ರೀಲ್ ಮೇಲೆ ತಂದೆ ಪಾತ್ರ ಮಾಡುತ್ತಿದ್ದ ಪೋಷಕ ನಟ ರಾಜಶೇಖರ್, ರಿಯಲ್ ಲೈಫ್ ನಲ್ಲಿ ಮಗಳ ಸಮಾನದ ನಟಿಗೆ ಅಶ್ಲೀಲ ಮೆಸೇಜ್ ಕಳುಹಿಸಿ ಮೆಂಟಲ್ ಟಾರ್ಚರ್ ಕೊಟ್ಟಿದ್ದಾರೆ.
ಅಷ್ಟಕ್ಕೂ, ಈ ರಾಜಶೇಖರ್ ಯಾರಪ್ಪ ಅಂದ್ರೆ ಸ್ಯಾಂಡಲ್ ವುಡ್ ನಲ್ಲಿ ಸದ್ಯ ತಯಾರಾಗುತ್ತಿರುವ ಹೊಸ ಸಿನಿಮಾ 'ಐಸ್ ಮಹಲ್' ಚಿತ್ರದ ಪೋಷಕ ನಟ.
'ಐಸ್ ಮಹಲ್' ಚಿತ್ರದಲ್ಲಿ ಅಭಿನಯಿಸುತ್ತಿರುವ ನಾಯಕಿಗೆ ರಾಜಶೇಖರ್ ಅಸಭ್ಯ ಸಂದೇಶಗಳನ್ನು ರವಾನೆ ಮಾಡಿ ಮಾನಸಿಕ ಹಾಗೂ ಲೈಂಗಿಕ ಕಿರುಕುಳ ನೀಡಿದ್ದಾರಂತೆ.
'ಐಸ್ ಮಹಲ್' ಶೂಟಿಂಗ್ ವೇಳೆ ಟ್ರಾಕ್ಟರ್ ಪಲ್ಟಿ, ಪ್ರಾಣಾಪಾಯದಿಂದ ಸಹನಟ ಪಾರು
'ಐಸ್ ಮಹಲ್' ಚಿತ್ರದ ಶೂಟಿಂಗ್ ನಡೆಯುತ್ತಿದ್ದ ವೇಳೆ ನಿರ್ದೇಶಕ ಕಿಶೋರ್ ಹಾಗೂ ನಾಯಕಿ ನಡುವೆ ಅಕ್ರಮ ಸಂಬಂಧ ಕಟ್ಟಿದ ರಾಜಶೇಖರ್, ಇಬ್ಬರ ಬಗ್ಗೆ ಅಶ್ಲೀಲವಾಗಿ ಮಾತನಾಡುತ್ತಿದ್ದರಂತೆ. ಇದೇ ವಿಚಾರಕ್ಕೆ ಸಂಬಂಧ ಪಟ್ಟಂತೆ ಕನ್ಯತ್ವ ಪರೀಕ್ಷೆ ಮಾಡಿಸುವಂತೆ ನಟಿಗೆ ರಾಜಶೇಖರ್ ಮೆಸೇಜ್ ಕಳುಹಿಸಿದ್ದರಂತೆ. ಜೊತೆಗೆ ಬೆದರಿಕೆ ಕೂಡ ಹಾಕಿದ್ದರಂತೆ.
ರಾಜಶೇಖರ್ ರವರ ವರ್ತನೆಗೆ ಬೇಸತ್ತ ನಟಿ ಮಾಗಡಿ ರೋಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅಶ್ಲೀಲ ವರ್ತನೆ, ನಿಂದನೆ, ಅವಾಚ್ಯ ಶಬ್ದ ಬಳಸಿದ ಆರೋಪದ ಮೇಲೆ ರಾಜಶೇಖರ್ ಅವರನ್ನ ಮಾಗಡಿ ರೋಡ್ ಪೊಲೀಸರು ಬಂಧಿಸಿದ್ದರು. ಸದ್ಯ ಜಾಮೀನು ಸಿಕ್ಕಿರುವುದರಿಂದ ರಾಜಶೇಖರ್ ಬಿಡುಗಡೆ ಆಗಿದ್ದಾರೆ.
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ | Subscribe to Kannada Filmibeat.