Just In
Don't Miss!
- Lifestyle
ಗುರುವಾರದ ದಿನ ಭವಿಷ್ಯ: ಈ ದಿನ ಹೇಗಿದೆ ನಿಮ್ಮ ರಾಶಿಫಲ
- News
ಬೆಂಗಳೂರಿನಲ್ಲಿ ಭೀತಿ: ಕೊರೊನಾ ಹೆಚ್ಚು ರೆಮ್ಡೆಸಿವಿರ್ ಔಷಧಿ ಕಡಿಮೆ!
- Sports
ಐಪಿಎಲ್ ಇತಿಹಾಸದಲ್ಲಿ ಅಪರೂಪದ ದಾಖಲೆ ಬರೆದ ಆರ್ಸಿಬಿ!
- Automobiles
ಕೊನೆಯ ಆಸೆಯೆಂತೆ ರಾಜಕುಮಾರ ಪ್ರಿನ್ಸ್ ಫಿಲಿಪ್ ಅಂತಿಮ ಯಾತ್ರೆಗೆ ಸಿದ್ದವಾಗಿದೆ ಮಾಡಿಫೈ ಲ್ಯಾಂಡ್ ರೋವರ್
- Finance
ಚಿನ್ನ, ಬೆಳ್ಳಿ ಸ್ವಲ್ಪ ಕುಸಿತ: ಏಪ್ರಿಲ್ 14ರಂದು ಎಲ್ಲೆಡೆ ಬೆಲೆ ಎಷ್ಟಿದೆ?
- Education
SSLC Exams 2021: ಸಿಬಿಎಸ್ಇ ಪರೀಕ್ಷೆ ರದ್ದು ಬೆನ್ನಲ್ಲೇ ಎಸ್ಎಸ್ಎಲ್ಸಿ ಪರೀಕ್ಷೆ ಊಹಾಪೋಹ: ಸುರೇಶ್ ಕುಮಾರ್ ಸ್ಪಷ್ಟನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
2 ದಿನದಲ್ಲಿ 2 ಸಿನಿಮಾ ಹಾಡು ಹಾಡಿದ ಮೆಹಬೂಬ್ ಸಾಬ್!
ಜೀ ಕನ್ನಡ ವಾಹಿನಿಯ 'ಸರಿಗಮಪ ಸೀಸನ್ 13' ಕಾರ್ಯಕ್ರಮದ ಮುಗಿದ ಬಳಿಕ ಅಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳಿಗೆ ಸಿನಿಮಾದಲ್ಲಿ ಹಾಡುವ ಅವಕಾಶ ಸಿಕ್ಕಿದೆ. ಈಗ ಕಾರ್ಯಕ್ರಮದ ರನ್ನರ್ ಅಪ್ ಆಗಿದ್ದ ಮೆಹಬೂಬ್ ಸಾಬ್ ಅವರು ಕೂಡ ಸಿನಿಮಾದ ಹಾಡುಗಳಿಗೆ ಧ್ವನಿಯಾಗಿದ್ದಾರೆ.
ವಿಶೇಷ ಅಂದರೆ ಮೆಹಬೂಬ್ ಸಾಬ್ ಎರಡು ದಿನಕ್ಕೆ ಎರಡು ಸಿನಿಮಾ ಹಾಡಿನ್ನು ಹಾಡಿದ್ದಾರೆ. ನಿನ್ನೆ 'ರಾಂಬೋ 2' ಸಿನಿಮಾದ ಹಾಡು ಹಾಡಿದ್ದ ಮೆಹಬೂಬ್ ಸಾಬ್ ಇಂದು ಇನ್ನೊಂದು ಹಾಡಿನ ರೆಕಾರ್ಡಿಂಗ್ ನಲ್ಲಿ ಭಾಗಿಯಾಗಿದ್ದರು. ಅಂದಹಾಗೆ, 'ಸರಿಗಮಪ' ಕಾರ್ಯಕ್ರಮದ ತೀರ್ಪುಗಾರರ ಪೈಕಿ ಒಬ್ಬರಾಗಿದ್ದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮ್ಯೂಸಿಕ್ ನಲ್ಲಿ ಮೆಹಬೂಬ್ ಸಾಬ್ ಹಾಡಿದ್ದಾರೆ.
ಸಂದರ್ಶನ: ಜೀವನ ಮತ್ತು ಸ್ಪರ್ಧೆ.. ಎರಡರಲ್ಲೂ ಗೆದ್ದ ಮೆಹಬೂಬ್ ಸಾಬ್
ಅರ್ಜುನ್ ಜನ್ಯ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಮೆಹಬೂಬ್ ಸಾಬ್ ಜೊತೆಗಿನ ಫೋಟೋ ಹಾಕಿ ಮೆಹಬೂಬ್ ಸಾಬ್ ಹಾಡಿರುವ ಹಾಡಿನ ಬಗ್ಗೆ ತಿಳಿಸಿದ್ದಾರೆ. ಜೊತೆಗೆ ತರುಣ್ ಸುಧೀರ್ ಅವರಿಗೆ ಸಹ ಧನ್ಯವಾದ ಹೇಳಿದ್ದಾರೆ. ಅಂದಹಾಗೆ, 'ರಾಂಬೋ 2' ಸಿನಿಮಾ ಶರಣ್ ಮತ್ತು ಆಶಿಕಾ ರಂಗನಾಥ್ ಅಭಿನಯದ ಹೊಸ ಸಿನಿಮಾವಾಗಿದೆ. ಈ ಚಿತ್ರದ ಹೊರತಾಗಿ ಮೆಹಬೂಬ್ ಸಾಬ್ 'ಕತ್ತಲ ಕೋಣೆ' ಮತ್ತು 'ಸನ್ ಆಫ್ ವಿಷ್ಣುವರ್ಧನ' ಎಂಬ ಸಿನಿಮಾಗಳಲ್ಲಿಯೂ ಹಾಡು ಹಾಡಿದ್ದಾರೆ.
ಮೆಹಬೂಬ್ ಸಾಬ್ ಮಾತ್ರವಲ್ಲದೆ 'ಸರಿಗಮಪ ಸೀಸನ್ 13' ಕಾರ್ಯಕ್ರಮದ ಸ್ಪರ್ಧಿ ಆಗಿದ್ದ ಸಂಚಿತ್ ಹೆಗ್ಡೆ ಕೂಡ ಕೆಲ ಹಾಡನ್ನು ಈಗಾಗಲೇ ಹಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತದ 'ಕಾಲೇಜ್ ಕುಮಾರ' ಚಿತ್ರದ ಹಾಡಿಗೆ ಸಂಚಿತ್ ಧ್ವನಿಯಾಗಿದ್ದರು,