ್ತೀಚಿಗಷ್ಟೆ ಮೇಘನಾ ರಾಜ್ ಅವರಿಗೆ ಸೀಮಂತ ಕಾರ್ಯಕ್ರಮ ಮಾಡಲಾಗಿತ್ತು. ಮೇಘನಾ ಮತ್ತು ಸರ್ಜಾ ಕುಟುಂಬ ಸೀಮಂತ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮೇಘನಾ ಮೊಗದಲ್ಲಿ ಸಂತಸ ಮೂಡಿಸಿದ್ದರು. ಅಕ್ಟೋಬರ್ 17 ಚಿರು ಸರ್ಜಾ ಹುಟ್ಟುಹಬ್ಬದ ದಿನವೇ ಮೇಘನಾ ರಾಜ್ ಗೆ ಡೆಲಿವರಿ ಡೇಟ್ ಕೊಟ್ಟಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಮೇಘನಾ ಮರಿ ಚಿರುಗೆ ಯಾವತ್ತು ಬರಬೇಕು ಎನಿಸುತ್ತೊ ಅವತ್ತು ಬರಲಿ ಎಂದು ಹೇಳಿದ್ದರು. ಅಲ್ಲದೆ ಮೇಘನಾಗೆ ಅವಳಿ ಮಕ್ಕಳು ಎನ್ನುವ ಮಾತು ಸಹ ಕೇಳಿಬರುತ್ತಿದೆ.

  English summary
  Actress Meghana Raj visits to hospital. Meghana And Sarja Family also with her in Hospital.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X