»   » ಮೇಘನಾ ರಾಜ್ ಮನೆಯಲ್ಲಿ ಅರಿಶಿಣ ಶಾಸ್ತ್ರ ಜೋರೋ ಜೋರು

ಮೇಘನಾ ರಾಜ್ ಮನೆಯಲ್ಲಿ ಅರಿಶಿಣ ಶಾಸ್ತ್ರ ಜೋರೋ ಜೋರು

Posted By:
Subscribe to Filmibeat Kannada
ಮೇಘನಾ ರಾಜ್ ಮನೆಯಲ್ಲಿ ಮದುವೆ ಸಂಭ್ರಮ ! | Filmibeat Kannada

ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಅವರ ಮದುವೆಗೆ ಇನ್ನು ಒಂದು ವಾರವಷ್ಟೇ ಬಾಕಿ ಇದೆ. ಎರಡು ಸಂಪ್ರದಾಯಗಳಂತೆ ಮದುವೆ ಕಾರ್ಯಕ್ರಗಳು ನಡೆಯುತ್ತಿದೆ. ಇದೇ ಕಾರಣಕ್ಕಾ ಈಗಾಗಲೇ ಮೇಘನಾ ರಾಜ್ ಅವರ ಮನೆಯಲ್ಲಿ ಮದುವೆಯ ಸಂಭ್ರಮ ಮನೆ ಮಾಡಿದೆ.

ಇಂದು (ಏಪ್ರಿಲ್ 25) ಮುಂಜಾನೆಯೇ ವಧು ಮೇಘನಾ ರಾಜ್ ಚಪ್ಪರ ಕಂಬಕ್ಕೆ ಪೂಜೆ ಸಲ್ಲಿಸುವ ಮೂಲಕ ಚಪ್ಪರ ಹಾಕುವ ಕಾರ್ಯಕ್ರಮಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಮೇಘನಾ ಮನೆಯಂಗಳದಲ್ಲಿ ಈಗಾಗಲೇ ಚಪ್ಪರ ಸಿಂಗಾರಗೊಂಡಿದೆ. ಅದರ ಬೆನ್ನಲ್ಲೇ ಅರಿಶಿನ ಶಾಸ್ತ್ರವನ್ನು ಮಾಡಿದ್ದಾರೆ.

Meghana Rajs wedding Arishina Shastra and Bale Shastra held at her house at JP nagar

ಹಿಂದೂ ಸಂಪ್ರದಾಯದಂತೆ ಇಂದಿನ ಶಾಸ್ತ್ರಗಳು ನಡೆದಿದ್ದು ಸುಂದರ್ ರಾಜ್ ಹಾಗೂ ಪ್ರಮೀಳಾ ಜೋಷಾಯಿ ಅವರ ಕುಟುಂಬಸ್ಥರೆಲ್ಲರೂ ಸೇರಿ ಮೇಘನಾಗೆ ಅರಿಶಿನ ಹಚ್ಚಿ ಶಾಸ್ತ್ರ ಮಾಡಿದ್ದಾರೆ. ಮನೆಯ ಮುಂಭಾಗದಲ್ಲಿ ಸಿದ್ದವಾಗಿದ್ದ ವೇದಿಕೆಯಲ್ಲಿ ಎಲ್ಲರೂ ಸೇರಿ ಸಂಪ್ರದಾಯಬದ್ಧವಾಗಿ ಅರಿಶಿನ ಹಚ್ಚಲಾಯ್ತು.

Meghana Rajs wedding Arishina Shastra and Bale Shastra held at her house at JP nagar

ಮಗಳ ಮದುವೆ ಆಹ್ವಾನದ ಜೊತೆ ಮಾಹಿತಿ ನೀಡಿದ ಸುಂದರ್ ರಾಜ್ ದಂಪತಿ

ಅರಿಶಿನದ ಜೊತೆಯಲ್ಲಿ ಬಳೆ ಶಾಸ್ತ್ರವನ್ನ ಮಾಡಲಾಯ್ತು ಇನ್ನು ಆರು ದಿನಗಳಷ್ಟೇ ಬಾಕಿ ಇರುವ ಮೇಘನಾ-ಚಿರು ಕಲ್ಯಾಣಕ್ಕೆ ಈಗಾಗಲೇ ಸಾಕಷ್ಟು ಸಂಬಂಧಿಕರು ಸುಂದರ್ ರಾಜ್ ಅವರ ಮನೆಗೆ ಬಂದಿದ್ದಾರೆ. ಹಳದಿ ಮತ್ತು ಬಳೆ ಶಾಸ್ತ್ರದಲ್ಲಿ ನಟಿ ಮೇಘನಾ ರಾಜ್ ಕೆಂಪು,ಬಿಳಿ, ನೀಲಿ ಮಿಶ್ರಣವಾಗಿರುವ ಕ್ರಾಪ್ ಟಾಪ್ ಹಾಗೂ ಸ್ಕರ್ಟ್ ಧರಿಸಿದ್ದರು.

ಚಿರು-ಮೇಘನಾ ಕಲ್ಯಾಣಕ್ಕೆ ಬರುವ ಅತಿಥಿಗಳು ಇವರೇ

English summary
Kannada actress Meghana Raj and Chiranjeevi Sarja will be married on May 2. Today Arishina Shastra and Bale Shastra held at Meghana Raj house at JP nagar Bangalore .

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X