For Quick Alerts
  ALLOW NOTIFICATIONS  
  For Daily Alerts

  ವಜ್ರಮುನಿ ಹಿಡಿಯಲು ಸಜ್ಜಾಯ್ತು ಶ್ರೀನಿ ಮತ್ತು ತಂಡ

  By Pavithra
  |
  ವಜ್ರಮುನಿ ಹಿಡಿಯಲು ಸಜ್ಜಾಯ್ತು ಶ್ರೀನಿ ಮತ್ತು ತಂಡ | Filmibeat Kannada

  ಶ್ರೀನಿವಾಸ ಕಲ್ಯಾಣ ಸಿನಿಮಾ ನಿರ್ದೇಶನ ಮಾಡಿ ನಾಯಕನಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ನಟ ಹಾಗೂ ನಿರ್ದೇಶಕ ಆರ್ ಜೆ ಶ್ರೀನಿ ತಮ್ಮ ಹೊಸ ಪ್ರಯೋಗವನ್ನ ಅಭಿಮಾನಿಗಳ ಮುಂದೆ ತಂದಿದ್ದಾರೆ. ಶ್ರೀನಿ ಬೀರ್‌ಬಲ್ ಎನ್ನುವ ಸಿನಿಮಾವನ್ನ ಮೂರು ಭಾಗಗಳಾಗಿ ನಿರ್ದೇಶನ ಮಾಡುತ್ತಿರುವುದು ಗೊತ್ತಿರುವ ವಿಚಾರ ಅದರಲ್ಲಿ ಮೊದಲನೇ ಭಾಗ 'ಫೈಂಡಿಂಗ್ ವಜ್ರಮುನಿ'. ಬೀರ್‌ಬಲ್ ಕೇಸ್ 1: ವಜ್ರಮುನಿ ಫೈಂಡಿಂಗ್ ನಲ್ಲಿ ಯಾರೆಲ್ಲಾ ಭಾಗಿ ಆಗಿದ್ದಾರೆ ಎನ್ನುವುದರ ಪರಿಚಯವನ್ನ ಟೀಸರ್ ಮೂಲಕ ಮಾಡಿಸಲಾಗಿದೆ.

  ಮದುವೆ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ಶ್ರುತಿ ಹರಿಹರನ್ಮದುವೆ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ಶ್ರುತಿ ಹರಿಹರನ್

  ಶ್ರೀನಿವಾಸ ಕಲ್ಯಾಣ ಸಿನಿಮಾದಲ್ಲಿ ಶ್ರೀನಿ ವಿಭಿನ್ನ ರೀತಿಯ ಹಾಡೊಂದನ್ನ ಚಿತ್ರೀಕರಿಸಿ ಗಾಂಧಿನಗರದ ಮಂದಿಯ ಗಮನ ಸೆಳೆದಿದ್ದರು. ಪ್ರೇಕ್ಷಕರು ಕೂಡ ಇದು ಬೇರೆಯದ್ದೇ ರೀತಿಯ ಪ್ರಯತ್ನ ಎಂದು ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದರು. ಅದರಂತೆಯೇ ಈಗ ವಿಭಿನ್ನ ರೀತಿಯಲ್ಲಿ ಟೀಸರ್ ಡಿಸೈನ್ ಮಾಡಿ ಪ್ರೇಕ್ಷಕರಿಗೆ ತಮ್ಮ ತಂಡವನ್ನ ಪರಿಚಯ ಮಾಡಿಸಿದ್ದಾರೆ.

  ಬೀರ್‌ಬಲ್- ಫೈಡಿಂಗ್ ವಜ್ರಮುನಿ ಸಿನಿಮಾವನ್ನ ಶ್ರೀನಿ ನಿರ್ದೇಶನ ಮಾಡುತ್ತಿದ್ದು ಟಿ ಆರ್ ಚಂದ್ರಶೇಖರ್ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಭರತ್ ಪರಶುರಾಮ್ ಕ್ಯಾಮೆರಾ ವರ್ಕ್ ಮಾಡುತ್ತಿದ್ದು ಕಲಾಚರಣ್ ಅವರ ಸಂಗೀತ ನಿರ್ದೇಶನ ಸಿನಿಮಾಗಿದೆ.

  ಕೋಕಾ ಕೋಲಾ ಹುಡುಗಿ ಈಗ ಬಾಲಿವುಡ್ ಸ್ಟಾರ್ ನಟಿಕೋಕಾ ಕೋಲಾ ಹುಡುಗಿ ಈಗ ಬಾಲಿವುಡ್ ಸ್ಟಾರ್ ನಟಿ

  ರುಕ್ಮಿಣಿ ವಸಂತ್ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದು ಇವರ ಜೊತೆಯಲ್ಲಿ ವಿನೀತ್, ಸುಜಯ್ ಶಾಸ್ತ್ರಿ, ಸುರೇಶ್ ಹೆಬ್ಳಿಕರ್, ಮಧುಸೂಧನ್ ರಾವ್, ಕೀರ್ತಿ ಭಾನು, ಕೃಷ್ಣ ಹೆಬ್ಬಾಳೆ ಹೀಗೆ ಇನ್ನೂ ಅನೇಕರು ಅಭಿನಯಿಸುತ್ತಿದ್ದಾರೆ.

  ಟೈಂ-ಥ್ರಿಲ್ಲರ್ ಕಥೆಯನ್ನ ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ಮಾಡುತ್ತಿದ್ದಾರೆ ನಿರ್ದೇಶಕ ಶ್ರೀನಿ. ಶ್ರೀನಿವಾಸ ಕಲ್ಯಾಣ ಸಿನಿಮಾದಲ್ಲಿ ಒಂದಿಷ್ಟು ತಾಂತ್ರಿಕ ಪ್ರಯೋಗಗಳನ್ನ ಮಾಡಿದ್ದ ಶ್ರೀನಿ ಬೀರ್‌ಬಲ್ ನಲ್ಲಿಯೂ ಹೊಸ ರೀತಿ ಪ್ರಯೋಗಗಳನ್ನ ಮಾಡುತ್ತಿದ್ದಾರೆ.

  English summary
  MG Srinivas directed Birbal movie teaser released, The cast and technician introduced the film in Teaser Previously Srinivas directed the Srinivasakalyana movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X