twitter
    For Quick Alerts
    ALLOW NOTIFICATIONS  
    For Daily Alerts

    ಇನ್ಮುಂದೆ ಬಸ್‌ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ಮಿನಿ ಥಿಯೇಟರ್ ಗಳು.!

    By ಮಂಜುನಾಥ್ ಭದ್ರಶೆಟ್ಟಿ
    |

    ಇನ್ಮೇಲೆ ರಾಜ್ಯದ ಜನನಿಬಿಡ ಪ್ರದೇಶಗಳಾದ ಬಸ್‌ ನಿಲ್ದಾಣ, ರೈಲು ನಿಲ್ದಾಣ ಹಾಗೂ ಮಾರುಕಟ್ಟೆ, ಶಾಪಿಂಗ್ ಕಾಂಪ್ಲೆಕ್ಸ್ ಸ್ಥಳಗಳಲ್ಲಿ ಕಿರು ಸಿನಿಮಾ ಮಂದಿರಗಳು (ಮಿನಿ ಥಿಯೇಟರ್) ತಲೆ ಎತ್ತಲಿವೆ.

    ಕಿರು ಸಿನಿಮಾ ಮಂದಿರಗಳಿಗೆ ಹೆಚ್ಚು ಪ್ರೋತ್ಸಾಹ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಸಂಬಂಧ ಗೃಹ ಇಲಾಖೆ ನಿಯಮ ಪ್ರಕಟಿಸಿದೆ. ಈಗಾಗಲೇ ಇರುವ ಕರ್ನಾಟಕ ಸಿನಿಮಾ ನಿಯಮ-2014 ನಲ್ಲಿ, ಕಿರು ಚಿತ್ರಮಂದಿರ ನಿರ್ಮಾಣ, ಅದರ ಲೈಸೆನ್ಸ್ ಪಡೆದುಕೊಳ್ಳುವಿಕೆ ಬಗ್ಗೆ ಸಾರ್ವಜನಿಕರಿಂದ ಸಲಹೆ ಹಾಗೂ ಆಕ್ಷೇಪಣೆಗಳನ್ನು ಕೇಳಿ ಗೃಹ ಇಲಾಖೆ ಅಧಿಸೂಚನೆ ಹೊರಡಿಸಿದೆ.

    mini-theaters-are-opening-shortly-in-public-places

    ಸುಮಾರು 4 ಸಾವಿರ ಚದರಡಿ ಇರುವ ಚಿತ್ರಮಂದಿರವನ್ನು ಜನನಿಬಿಡ ಸ್ಥಳಗಳಲ್ಲಿ.. ಅಂದರೆ, ಬಸ್‌ ನಿಲ್ದಾಣ, ರೈಲು ನಿಲ್ದಾಣ, ಶಾಪಿಂಗ್ ಕಾಂಪ್ಲೆಕ್ಸ್‌ಗಳಲ್ಲಿ, ಸಮಾರಂಭ ಕೇಂದ್ರಗಳಲ್ಲಿ ಸ್ಥಾಪಿಸಬಹುದು.

    ಜನ ವಸತಿ ಪ್ರದೇಶಗಳಲ್ಲಿ ಇಂತಹ ಸಿನಿಮಾ ಮಂದಿರಗಳ ನಿರ್ಮಾಣಕ್ಕೆ ಅವಕಾಶ ಇಲ್ಲ, ಜನನಿಬಿಡ ಗ್ರಾಮಾಂತರ ಪ್ರದೇಶಗಳಲ್ಲಿಯೂ ಮಿನಿ ಥಿಯೇಟರ್ ಗಳನ್ನು ಸ್ಥಾಪಿಸಬಹುದಾಗಿದೆ ಎಂದು ಗೃಹ ಇಲಾಖೆಯ ತಿಳಿಸಿದೆ.

    English summary
    Mini Theaters Are Opening Shortly in public places.
    Tuesday, January 7, 2020, 7:00
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X