For Quick Alerts
  ALLOW NOTIFICATIONS  
  For Daily Alerts

  ಸಂಪಿಗೆ ಚಿತ್ರಮಂದಿರದಲ್ಲಿ ತಮಿಳು ನಟ ವಿಜಯ್ ಸಿನಿಮಾ ಪ್ರದರ್ಶನ ರದ್ದು.!

  By Bharath Kumar
  |

  ಬೆಂಗಳೂರಿನ ಸಂಪಿಗೆ ಚಿತ್ರಮಂದಿರದ ಬಳಿ ಕನ್ನಡಿಗರ ಮೇಲೆ ತಮಿಳು ನಟ ವಿಜಯ್ ಅಭಿಮಾನಿಗಳಿಂದ ಹಲ್ಲೆಗೆ ಸಂಬಂಧಿಸಿದಂತೆ ಈಗ 'ಮೆರ್ಸಲ್' ಚಿತ್ರದ ಪ್ರದರ್ಶನ ರದ್ದುಗೊಳಿಸಲಾಗಿದೆ.

  ನಿನ್ನೆ (ಅಕ್ಟೋಬರ್ 17) ರಂದು ವಿಜಯ್ ಸಿನಿಮಾ ಬಿಡುಗಡೆ ಹಿನ್ನೆಲೆ ಚಿತ್ರಮಂದಿರದ ಎದುರು ಕಟೌಟ್ ಹಾಕಲಾಗುತ್ತಿದ್ದ ವೇಳೆ, ರಸ್ತೆಯಲ್ಲಿ ಚಲಿಸುತ್ತಿದ್ದ ಇಬ್ಬರು ಕನ್ನಡಿಗರು ಕಟೌಟ್ ನ ನೋಡಿದ್ದಾರೆ. ಈ ಕಾರಣಕ್ಕೆ ''ನಮ್ಮ ಬಾಸ್ ಕಟೌಟ್''ನ ತಲೆಎತ್ತಿ ನೋಡ್ತೀರಾ ಎಂದು ಹೇಳಿ ತಮಿಳಿಗರು ದೈಹಿಕ ಹಲ್ಲೆ ಮಾಡಿದ್ದರು.

  ಕನ್ನಡಿಗರ ಮೇಲೆ ಹಲ್ಲೆ: 'ಮೆರ್ಸಲ್' ಚಿತ್ರಕ್ಕೆ ಬಿಸಿ ಮುಟ್ಟಿಸಿದ ಹೋರಾಟಗಾರರು.!

  ಇದಾದ ಬಳಿಕ ಇಂದು ಬೆಳಿಗ್ಗೆ ಸಾರಾ ಗೋವಿಂದು, ಪ್ರವೀಣ್ ಶೆಟ್ಟಿ, ಶಿವರಾಮೇ ಗೌಡ ಸೇರಿದಂತೆ ಹಲವು ಕನ್ನಡ ಪರ ಸಂಘಟನೆ ಕಾರ್ಯಕರ್ತರು ಚಿತ್ರಮಂದಿರದ ಎದುರು ಪ್ರತಿಭಟನೆ ನಡೆಸಿದ್ದರು. ಬೆಳಿಗ್ಗೆ ಶೋ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಂಡಿತ್ತಾದರೂ, ಮಧ್ಯಾಹ್ನದ ನಂತರ 'ಮೆರ್ಸಲ್' ಪ್ರದರ್ಶನ ರದ್ದುಗೊಳಿಸಲಾಗಿದೆ.

  ತಮಿಳು ನಟ ವಿಜಯ್ ಅಭಿಮಾನಿಗಳಿಂದ ಕನ್ನಡಿಗರ ಮೇಲೆ ಹಲ್ಲೆ.!

  ತದ ನಂತರ ಚಿತ್ರಮಂದಿರಕ್ಕೆ ವಾಟಳ್ ನಾಗರಾಜ್ ಕೂಡ ಭೇಟಿ ಕೊಟ್ಟು ಈ ಹಲ್ಲೆ ಮಾಡಿದವರು ವಿರುದ್ಧ ಕಿಡಿಕಾರಿದ್ದಾರೆ. ಅಷ್ಟೇ ಅಲ್ಲದೇ ಆರೋಪಿಗಳನ್ನ ಬಂಧಿಸಿದೇ ಇದಲ್ಲಿ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ.

  English summary
  Tamil Actor Vijay Starrer Mersal Movie Show Cancelled in Sampige Theater in Banglore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X