»   » 'ಕನ್ನಡಿಗರ ಶಕ್ತಿ ಏನೆಂದು ಅವರಿಗೆ ತೋರಿಸೋಣ'

'ಕನ್ನಡಿಗರ ಶಕ್ತಿ ಏನೆಂದು ಅವರಿಗೆ ತೋರಿಸೋಣ'

Posted By:
Subscribe to Filmibeat Kannada

'ನಮ್ಮ ನೀರಾವರಿ ಯೋಜನೆಗೆ ತಮಿಳುನಾಡಿನವರನ್ನು ಏಕೆ ಕೇಳಬೇಕು?, ಕನ್ನಡಿಗರು ಎಲ್ಲರೂ ಒಂದಾಗಿ ಅವರಿಗೆ ತಕ್ಕ ಪ್ರತ್ಯುತ್ತರ ನೀಡುವ ಅನಿವಾರ್ಯತೆ ಎದುರಾಗಿದೆ' ಇದು ಕರ್ನಾಟಕ ಬಂದ್‌ ವೇಳೆ ನಟ ಜಗ್ಗೇಶ್ ಹೇಳಿದ ಮಾತುಗಳು.

ಕರ್ನಾಟಕ ಸರ್ಕಾರದ ಮೇಕೆದಾಟು ಯೋಜನೆ ವಿರೋಧಿಸುತ್ತಿರುವ ತಮಿಳುನಾಡು ಕ್ರಮ ಖಂಡಿಸಿ ಏ.18ರ ಶನಿವಾರ ವಿವಿಧ ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ತುಮಕೂರಿನಲ್ಲಿ ಮಾತನಾಡಿದ ಜಗ್ಗೇಶ್, 'ಕುಡಿಯುವ ನೀರನ್ನು ಕಿತ್ತುಕೊಳ್ಳುವ ತಮಿಳುನಾಡು ಮನೋಭಾವ ಅವರಿಗೆ ಶೋಭೆ ತರುವುದಿಲ್ಲ' ಎಂದು ಕಿಡಿ ಕಾರಿದರು.

Jaggesh

'ನಮ್ಮ ಕಾವೇರಿ ನಮ್ಮ ನೀರನ್ನು ಬಳಸಿಕೊಳ್ಳಲು ತಮಿಳುನಾಡಿನವರನ್ನು ಏಕೆ ಕೇಳಬೇಕು?. ಇಂತಹ ಪರಿಸ್ಥಿತಿ ಎದುರಾದಾಗ ಕನ್ನಡಿಗರೆಲ್ಲರೂ ಒಂದಾಗಿ ಅವರಿಗೆ ಪ್ರತ್ಯುತ್ತರ ನೀಡಬೇಕು. ಅನಿವಾರ್ಯವಾಗಿ ಹಕ್ಕಿಗಾಗಿ ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದಿದೆ' ಎಂದು ಬೇಸರ ವ್ಯಕ್ತಪಡಿಸಿದರು.[ಕರ್ನಾಟಕ ಬಂದ್ : ಕ್ಷಣ-ಕ್ಷಣದ ಮಾಹಿತಿ]

'ಹಿಂದೆ ಅಣ್ಣಾವ್ರು ಇದ್ದಾಗ ನೆಲ, ಜಲ, ಭಾಷೆ ವಿಷಯ ಬಂದಾಗ ಹೋರಾಟಕ್ಕೆ ಧುಮುಕುತ್ತಿದ್ದರು. ಅಂತಹ ನಾಯಕತ್ವ ಇಂದು ನಮಗೆ ಸಿಗುತ್ತಿಲ್ಲಾ, ಆದರೆ, ಕನ್ನಡ ಚಿತ್ರರಂಗದ ಕಲಾವಿದರಾದ ನಾವು ನಾಡಿನ ವಿಷಯದಲ್ಲಿ ರಾಜಿ ಮಾಡಿಕೊಳ್ಳದೇ ಎಲ್ಲರೂ ಒಂದಾಗಬೇಕು' ಎಂದು ಕರೆ ನೀಡಿದರು.

English summary
Kannada actor and politician Jaggesh (jaggesh2) slams Tamil Nadu over Mekedatu drinking water project. On Saturday he said, why we need Tamil Nadu permission for project.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada