For Quick Alerts
  ALLOW NOTIFICATIONS  
  For Daily Alerts

  ದರ್ಶನ್ 'ಬೃಂದಾವನ'ಕೆ ಬಂದ ಹಾಸನದ ಮಿಲನಾ

  By Rajendra
  |
  ಹೆಸರಿನಲ್ಲೇ ಏನೋ ಒಂಥರಾ ಸೆಳೆಯುವ ಆಕರ್ಷಣೆ. ನೋಡಲು ಪಕ್ಕದ ಮನೆ ಹುಡುಗಿ ಎಂಬ ಭಾವ. ಕಣ್ಣಿನಲ್ಲೇ ಕಾಮನಬಿಲ್ಲು ಮೂಡಿಸುವ ಸೌಂದರ್ಯ. ಈಕೆಯ ಹೆಸರು ಮಿಲನಾ. ಊರು ಹಾಸನ. ಅಭಿನಯಿಸಲಿರುವ ಚಿತ್ರ ಬೃಂದಾವನ.

  ಚಾಲೆಂಜಿಂಗ್ ಸ್ಟಾರ್ ಮುಖ್ಯಭೂಮಿಕೆಯಲ್ಲಿರುವ 'ಬೃಂದಾವನ' ಚಿತ್ರದ ನಾಯಕಿ ಬದಲಾಗಿದ್ದಾರೆ. ಮಲಯಾಳಂ ತಾರೆ ಮುಕ್ತಾ ಜಾಗಕ್ಕೆ ಮಿಲನಾ ಹೊಸದಾಗಿ ಆಯ್ಕೆಯಾಗಿದ್ದಾರೆ. ಡೇಟ್ಸ್ ಪ್ರಾಬ್ಲಂ ಕಾರಣ ಮುಕ್ತಾ ಅವರು ಚಿತ್ರದಲ್ಲಿ ಅಭಿನಯಿಸಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.

  ಇನ್ನು ಮಿಲನಾ ಅವರ ಬಗ್ಗೆ ಹೇಳಬೇಕು ಎಂದರೆ, ಈಕೆಯ ಪೂರ್ಣ ಹೆಸರು ಮಿಲನಾ ನಾಗರಾಜ್. ಓದಿದ್ದು ಬಿ.ಇ ಕಂಪ್ಯೂಟರ್ ಸೈನ್ಸ್. ಮಿಸ್ ಕರ್ನಾಟಕ ಸ್ಪರ್ಧೆಯಲ್ಲೂ ಭಾಗವಹಿಸಿದ್ದರು. ಈಗಾಗಲೆ ಎರಡು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

  ಮಿಲನಾ ಅಭಿನಯದ 'ಸವಾರಿ ಟು 1000 ಎಡಿ' ಹಾಗೂ 'ನಮ್ ದುನಿಯಾ ನಮ್ ಸ್ಟೈಲ್' ಚಿತ್ರಗಳು ಬಿಡುಗಡೆಯಾಗಬೇಕಿದೆ. ನಟನೆಯ ಜೊತೆಗೆ ಈಕೆಯ ಒಳ್ಳೆಯ ಈಜು ಪಟು ಸಹ.

  ಕೆ.ಮಾದೇಶ್ ಆಕ್ಷನ್ ಕಟ್ ಹೇಳುತ್ತಿರುವ ಬೃಂದಾವನ ಚಿತ್ರ ತೆಲುಗಿನ ಹಿಟ್ ಚಿತ್ರ ಬೃಂದಾವನಂ ರೀಮೇಕ್. ಈ ಚಿತ್ರದಲ್ಲಿ ಇಬ್ಬರು ನಾಯಕಿಯರು. ಇನ್ನೊಬ್ಬರು ಒಂದು ಕಾಲದ ತಾರೆ ರಾಧಾ ಅವರ ಮಗಳು ಕಾರ್ತಿಕಾ ನಾಯರ್. (ಏಜೆನ್ಸೀಸ್)

  English summary
  Actress Milana Nagaraj replaces Muktha for Darshan lead film Brindavana. Milana hailing from Hassan district. She is BE computer science graduate. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X